/newsfirstlive-kannada/media/post_attachments/wp-content/uploads/2025/07/CARS_SALE.jpg)
ಕಾರ್.. ಕಾರ್.. ಎಲ್ನೋಡಿ ಕಾರ್​. ಈಗ ಬರೀ ಈ ಲೈನ್​ ಬೆಂಗಳೂರು ಅಷ್ಟೇ ಅಲ್ಲ, ಬದಲಾಗಿ ಇಡೀ ದೇಶದ TIER-1, 2 ನಗರಗಳ ಪಾಡು ಕೂಡ ಇದೇ ಆಗಿದೆ. ಯಾಕಂದ್ರೆ ಜನರಿಗೆ ಈಗ ಕಾರು​ ಖರೀದಿ ಮಾಡೋದು ITS A MATTER OF PRIDE ರೀತಿ ಆಗಿದೆ. ಅವಶ್ಯಕತೆಗಿಂತ ಹೆಚ್ಚಾಗಿ ಅದು ಅಂತಸ್ತಿನ ಪ್ರಶ್ನೆ. ಸೋ ಈ ಗ ನೆಕ್ಸ್ಟ್​​ ಟಾಪಿಕ್, ಖರೀದಿ ಮಾಡೋ ಹಾಗಿದ್ರೆ, ಯಾವ ಕಾರ್​ನ ಖರೀದಿಸಬೇಕು?.
ಇದರಲ್ಲೂ ಕೂಡ ಅಣೇಕ ವಿಷ್ಯಗಳನ್ನು ಜನ ಗಮನಿಸುತ್ತಾರೆ. ಮೊದಲನೆಯದ್ದಾಗಿ, ​ಸ್ಪೆಸಿಫಿಕೇಷನ್ಸ್​. ಅದಾದ ಮೇಲೆ ಬಜೆಟ್ ಅದು ಇದೂ. ಇದಾದ ಮೇಲೆ ಚಿಕ್ಕ ಚಿಕ್ಕ ವಿಷ್ಯಗಳು, ಕಲರ್​, ಲೋಡೆಡ್, ಫುಲ್ಲಿ ಲೋಡೆಡ್​ ಹೀಗೆ.. ಇವೆಲ್ಲವನ್ನೂ ಕೂಡ ಫೈನಲೈಸ್​ ಮಾಡೀನೇ ಒಂದು ಕಾರ್​ನ ಜನ ಮೆಚ್ಚೋದು, ಇಷ್ಟ ಪಟ್ಟು ಕೊಂಡುಕೊಳ್ಳೋದು. ಆದ್ರೆ ಈ ಎಲ್ಲಾ ವಿಷ್ಯದಲ್ಲೂ ಟಾಪ್​ ಸ್ಥಾನದಲ್ಲಿ ಮಿಂಚಿ, ನಂತರ ಕಳೆದ ತಿಂಗಳು ಹೈಯೆಸ್ಟ್​ ಸೇಲ್​ ಆಗಿರೋ ಕಾರ್ ಯಾವುದು ಗೊತ್ತಾ?.
ಹೆಚ್ಚು ಮಾರಾಟವಾದ ಕಾರು?
ಅದುವೇ ಹ್ಯೂಂಡೈ ಕ್ರೆಟಾ.. ಒಂದನ್ನು ಗಮನಿಸಿ ಇತ್ತೀಚಿನ ದಿನಗಳಲ್ಲಿ, ಈ ಕಾಂಪ್ಯಾಕ್ಟ್​ ಎಸ್​ಯುವಿ ವಿಭಾಗದಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿರೋದು HYUNDAI CRETA ಆಗಿದೆ. ಇದರ ಲುಕ್ಸ್​ ಅತೀ ಹೆಚ್ಚು ಸೆಳೀತಾ ಇರೋದು. ಹಾಗೂ ಇದರ ಜೊತೆಗೆ ಬರುವ ಸ್ಪೆಸಿಫಿಕೇಷನ್ಸ್​, ಪೀಚರ್ಸ್​ ಎಲ್ಲವೂ ಆಟೋಮೊಬೈಲ್​ ಪ್ರಿಯರನ್ನು ಮಾರ್ಕೆಟ್​​ನತ್ತ ಅಟ್ರ್ಯಾಕ್ಟ್​ ಮಾಡ್ತಾ ಇದೆ. ಹಾಗಿದ್ರೆ ಕೇವಲ ಈ ಒಂದು ಕಾರ್, ತನ್ನ ಪ್ರತಿಸ್ಪರ್ಧಿ ಕಂಪನಿಗಳ ಕಾರ್​ಗಳನ್ನು ಹಿಂದಿಕ್ಕಿ ಅತ್ಯುನ್ನತ ಸೇಲ್ಸ್​ ಮಾಡಿರೋದು.
15,786 ಕಾರ್​ಗಳು ಮಾರಾಟ ಆಗಿವೆ
ಮತ್ತೊಂದು ಇಂಟ್ರೆಸ್ಟಿಂಗ್​ ವಿಚಾರ ಏನೆಂದ್ರೆ ಕಳೆದ ತಿಂಗಳು ಅಂದ್ರೆ ಜೂನ್ 2025ರಲ್ಲಿ ಎಲ್ಲ ಕಂಪನಿಗಳ ಕಾರ್​ಗಳ ಮಾರಾಟ ಕುಸಿತವಾದ್ರೆ ಕೇವಲ ​ HYUNDAI CRETA ಕಾರಿನ ಸೇಲ್ಸ್​ ಮಾತ್ರ ಏರಿಕೆ ಕಂಡಿದೆ. ಇಡೀ ದೇಶದಲ್ಲೇ HYUNDAI CRETA, 15,786 ಕಾರ್​ಗಳು ಮಾರಾಟವಾಗಿದ್ರೆ ಇದರ ನಂತರದ ಸ್ಥಾನದಲ್ಲಿ MARUTI DZIRE 15,484 ಕಾರ್​ಗಳನ್ನು ಸೇಲ್​ ಮಾಡಿದೆ. ಇದಾದ ಮೇಲೆ MARUTI BREZZAದ 14,507 ಕಾರುಗಳು ಮಾರಾಟವಾಗಿವೆ.
MARUTI ERTIGAದ 14151 ಕಾರುಗಳು ಕಳೆದ ಒಂದು ತಿಂಗಳಿನಲ್ಲಿ ಬಿಕರಿಯಾಗಿವೆ. ಐದನೇ ಸ್ಥಾನದಲ್ಲಿ MARUTI SWIFT ಕಾರು 13275ದಷ್ಟು ಸೇಲ್​ ಆಗಿವೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ HYUNDAI CRETAದ ನಂತರದ ಸ್ಥಾನಗಳನ್ನು MARUTI ಕಂಪನಿಯ ಕಾರ್​ಗಳು ಪಡೆದಿವೆ ಆದ್ರೂ ಕೂಡ, ಕಳೆದ ಜೂನ್​​​ನ ಹಿಂದಿನ ತಿಂಗಳ ಅಂದ್ರೆ ಮೇ ತಿಂಗಳಿಂದ ಜೂನ್​ ತಿಂಗಳಿನವರೆಗೆ ಸೇಲ್ಸ್​ ನೋಡಿದರೆ, ಆ ಎಲ್ಲಾ ಕಾರುಗಳ ಸೇಲ್ಸ್​ ವ್ಯಾಲ್ಯೂನಲ್ಲಿ ಕುಸಿತ ಕಂಡಿದೆ.
ಆದ್ರೆ HYUNDAI CRETA ಹೊರತುಪಡಿಸಿ.. ಇದೊಂದೇ ಕಾರ್​ ಪಾಸೀಟಿವ್​ ಸೇಲ್ಸ್​ ಕಂಡಿರೋದು. ಬಹುಷಃ HYUNDAI CRETAd ಸೇಲ್ಸ್​ ನೋಡ್ತಾ ಇದ್ರೆ ಮುಂದಿನ ಎರಡು- ಮೂರು ತಿಂಗಳುಗಳ ಕಾಲ ಈ ಅಗ್ರಸ್ಥಾನವನ್ನು ಇದು ಕಬ್ಜಾ ಮಾಡೋದ್ರಲ್ಲಿ ಡೌಟೇ ಇಲ್ಲ ಅಂತಿದ್ದಾರೆ ಆಟೋಮೊಬೈಲ್​ ಎಕ್ಸ್​ಪರ್ಟ್ಸ್.
ವಿಶೇಷ ವರದಿ:ರಾಹುಲ್ ದಯಾನ್,ನ್ಯೂಸ್​​ಫಸ್ಟ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ