ತೃತೀಯ ಲಿಂಗಿ ಆಗಿದ್ದ ಮಾಜಿ ಕ್ರಿಕೆಟರ್​ನ ಮಗ.. ಮಹಿಳಾ ತಂಡದಲ್ಲಿ ಚಾನ್ಸ್​ ಕೊಡಿ ಅಂತ ಒತ್ತಾಯ!

author-image
Bheemappa
Updated On
ತೃತೀಯ ಲಿಂಗಿ ಆಗಿದ್ದ ಮಾಜಿ ಕ್ರಿಕೆಟರ್​ನ ಮಗ.. ಮಹಿಳಾ ತಂಡದಲ್ಲಿ ಚಾನ್ಸ್​ ಕೊಡಿ ಅಂತ ಒತ್ತಾಯ!
Advertisment
  • ಭಾರತದ ಮಹಿಳಾ ಕ್ರಿಕಟರ್​ ತಂಡದಲ್ಲಿ ಆಡಲು ನಾನು ಅರ್ಹಳು
  • ಕ್ರಿಕೆಟ್​ ಕ್ರೇತ್ರದಲ್ಲಿ ತೃತೀಯ ಲಿಂಗಿ ಆಟಗಾರರಿಗೂ ಅವಕಾಶ ಕೊಡಿ
  • ಭಾರತ ತಂಡದ ಮಾಜಿ ಬ್ಯಾಟ್ಸ್​ಮನ್​ ಮಗ ಈಗ ತೃತೀಯ ಲಿಂಗಿ

ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್​ಮನ್ ಹಾಗೂ ಕಾಮಿಂಟೇಟರ್​ (commentator) ಅವರ ಮಗಳು ಅನಯಾ ಬಂಗಾರ್ ಅವರು ಐಸಿಸಿ ಹಾಗೂ ಬಿಸಿಸಿಐ ಮುಂದೆ ವಿಶೇಷ ಮನವಿ ಇಟ್ಟಿದ್ದಾರೆ. ತೃತೀಯ ಲಿಂಗಿ ಕ್ರಿಕೆಟರ್​ಗಳನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಮಹಿಳಾ ತಂಡದಲ್ಲಿ ಆಡಲು ನಾನು ಕೂಡ ಅರ್ಹಳು ಎಂದು ಹೇಳಿದ್ದಾರೆ.

publive-image

ಆರ್ಯನ್ ಬಂಗಾರ್ ಮೊದಲು ಗಂಡಾಗಿದ್ದರು. ಆದರೆ ನಂತರ ಹಾರ್ಮೋನ್ ರಿಪ್ಲೇಸ್​ಮೆಂಟ್ ಥೆರಪಿ (ಹೆಚ್​​​ಆರ್​ಟಿ)ಗೆ ಒಳಗಾಗಿ ಈಗ ಅನಯಾ ಬಂಗಾರ್ ಆಗಿ ಬದಲಾಗಿದ್ದಾರೆ. ನಾನು ಮಹಿಳಾ ತಂಡದಲ್ಲಿ ಆಡಲು ಅರ್ಹಳು ಆಗಿದ್ದೇನೆ. ಸದ್ಯ ಕ್ರಿಕೆಟ್​​​ ಕ್ರೇತ್ರದಲ್ಲಿ ತೃತೀಯ ಲಿಂಗಿ ಆಟಗಾರರನ್ನು ಪರಿಗಣಿಸುವಂತೆ, ಬೆಂಬಲಿಸುವಂತೆ ಐಸಿಸಿ ಹಾಗೂ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ತಮ್ಮ ಅಧಿಕೃತ ಇನ್​ಸ್ಟಾದ ವಿಡಿಯೋದಲ್ಲಿ 8 ಪುಟಗಳ ಕ್ರೀಡಾಪಟು ಪರೀಕ್ಷಾ ವರದಿ (Athlete Testing Report)ಯನ್ನು ಹಂಚಿಕೊಂಡಿದ್ದಾರೆ. ಒಂದು ವರ್ಷ ಹೆಚ್​​​ಆರ್​ಟಿ ಥೆರಪಿ ಪೂರ್ಣಗೊಳಿಸಿದ ನಂತರ ಮ್ಯಾಂಚೆಸ್ಟರ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಸಹಯೋಗ ಹೊಂದಿದ್ದಾಗಿ ಅನಯಾ ತಿಳಿಸಿದ್ದಾರೆ.

ಅನಯಾ ಅವರನ್ನು ವಿಶ್ವವಿದ್ಯಾಲಯವು ಪರೀಕ್ಷೆಗೆ ಒಳಪಡಿಸಿದೆ. ಅವರ ಸ್ನಾಯು ಶಕ್ತಿ, ಸಹಿಷ್ಣುತೆ, ಗ್ಲೂಕೋಸ್, ಆಕ್ಸಿಜನ್ ಮಟ್ಟ ಎಲ್ಲವೂ ಮಹಿಳೆಯರ ಸಾಮರ್ಥ್ಯದಂತೆ ಇದೆ. ಇವರ ಶಕ್ತಿ ಸಾಮರ್ಥ್ಯ ಮಹಿಳಾ ಕ್ರೀಡಾಪಡುಗಳಂತೆ ಹೋಲುತ್ತದೆ ಎಂದು ಹೇಳಿದೆ. ಇದೇ ಮೊದಲ ಬಾರಿಗೆ ನಾನು ಟ್ರಾನ್ಸ್​ ವುಮೆನ್​ ಆಗಿ ಬದಲಾದ ನನ್ನ ವೈಜ್ಞಾನಿಕ ವರದಿ (Scientific Report)ಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಅನಯಾ ಹೇಳಿದ್ದಾರೆ.

ಇದನ್ನೂ ಓದಿ:ಜಡ್ಜ್​ ಮನೆಯಲ್ಲಿ ನೋಟಿನ ರಾಶಿಗೆ ಬೆಂಕಿ ಬಿದ್ದ ಕೇಸ್​; ತನಿಖಾ ಸಮಿತಿಯ ವರದಿಯಲ್ಲಿ ಏನಿದೆ?

publive-image

2023ರ ಏಕದಿನ ವಿಶ್ವಕಪ್​ ನಂತರ ನಡೆದ ಐಸಿಸಿ ಮಂಡಳಿಯ ಸಭೆಯಲ್ಲಿ ತೃತೀಯ ಲಿಂಗಿ ಕ್ರಿಕೆಟಿಗರು ಮಹಿಳಾ ಕ್ರಿಕೆಟ್​​ನಲ್ಲಿ ಭಾಗವಹಿಸಲು ಅವಕಾಶ ಇಲ್ಲ ಎಂದು ನಿಷೇಧ ಜಾರಿಗೆ ತರಲಾಗಿದೆ. ಆದರೆ ಈಗ ತೃತೀಯ ಲಿಂಗಿ ಕ್ರೀಡಾಪಟುವಾಗಿ ಬದಲಾದ ಮಾಜಿ ಆಟಗಾರನ ಮಗಳು ಅನಯಾ, ತನ್ನ 8 ಪುಟಗಳ ವೈಜ್ಞಾನಿಕ ವರದಿಯನ್ನು ಐಸಿಸಿ ಹಾಗೂ ಬಿಸಿಸಿಐಗೆ ಸಲ್ಲಿಸಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment