newsfirstkannada.com

ನಾನು ಓಡಿ ಹೋಗುವ ಮಲಾಲ ಅಲ್ಲ, ಭಾರತದಲ್ಲಿ ಸ್ವತಂತ್ರಳಾಗಿದ್ದೇನೆ; ಬ್ರಿಟನ್ ಸಂಸತ್​ನಲ್ಲಿ ಹೃದಯಗೆದ್ದ ಕಾಶ್ಮೀರದ ಪತ್ರಕರ್ತೆ

Share :

Published February 24, 2024 at 10:38am

    ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಕಾಶ್ಮೀರದ ಪ್ರತಕರ್ತೆ

    ‘ಸಂಕಲ್ಪ ದಿವಸ್' ಸ್ಮರಣಾರ್ಥ ಬ್ರಿಟಿಷ್ ಸಂಸತ್ ಭವನದಲ್ಲಿ ಕಾರ್ಯಕ್ರಮ

    ಬ್ರಿಟನ್ ಸಂಸತ್​​ನಲ್ಲಿ ಭಾರತದ ಪತ್ರಕರ್ತೆ ಮಾಡಿದ ಭಾಷಣದಲ್ಲಿ ಹೇಳಿದ್ದೇನು?

ಬ್ರಿಟಿಷ್ ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತೆ ಯಾನಾ ಮಿರ್ (Yana Mir) ಕೋಟ್ಯಾಂತರ ಭಾರತೀಯ ಹೃದಯವನ್ನು ಗೆಲ್ಲುವ ಮೂಲಕ ಶಹಬ್ಬಾಶ್ ಎನಿಸಿಕೊಂಡಿದ್ದಾರೆ. ಇಂದು ಪತ್ರಕರ್ತೆ ಯಾನಾ ಮೀರ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡಿಂಗ್​ನಲ್ಲಿದ್ದು, ಕೋಟಿ ಕೋಟಿ ಭಾರತೀಯರು ಆಕೆಯನ್ನು ಕೊಂಡಾಡ್ತಿದ್ದಾರೆ.

ಯಾನಾ ಮಿರ್ ಹೇಳಿದ್ದೇನು..?
‘ಸಂಕಲ್ಪ ದಿವಸ್’ ಸ್ಮರಣಾರ್ಥ ಬ್ರಿಟಿಷ್ ಸಂಸತ್ ಭವನದಲ್ಲಿ ಜಮ್ಮು ಕಾಶ್ಮೀರ ಸ್ಟಡಿ ಸೆಂಟರ್ ಯುಕೆ (ಜೆಕೆಎಸ್‌ಸಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಾನಾ ‘ವೈವಿಧ್ಯತೆಯ ರಾಯಭಾರಿ’ (ಡೈವರ್ಸಿಟಿ ಅಂಬಾಸಿಡರ್) ಪ್ರಶಸ್ತಿಯನ್ನು ಸ್ವೀಕರಿಸಿದರು. ನಂತರ ಮಾತನಾಡಿದ ಯಾನಾ, ‘ನಾನು ಮಲಾಲಾ ಯೂಸುಫ್‌ಜೈ ಅಲ್ಲ. ಏಕೆಂದರೆ ನನ್ನ ದೇಶ ಭಾರತದಲ್ಲಿ, ಭಾರತದ ಭಾಗವಾಗಿರುವ ನನ್ನ ತವರು ಕಾಶ್ಮೀರದಲ್ಲಿ ಸ್ವತಂತ್ರ ಮತ್ತು ಸುರಕ್ಷಿತವಾಗಿದ್ದೇನೆ. ನಾನು ಎಂದಿಗೂ ದೇಶಬಿಟ್ಟು ಓಡಿಹೋಗುವುದಿಲ್ಲ ಎಂದು ಹೇಳಬಲ್ಲೆ ಎಂದಿದ್ದಾರೆ.

ಅಂದ್ಹಾಗೆ ಇಂದು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಹಿಂದೆಂದಿಗಿಂತಲೂ ಸುಧಾರಿಸಿದೆ. ಅಲ್ಲಿರುವ ಜನಸಾಮಾನ್ಯರು ಸುರಕ್ಷಿತರಾಗಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನದ ಪರಿಸ್ಥಿತಿ ತುಂಬಾನೇ ಶೋಚನೀಯವಾಗಿದೆ. ಈ ವಿಚಾರಕ್ಕೆ ಯಾನಾ ಮಿರ್ ಹೇಳಿಕೆ ಮತ್ತಷ್ಟು ಸಾಕ್ಷ್ಯಾಧಾರವನ್ನು ನೀಡುತ್ತಿದೆ.

ಪಾಕ್ ತೊರೆದಿರುವ ಮಲಾಲಾ
ಅಂದು ತಾಲಿಬಾನಿಗಳು ಹೆಣ್ಮಕ್ಕಳ ಶಿಕ್ಷಣವನ್ನು ನಿಷೇಧಿಸಿದ್ದರು. 2012 ಅಕ್ಟೋಬರ್ 9 ರಂದು ಮಲಾಲಾ ಯೂಸುಫ್‌ಜಾಯ್, ಶಾಲೆಗೆ ಹೋಗಿ ವಾಪಸ್ ಬರುತ್ತಿದ್ದಾಗ ತಾಲಿಬಾನ್ ಉಗ್ರರು ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಕೆಯ ತಲೆ ಮತ್ತು ಕುತ್ತಿಗೆಗೆ ಏಟು ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಕೊನೆಗೆ ಮಲಲಾ ಪಾಕಿಸ್ತಾನವನ್ನು ತೊರೆದರು. ಬಳಿಕ ಮಾನವ ಹಕ್ಕುಗಳು ಮತ್ತು ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಧ್ವನಿಯಾದರು, ಹೀಗಾಗಿ ಅವರು ಜಾಗತಿಕ ಐಕಾನ್ ಆಗಿ ಮಾರ್ಪಟ್ಟರು.

ಭಾರತೀಯ ಸೇನೆ ಕೊಂಡಾಡಿದ ಯಾನಾ ಮಿರ್
ಇದೇ ವೇಳೆ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸೆಗೆ ಶಾಶ್ವತವಾಗಿ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿರುವ ಭಾರತೀಯ ಸೇನೆಯ ಶ್ರಮವನ್ನು ಕೊಂಡಾಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ಪಡೆಯುವ ಭಾರತದ ಹಕ್ಕನ್ನು ಕೂಡ ಒತ್ತಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಕಾಶ್ಮೀರದ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಅವರು ಮಾಡುವ ಸುದ್ದಿಗಳನ್ನು ನಾನು ವಿರೋಧಿಸುತ್ತೇನೆ. ಅವರು ಯಾರೂ ಕೂಡ ಕಾಶ್ಮೀರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಹೀಗಿದ್ದೂ ಕಾಶ್ಮಿರದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅಪಪ್ರಚಾರ ಮಾಡುತ್ತಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಅನ್​​ ವಾಂಟೆಡ್ ಸೆಲೆಕ್ಟೀವ್ ವಿಚಾರಗಳನ್ನು ಇಟ್ಟುಕೊಂಡು ಚರ್ಚೆ ಮಾಡೋದನ್ನು ನಿಲ್ಲಿಸಬೇಕು. ಇಂಡಿಯನ್ ಸೊಸೈಟಿಯನ್ನು ಪೋಲರೈಸ್ಡ್ ಮಾಡೋದನ್ನು ನಿಲ್ಲಿಸಬೇಕು. ಕಾಶ್ಮಿರದ ಸಾವಿರಾರು ತಾಯಂದಿರರು ಉಗ್ರರಿಂದ ಸಾವನ್ನಪ್ಪಿದ್ದಾರೆ ಎಂದರು. ಇನ್ನು, ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಗಣ್ಯರು ಪಾಲ್ಗೊಂಡಿದ್ದರು. ಯುಕೆ ಸಂಸತ್ತಿನ ಸದಸ್ಯರು, ಸ್ಥಳೀಯ ಕೌನ್ಸಿಲರ್‌ಗಳು, ಸಮುದಾಯ ಮುಖಂಡರು, ಇತರೆ ಗಣ್ಯರು ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಓಡಿ ಹೋಗುವ ಮಲಾಲ ಅಲ್ಲ, ಭಾರತದಲ್ಲಿ ಸ್ವತಂತ್ರಳಾಗಿದ್ದೇನೆ; ಬ್ರಿಟನ್ ಸಂಸತ್​ನಲ್ಲಿ ಹೃದಯಗೆದ್ದ ಕಾಶ್ಮೀರದ ಪತ್ರಕರ್ತೆ

https://newsfirstlive.com/wp-content/uploads/2024/02/YANA-MIR-1.jpg

Load More