newsfirstkannada.com

ಲೇಟ್​ ಆಗಿ ಬಂದಿದ್ದಕ್ಕೆ ಪರೀಕ್ಷೆಗೆ ಕೂರಿಸದ ಟೀಚರ್​; ಡ್ಯಾ​​ಮ್​​ಗೆ ಜಿಗಿದು ವಿದ್ಯಾರ್ಥಿ ಸಾವು

Share :

Published March 1, 2024 at 6:08am

  ಮೊದಲ ಬಾರಿ ಪರೀಕ್ಷೆಯಿಂದ ತಪ್ಪಿಸಿಕೊಂಡೆ ಎಂದ ಸ್ಟುಡೆಂಟ್

  ವಿದ್ಯಾರ್ಥಿ ಬರೆದಿರುವ ಡೆತ್​ನೋಟ್​ನಲ್ಲಿ ಏನೇನು ಇದೆ ಗೊತ್ತಾ?

  ಕರುಳು ಕಿತ್ತು ಬರುತ್ತೆ ವಿದ್ಯಾರ್ಥಿ ಬರೆದಿರುವ ಡೆತ್​ನೋಟ್ ಓದಿದ್ರೆ

ಹೈದರಾಬಾದ್: ತಡವಾಗಿ ಬಂದಿದ್ದಕ್ಕೆ ಪರೀಕ್ಷೆ ಬರೆಯಲು ಟೀಚರ್ ಅನುಮತಿ ಕೊಡದ ಕಾರಣ ಡೆತ್​ನೋಟ್ ಬರೆದಿಟ್ಟು ವಿದ್ಯಾರ್ಥಿ ಒಬ್ಬ ಸತ್ನಾಳ ಡ್ಯಾಮ್​ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯು ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಸತ್ನಾಲಾ ಅಣೆಕಟ್ಟಿನಲ್ಲಿ ನಡೆದಿದೆ.

11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಟೇಕುಂ ಶಿವ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಿದ್ಯಾರ್ಥಿಯ ಮೃತದೇವನ್ನು ಕಾರ್ಯಾಚರಣೆ ಮೂಲಕ ಡ್ಯಾಮ್​ನ ನೀರಿನಿಂದ ಹೊರ ತೆಗೆಯಲಾಗಿದೆ. ಆತ್ಮಹತ್ಯೆಗೂ ಮೊದಲೇ ವಿದ್ಯಾರ್ಥಿ ಬರೆದಿಟ್ಟ ಡೆತ್​ನೋಟ್​ ಪತ್ತೆಯಾಗಿದ್ದು ತನ್ನ ತಂದೆಯ ಬಳಿ ಕ್ಷಮೆ ಕೇಳಿದ್ದಾನೆ. ಐ ಆ್ಯಮ್ ಸ್ವಾರಿ ಡ್ಯಾಡಿ ಎಂದು ಹೇಳಿದ್ದಾನೆ. ಇನ್ನು ಆತನ ಬ್ಯಾಗ್​ನಲ್ಲಿ ವಾಚ್, ಪೆನ್ನು, ಡೆತ್​​ನೋಟ್​, ಹಾಲ್​​ ಟಿಕೆಟ್​ ಪರ್ಸ್​ ಸಿಕ್ಕಿದೆ ಎಂದು ಹೇಳಲಾಗಿದೆ.

ಅಪ್ಪ ನನ್ನನ್ನು ಕ್ಷಮಿಸಿ. ಎಕ್ಸಾಂಗೆ ಹಾಜರಾಗದಿರುವುದು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನನಗಾಗಿ ನೀವು ಸಾಕಷ್ಟು ಮಾಡಿದ್ದೀರಿ. ಆದರೆ ನಿಮಗಾಗಿ ಏನನ್ನೂ ಮಾಡಲು ನಾನು ಸಾಧ್ಯವಾಗಲಿಲ್ಲ. ಯಾವತ್ತೂ ಇಂತಹ ಕೆಟ್ಟದ್ದನು ಸಹಿಸಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದೆಕ್ಕೆ ಭಯವಾಗುತ್ತಿದೆ ಎಂದು ತೆಲುಗುನಲ್ಲಿ ಡೆತ್​ನೋಟ್​ ಅನ್ನು ವಿದ್ಯಾರ್ಥಿ ಬರೆದಿದ್ದಾನೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೇಟ್​ ಆಗಿ ಬಂದಿದ್ದಕ್ಕೆ ಪರೀಕ್ಷೆಗೆ ಕೂರಿಸದ ಟೀಚರ್​; ಡ್ಯಾ​​ಮ್​​ಗೆ ಜಿಗಿದು ವಿದ್ಯಾರ್ಥಿ ಸಾವು

https://newsfirstlive.com/wp-content/uploads/2024/02/TN_STUDENT_DIES.jpg

Load More