newsfirstkannada.com

×

ಐ ಆ್ಯಮ್ ಸಾರಿ.. ದಿಲ್‌ ಸೆ ಸೋ ಸಾರಿ; ಕನ್ನಡಿಗರನ್ನು ಕೆಣಕಿದ ನಾರ್ಥ್‌ ಇಂಡಿಯಾ ನಾರಿಗೆ ಏನಾಯ್ತು? VIDEO

Share :

Published September 23, 2024 at 10:43pm

    ಬೆಂಗಳೂರು, ಕನ್ನಡಿಗರನ್ನು ಕೆಣಕಿದ ರೀಲ್ಸ್ ರಾಣಿ ಕೊನೆಗೂ ಕ್ಷಮೆಯಾಚನೆ

    ನಮ್ಮ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟು ಚೇಡಿಸಿದ್ದಕ್ಕೆ ಕೆಲಸ ಹೋಯ್ತು!

    ಅಂದು ಬಾಯಿಗೆ ಬಂದಂಗೆ ಮಾತನಾಡಿದ್ದ ಮಹಿಳೆ ಇಂದು ಹೇಳಿದ್ದೇನು?

ಬೆಂಗಳೂರು: ನೆಲ, ಜಲ, ಊಟ ಕೊಟ್ಟ ನಮ್ಮ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟು ಚೇಡಿಸಿದ್ರೆ ಒಳ್ಳೆದಾಗುತ್ತಾ ಖಂಡಿತಾ ಇಲ್ಲ. ಉತ್ತರ ಭಾರತ ಮೂಲದ ಯುವತಿ ಕನ್ನಡಿಗರನ್ನು ತೆಗಳಿದ್ದಕ್ಕೆ ತಕ್ಕ ಶಾಸ್ತಿ ಆಗಿದೆ. ನಾವು ಕನ್ನಡಿಗರು ವಿಶಾಲ ಹೃದಯದವ್ರು ಆದ್ರೆ ತಿರುಗಿ ಬಿದ್ರೆ, ರೀಲ್ಸ್ ರಾಣಿಗೆ ಏನಾಯ್ತು ಗೊತ್ತಾ?

ಇದನ್ನೂ ಓದಿ: ಕೆಟ್ಟ ಮೇಲೆ ಬುದ್ಧಿ ಬಂತು.. I Love U Bengaluru ಎಂದು ಯೂಟರ್ನ್​ ಹೊಡೆದ ಉತ್ತರ ಭಾರತದ ಯುವತಿ 

ಉತ್ತರ ಭಾರತ ಮೂಲದ ಈ ಯುವತಿ ಸುಮ್ಮನೆ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಸಿಲಿಕಾನ್​ ಸಿಟಿಯಲ್ಲಿ ನೆಮ್ಮದಿಯಾಗಿ ಇರುವುದನ್ನ ಬಿಟ್ಟು ಈ ನೆಲದ ವಿರುದ್ಧ ನಾಲಿಗೆ ಹರಿಬಿಟ್ಟು ಪೇಚಿಗೆ ಸಿಲುಕಿದ್ದಾರೆ. ಕನ್ನಡಿಗರ ಆಕ್ರೋಶಕ್ಕೂ ಗುರಿಯಾಗಿದ್ದಾರೆ. ಎಲ್ಲರು ಬೈದ್ಮೇಲೆ ಐ ಲವ್​ ಬೆಂಗಳೂರು ಅಂತ ಉಲ್ಟಾನೂ ಹೊಡೆದಿದ್ದಾರೆ. ಆದ್ರೆ, ಇದನ್ನ ಕನ್ನಡಿಗರು ನೋಡಿ ಸಹಿಸ್ತಾರಾ ಖಂಡಿತಾ ಇಲ್ಲ.

ಈ ರೀಲ್ಸ್ ರಾಣಿಯ ಸೊಕ್ಕು ಅಡಗಿಸಿದ್ದಾರೆ ನಮ್ಮ ಕನ್ನಡಿಗರು. ಕನ್ನಡಿಗರನ್ನು ಕೆಣಕಿ ಉಳಿದವರಿಲ್ಲ ಅನ್ನೋದು ಸಾಬೀತಾಗಿದೆ. ರೀಲ್ಸ್ ರಾಣಿ ಸುಗಂಧ ಶರ್ಮಾಳನ್ನ ಖಾಸಗಿ ಕಂಪನಿ ಕೆಲಸದಿಂದ ತೆಗೆದು ಹಾಕಲಾಗಿದೆ. ಅಷ್ಟೇ ಅಲ್ಲ ಕೋರಮಂಗಲ ಪೊಲೀಸ್​ ಠಾಣೆಯಲ್ಲಿ ಈಕೆಯ ವಿರುದ್ಧ ಎಫ್​ಐಆರ್​​ ಕೂಡ ದಾಖಲಾಗಿದೆ.

ಈ ಮಹಿಳೆಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡ್ರೆ ನಿಮ್ಮ ಕಂಪನಿಗೆ ನಾವು ಬೀಗ ಹಾಕುವ ಕೆಲಸ ಮಾಡಬೇಕಾಗುತ್ತೆ. ಮಹಿಳೆಯು ಪಿಜಿಯಲ್ಲಿ ಇರೋದು. ಪಿಜಿ ಓನರ್ ಕೂಡ ಅವರಿಗೆ ಜಾಗ ಕೊಡಬಾರದು. ಅವರನ್ನ ಓಡಿಸಬೇಕು. ಆಕೆ ಇಲ್ಲಿ ಇರಬಾರದು. ಆಕೆ ಇಲ್ಲಿ ಬಂದು ಒಂದು ಅಂತರ, ನಮ್ಮ-ನಮ್ಮ ಮಧ್ಯೆ ಜಗಳ ತಂದಿಟ್ಟ ಕೆಲಸ ಮಾಡಿದ್ದಾರೆ. ಆಕೆ ಎಲ್ಲಿ ಇದ್ರೂ ಸರಿ ನಾವು ನಿದ್ದೆ, ಊಟ ಬಿಟ್ಟು ಆಕೆಯ ಅಡ್ರೆಸ್‌ ಅನ್ನು ಕಂಡು ಹಿಡಿಯುತ್ತೇವೆ. ಆಕೆಯನ್ನು ಕನ್ನಡಿಗರನ್ನ ಮುಂದೆ ತಂದು ನಿಲ್ಲಿಸಿ ಕ್ಷಮೆಯಾಚನೆ ಮಾಡಿ ಯಾವ ಜಾಗದಿಂದ ಬಂದಿದ್ದಾರೋ ಅದೇ ಜಾಗಕ್ಕೆ ಓಡಿಸುವ ತನಕ ನಾವು ಬಿಡೋದಿಲ್ಲ.
– ರೂಪೇಶ್​​ ರಾಜಣ್ಣ, ಕನ್ನಡಪರ ಹೋರಾಟಗಾರ

ರೀಲ್ಸ್ ರಾಣಿಯಿಂದ ಕ್ಷಮೆಯಾಚನೆ!
ಐ ಆ್ಯಮ್ ಸಾರಿ.. ದಿಲ್‌ ಸೇ ಸೋ ಸಾರಿ.. ಕನ್ನಡಿಗರನ್ನು ಕೆಣಕಿದ ರೀಲ್ಸ್ ರಾಣಿ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಬೆಂಗಳೂರಿನ ಬಗ್ಗೆ ಬಾಯಿಗೆ ಬಂದಂಗೆ ಮಾತನಾಡಿದ್ದ ಮಹಿಳೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆಯಾಚನೆ ಕೇಳಿದ್ದಾರೆ.

ಇದನ್ನೂ ಓದಿ: ಕನ್ನಡಿಗರನ್ನು ಕೆಣಕಿ ಉಳಿದವರು ಯಾರಿಲ್ಲ; ಬೆಂಗಳೂರನ್ನ ಲೇವಡಿ ಮಾಡಿ ಕೆಲಸ ಕಳೆದುಕೊಂಡ ರೀಲ್ಸ್ ರಾಣಿ! 

ನನ್ನಿಂದ ಯಾರ ಭಾವನೆಗೆ ನೋವುಂಟು ಮಾಡಿದ್ರೆ ಕ್ಷಮೆ ಇರಲಿ. ನಾನು ಇತ್ತೀಚೆಗೆ ಬೆಂಗಳೂರಿನ ಬಗ್ಗೆ ರೀಲ್ಸ್ ಮಾಡಿದ್ದೆ. ಆ ರೀಲ್ಸ್ ಇಂದ ತುಂಬಾ ಜನರಿಗೆ ನೋವುಂಟು ಮಾಡಿದ್ದೇನೆ. ಹಾಗಾಗಿ ಎಲ್ಲರಲ್ಲೂ ಕ್ಷಮೆ ಕೇಳ್ತೀನಿ. ಹೃದಯದಿಂದ ಅಂತ ಕ್ಯಾಪ್ಶನ್ ಹಾಕಿ ಕ್ಷಮೆ ಕೇಳಿದ್ದಾರೆ.

View this post on Instagram

A post shared by Sugandh Sharma (@thesugandhsharma)

ಇನ್ನಾದ್ರೂ ಇಂತವರು ಬುದ್ಧಿ ಕಲಿಯಬೇಕಿದೆ. ಲೈಕ್ಸ್ ಹುಚ್ಚಿಗೋ, ಫಾಲೋವರ್ಸ್ ಆಗಬೇಕು ಅನ್ನೋ ಆಸೆಗೋ ಹೀಗೆ ಕನ್ನಡಿಗರನ್ನ ಕೆಣಕಿದ್ರೆ, ಅನ್ನ ಕೊಡೋ ಮಣ್ಣನ್ನೇ ಧೂಷಿಸಿದ್ರೆ, ಈ ಮಣ್ಣಿನ ಭಾಷೆಯನ್ನ ಹೀಗಳೆದ್ರೆ ಮುಟ್ಟಿ ನೋಡಿಕೊಳ್ಳುವಂತೆ ಕನ್ನಡಿಗರು ಮಾಡ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐ ಆ್ಯಮ್ ಸಾರಿ.. ದಿಲ್‌ ಸೆ ಸೋ ಸಾರಿ; ಕನ್ನಡಿಗರನ್ನು ಕೆಣಕಿದ ನಾರ್ಥ್‌ ಇಂಡಿಯಾ ನಾರಿಗೆ ಏನಾಯ್ತು? VIDEO

https://newsfirstlive.com/wp-content/uploads/2024/09/North-Indian-Woman-1.jpg

Load More