newsfirstkannada.com

LSGvsSRH: ನಾನು ಮಾತಿಗೆ ಸೋತಿದ್ದೇನೆ.. ಸೋಲಿನ ಬಳಿಕ ಕೆ.ಎಲ್​ ರಾಹುಲ್​ ಬೇಸರ

Share :

Published May 9, 2024 at 8:15am

    ಪಂದ್ಯ ಸೋತ ಬಳಿಕ ಮನದ ಮಾತು ಹಂಚಿಕೊಂಡ ಕೆ.ಎಲ್ ರಾಹುಲ್​

    ಸೋತಾಗ ತೆಗೆದುಕೊಂಡ ನಿರ್ಧಾರ ಮೇಲೆ ಪ್ರಶ್ನೆಗಳು ಉದ್ಭವಿಸುತ್ತವೆ

    ಆ ರೀತಿಯ ಬ್ಯಾಟಿಂಗನ್ನು ಟಿವಿಯಲ್ಲಿ ನೋಡಿದ್ದೇವೆ ಎಂದ ಲಕ್ನೋ ನಾಯಕ

LSGvsSRH: ನಿನ್ನೆ ನಡೆದ ಲಕ್ನೋ ಮತ್ತು ಹೈದರಾಬಾದ್​ ತಂಡದ ನಡುವೆ ಚಮತ್ಕಾರವೇ ನಡೆದಿದೆ. ಹೈದರಾಬಾದ್​ ಬಾಟ್ಸ್​ಮನ್​ಗಳು ಲಕ್ನೋ ನೀಡಿದ 165 ರನ್​ಗಳ ಸವಾಲನ್ನು ಬರೀ 9.4 ಓವರ್​ನಲ್ಲಿ ಸ್ವೀಕರಿಸಿ ಗೆದ್ದು ಬೀಗಿದ್ದಾರೆ. ಆದರೆ ಈ ಪಂದ್ಯ ಮಾತ್ರ ಲಕ್ನೋ ನಾಯಕನಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಪಂದ್ಯ ಮುಗಿದ ಬಳಿಕ ಕೆ.ಎಲ್​ ರಾಹುಲ್​ ಎನು ಹೇಳಿದ್ದಾರೆ ಗೊತ್ತಾ?

ಪಂದ್ಯದ ಬ್ರೇಕ್​ ಸಮಯದಲ್ಲಿ ಕೆ.ಎಲ್ ರಾಹುಲ್​ಗೆ​ ಲಕ್ನೋ ಮಾಲೀಕ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಈ ದೃಶ್ಯ ವೈರಲ್​ ಆಗುತ್ತಿದೆ. ಒಟ್ಟಿನಲ್ಲಿ ನಿನ್ನೆ ಪಂದ್ಯದಲ್ಲಿ ರಾಹುಲ್​ಗೆ ದೊಡ್ಡ ಒತ್ತಡವಿತ್ತು ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ. ಕಾರಣ ಹೈದರಾಬಾದ್​ನ ಇಬ್ಬರು ದಾಂಡಿಗರು ಬರೀ ಸಿಕ್ಸ್​ ಫೋರ್​ ಬಾರಿಸಿಯೇ 148 ರನ್​ ನೀಡಿದ್ದಾರೆ.

ಆ ರೀತಿಯ ಬ್ಯಾಟಿಂಗನ್ನು ಟಿವಿಯಲ್ಲಿ ನೋಡಿದ್ದೇವೆ

ಪಂದ್ಯ ಮುಂಗಿದ ಬಳಿಕ ಲಕ್ನೋ ತಂಡದ ನಾಯಕ ಕೆ.ಎಲ್​ ರಾಹುಲ್​ ಮಾತನಾಡಿದ್ದಾರೆ. ‘ನಾನು ಮಾತಿಗೆ ಸೋತಿದ್ದೇನೆ. ಆ ರೀತಿಯ ಬ್ಯಾಟಿಂಗನ್ನು ಟಿವಿಯಲ್ಲಿ ನೋಡಿದ್ದೇವೆ. ಆದರೆ ಇದು ಅವಾಸ್ತವ ಬ್ಯಾಟಿಂಗ್’ ಎಂದು ಹೇಳಿದ್ದಾರೆ.

ಅವರ ಕೌಶಲ್ಯಕ್ಕೆ ಅಭಿನಂದನೆಗಳು

ಬಳಿಕ ಮಾತು ಮುಂದುವರೆಸಿದ ಲಕ್ನೋ ತಂಡದ ನಾಯಕ, ‘ಎಲ್ಲವೂ ಬ್ಯಾಟ್‌ನ ಮಧ್ಯಭಾಗವನ್ನು ಕಂಡುಕೊಂಡಂತೆ ತೋರುತ್ತಿದೆ. ಅವರ ಕೌಶಲ್ಯಕ್ಕೆ ಅಭಿನಂದನೆಗಳು. ಅವರು ತಮ್ಮ ಸಿಕ್ಸ್ ಹೊಡೆಯುತ್ತಾ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಏನು ಆಡಿದೆ ಎಂಬುದನ್ನು ತಿಳಿಯಲು ಅವರು ಅವಕಾಶ ನೀಡಲಿಲ್ಲ’ ಎಂದು ಹೇಳಿದ್ದಾರೆ.

ಸೋತಾಗ ತೆಗೆದುಕೊಂಡ ನಿರ್ಧಾರ ಮೇಲೆ ಪ್ರಶ್ನೆಗಳು ಉದ್ಭವಿಸುತ್ತೆ

‘ಒಮ್ಮೆ ನೀವು ಸೋತ ಪಕ್ಷದಲ್ಲಿ, ತೆಗೆದುಕೊಂಡ ನಿರ್ಧಾರಗಳ ಮೇಲೆ ಪ್ರಶ್ನಾರ್ಥಕ ಬರುತ್ತವೆ. ನಾವು 40-50 ರನ್‌ಗಳ ಕೊರತೆ ಎದುರಿಸಿದ್ದೆವು. ಪವರ್‌ಪ್ಲೇಯಲ್ಲಿ ನಾವು ವಿಕೆಟ್‌ಗಳನ್ನು ಕಳೆದುಕೊಂಡಾಗ, ನಮಗೆ ಯಾವುದೇ ಆವೇಗವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಯುಷ್ ಮತ್ತು ನಿಕಿ ನಮ್ಮನ್ನು 166ಕ್ಕೆ ತಲುಪಿಸಲು ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ ನಾವು 240 ಗಳಿಸಿದ್ದರೂ, ಹೈದರಾಬಾದ್​ ತಂಡ ಅದನ್ನು ಬೆನ್ನಟ್ಟುತ್ತಿದ್ದರು’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

LSGvsSRH: ನಾನು ಮಾತಿಗೆ ಸೋತಿದ್ದೇನೆ.. ಸೋಲಿನ ಬಳಿಕ ಕೆ.ಎಲ್​ ರಾಹುಲ್​ ಬೇಸರ

https://newsfirstlive.com/wp-content/uploads/2024/05/K-L-rahul.jpg

Load More