/newsfirstlive-kannada/media/post_attachments/wp-content/uploads/2024/09/Kareena-Kapoor.jpg)
ಬಾಲಿವುಡ್ನ ಹಾಟ್ ಲೇಡಿ ಕರೀನಾ ಕಪೂರ್ ಅವರ ಅದೊಂದು ಮಾತಿಗೆ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಮನೆಯಲ್ಲಿ ನಾನು ಮತ್ತು ಸೈಫ್ ಇಬ್ಬರೂ ಜತೆಗೂಡಿ ಅಡುಗೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇವೆ. ಯಾವುದೇ ಸಂದರ್ಭಕ್ಕಾದರೂ ಸೈಫ್ ಅಡುಗೆ ಮಾಡಲು ಸಿದ್ದರಾಗುತ್ತಾರೆ ಎಂದು ಬಾಲಿವುಡ್ ನಟಿ ಖರೀನಾ ಕಪೂರ್ ಖಾನ್ ತಮ್ಮ ಅಡುಗೆ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ:ವಿನಯ್ ಗೌಡ, ರಜತ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಹುಚ್ಚಾಟ.. ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್..!
44 ವರ್ಷದ ನಟಿ ತಮ್ಮ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಅವರ 'ದಿ ಕಾಮನ್‌ಸೆನ್ಸ್ ಡಯಟ್' ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಈ ಬಗ್ಗೆ ಮಾತಾಡಿದ ಕರೀನಾ, ದಿನವನ್ನು ಒತ್ತಡದಲ್ಲೇ ಕಳೆದಾಗ ಮನೆ ಅಡುಗೆ ನೀಡುವ ಆಹ್ಲಾದ ಬೇರೊಂದಿಲ್ಲ. ಹೀಗಾಗಿ ನಾನು ಮತ್ತು ಸೈಫ್ ಮನೆಯಲ್ಲೇ ಅಡುಗೆ ಮಾಡುವುದನ್ನು ರೂಢಿಸಿಕೊಂಡಿದ್ದೇವೆ ಅಂತ ಹೇಳಿದ್ದಾರೆ. ಈ ಅಭ್ಯಾಸ ನಮ್ಮ ವೈಯಕ್ತಿಕ ಬದುಕಿನ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ. ಸೈಫ್ ಒಬ್ಬ ಒಳ್ಳೆಯ ಅಡುಗೆ ಭಟ್ಟ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ನನಗೆ ಮೊಟ್ಟೆ ಬೇಯಿಸಲೂ ಬರುವುದಿಲ್ಲ ಎಂದು ಕರೀನಾ ಹೇಳಿದ್ದಾರೆ.
ಇನ್ನೂ, ನಟಿಯ ಈ ಮಾತನ್ನು ಕೇಳಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಅಲ್ಲದೇ ನೀವು ತುಂಬಾ ಲಕ್ಕಿ ಅಂತ ಹಾಡಿ ಹೊಗಳಿದ್ದಾರೆ. ಅಲ್ಲದೇ ನಟಿ ಕರೀನಾ ಅವರಿಗೆ ಇಷ್ಟದ ಆಹಾರ ಕಿಚಡಿಯಂತೆ. ಇಂಥದ್ದೇ ಅಡುಗೆ ಬೇಕೆಂಬ ಬೇಡಿಕೆ ಇಲ್ಲವಂತೆ. ಹಾಗೆಯೇ ಒಂದೇ ಅಡುಗೆಯನ್ನು ಪದೇ ಪದೇ ತಿನ್ನಲೂ ಅವರಿಗೆ ಬೇಸರವಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ