/newsfirstlive-kannada/media/post_attachments/wp-content/uploads/2025/06/Flight-black-box.jpg)
ವಿಶ್ವಾಸ್ ಕುಮಾರ್ ರಮೇಶ್ ಅನ್ನೋರು ಅಹ್ಮದಾಬಾದ್ ವಿಮಾನ ದುರಂತದಿಂದ ಪವಾಡ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ.. ಸದ್ಯ ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಘೋರ ದರಂತಕ್ಕೆ ಸಿಲುಕಿ ಕೂದಲೆಳೆ ಅಂತರದಲ್ಲಿ ಜೀವ ಅಪಾಯದಿಂದ ಪಾರಾದ ವಿಶ್ವಾಸ್ ಕುಮಾರ್ ರಮೇಶ್ ಅವರು, ತಮ್ಮ ಅನುಭವಗಳನ್ನು ಹಂಚಿಕೊಳ್ತಿದ್ದಾರೆ. ದೂರದರ್ಶನ ವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಈ ಅಪಾಯದಿಂದ ಹೇಗೆ ಜೀವಂತವಾಗಿ ಬಂದೆ ಅನ್ನೋದೇ ಗೊತ್ತಿಲ್ಲ.
ಇದನ್ನೂ ಓದಿ: ನಿಮಗಿದು ಗೊತ್ತೇ.. BLACK BOX ಎಂದರೇನು? ಹೇಗೆ ಕಾರ್ಯನಿರ್ವಹಿಸುತ್ತೆ? ವಿಮಾನದಲ್ಲಿ ಎಲ್ಲಿಡಲಾಗುತ್ತೆ?
ವಿಮಾನವು ಟೇಕ್ ಆಫ್ ಆದ ತಕ್ಷಣ ಸ್ಟಕ್ ಆದಂತೆ ಭಾಸವಾಯಿತು. ನಂತರ ಗ್ರೀನ್ ಮತ್ತು ವೈಟ್ ಲೈಟ್ ಆನ್ ಆಗಿದೆ. ಪೈಲಟ್ಗಳು ನಿಯಂತ್ರಣ ಸಾಧಿಸಿ ವಿಮಾನವನ್ನು ಮೇಲಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ವೇಗದಿಂದ ವಿಮಾನ ಪತನಗೊಂಡಿದೆ.
ಇನ್ನೇನು ನಾನು ಸಾಯುತ್ತೇನೆ ಅನ್ಕೊಂಡೆ. ಆದರೆ ನಾನು ಕಣ್ಣು ತೆರೆದಾಗ, ನಾನು ಬದುಕಿರೋದನ್ನು ನೋಡಿದೆ. ನಾನು ನನ್ನ ಸೀಟ್ ಬೆಲ್ಟ್ ತೆರೆದು ಹೊರಬಂದೆ. ನನ್ನ ಕಣ್ಣೆದುರಲ್ಲೇ ಅಂಕಲ್, ಆಂಟಿ ಹಾಗೂ ಗಗನಸಖಿಯರು ಪ್ರಾಣಬಿಟ್ಟರು. ನಾನು ಭೂಮಿಯ ಹತ್ತಿರಕ್ಕೆ ಬಿದ್ದಿದೆ. ಅದು ಗ್ರೌಂಡ್ ಫ್ಲೋರ್ನಲ್ಲಿ ಜಾಗವಿತ್ತು. ಅಲ್ಲಿಂದ ನಾನು ಹೊರಬಂದೆ ಎಂದಿದ್ದಾರೆ.
ಇದನ್ನೂ ಓದಿ: ಹೆಲಿಕಾಪ್ಟರ್, ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ದೇಶದ ಹಾಲಿ, ಮಾಜಿ ಸಿಎಂಗಳ ಪಟ್ಟಿ ಇಲ್ಲಿದೆ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ