newsfirstkannada.com

ಬಯಲಾಯ್ತು ಗಂಗೂಲಿ ಅಸಲಿ ಮುಖವಾಡ.. ಕ್ರೆಡಿಟ್ ಆಸೆಗಾಗಿ ಸತ್ಯ ಒಪ್ಪಿಕೊಂಡ ದಾದಾ..!

Share :

Published July 17, 2024 at 10:03am

Update July 17, 2024 at 10:05am

    ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಗಂಗೂಲಿ

    ವಿಶ್ವಕಪ್ ಗೆಲುವಿನ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾದ ಸೌರವ್

    ನಾಯಕತ್ವ ಕೈತಪ್ಪಿದ್ದಕ್ಕೆ ದಾದಾ ವಿರುದ್ಧ ಕೊಹ್ಲಿ ಮುನಿಸು

ಸುಳ್ಳು ಹೇಳಿ ಎಷ್ಟೇ ದಿನ ಬಾಯ್ಕಟ್ಟಿದ್ರೂ, ಒಂದಲ್ಲ ಒಂದು ದಿನ ಸತ್ಯ ಬಾಯಿಂದ ಹೊರ ಬಂದೇ ಬರುತ್ತೆ. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವಿಚಾರದಲ್ಲಿ ಅದು ನಿಜವಾಗಿದೆ. ಕೊಹ್ಲಿಯನ್ನ ನಾನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿಲ್ಲ ಎಂದಿದ್ದ ದಾದಾರ ಮುಖವಾಡ ಇದೀಗ ಕಳಚಿ ಬಿದ್ದಿದೆ. ಕ್ರೆಡಿಟ್​ ಆಸೆಗೆ ಬಿದ್ದು ಕೊನೆಗೂ ಸತ್ಯವನ್ನ ಬಾಯ್ಬಿಟ್ಟಿದ್ದಾರೆ.

ಟೀಮ್ ಇಂಡಿಯಾ ಟಿ20 ವಿಶ್ವಕಪ್​​ ಗೆದ್ದು ಹೊಸ ಚರಿತ್ರೆ ಸೃಷ್ಟಿಸಿದ್ದಾಗಿದೆ. ವಿಶ್ವಚಾಂಪಿಯನ್ನರ ವಿಜಯೋತ್ಸವು ಮುಗಿದಾಗಿದೆ. ಎಂಎಸ್ ಧೋನಿ ಬಳಿಕ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಕೀರ್ತಿಗೆ ರೋಹಿತ್​ ಶರ್ಮಾ ಭಾಜನರಾಗಿದ್ದು ಆಗಿದೆ. ಭಾರತೀಯ ಕಲಿಗಳ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿರುವ ಹೊತ್ತಲ್ಲೆ ಬಿಸಿಸಿಐ ಮಾಜಿ ಅಧ್ಯಕ್ಷರ ಟ್ರೋಫಿ ಕ್ರೆಡಿಟ್ ವಾರ್​ ಶುರುವಾಗಿದೆ.

ಇದನ್ನೂ ಓದಿ:ಆಳ ಸಮುದ್ರದಲ್ಲಿ ಅನಾಹುತ.. ತೈಲ ಟ್ಯಾಂಕರ್​ ಮುಳುಗಿ 13 ಭಾರತೀಯರು ಸೇರಿ 16 ಮಂದಿ ನಾಪತ್ತೆ

ರೋಹಿತ್​​​ ಕ್ಯಾಪ್ಟನ್​ ಮಾಡಿದ್ದು ನಾನೇ
17 ವರ್ಷಗಳ ಬಳಿಕ ಭಾರತ ತಂಡ ವಿಶ್ವಕಪ್ ಕಪ್​ ಗೆದ್ದಿದ್ದೇ ಬಂತು. ಹಾಲಿ-ಮಾಜಿ ಕ್ರಿಕೆಟರ್ಸ್​ ಚಾಂಪಿಯನ್​ ತಂಡವನ್ನ ಗುಣಗಾನ ಮಾಡಿದ್ರು. ಇದಕ್ಕೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೊರತಾರ್ಗಿಲ್ಲ. ಭಾರತ ತಂಡ ಟ್ರೋಫಿ ಗೆದ್ದ ಬಳಿಕ ರೋಹಿತ್​ರನ್ನು ನಾನೇ ಕ್ಯಾಪ್ಟನ್ ಮಾಡಿದೆ. ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್​​ ಜಯಿಸಿದೆ ಅನ್ನುವ ಮೂಲಕ ಕ್ರೆಡಿಟ್​​​​ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ರೋಹಿತ್ ಕ್ಯಾಪ್ಟನ್ ಮಾಡಿದ್ದು ನಾನೇ
ರೋಹಿತ್​ ಶರ್ಮಾರನ್ನು ನಾನು ಕ್ಯಾಪ್ಟನ್ ಆಗಿ ಮಾಡಿದಾಗ ಎಲ್ಲರೂ ನನ್ನ ಟೀಕಿಸಿದ್ರು. ಈಗ ಅದೇ ರೋಹಿತ್​ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್​​ ಗೆದ್ದಿದೆ. ಎಲ್ಲರೂ ನಿಂದಿಸುವುದನ್ನ ನಿಲ್ಲಿಸಿದ್ದಾರೆ. ರೋಹಿತ್​ನನ್ನ ಕ್ಯಾಪ್ಟನ್​ ಮಾಡಿದ್ದು ನಾನು ಅನ್ನೋದನ್ನ ಎಲ್ಲರೂ ಮರೆತಿದ್ದಾರೆ.
ಸೌರವ್ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷ

ಕೊನೆಗೂ ಸತ್ಯ ಬಾಯ್ಬಿಟ್ಟ ಸೌರವ್​​ ಗಂಗೂಲಿ

ರೋಹಿತ್​ ಶರ್ಮಾರನ್ನು ನಾನೇ ಕ್ಯಾಪ್ಟನ್ ಮಾಡಿದೆ. ಅವರಿಂದೇ ಭಾರತ ತಂಡ ವಿಶ್ವಕಪ್ ಗೆದ್ದಿತು ಅನ್ನುವ ಮೂಲಕ ದಾದಾ ಕೊನೆಗೂ ಸತ್ಯವನ್ನ ಬಾಯಿ ಬಿಟ್ಟಿದ್ದಾರೆ. ಅಷ್ಟಕ್ಕೂ ಆ ಸತ್ಯ ಮತ್ಯಾವುದೂ ಅಲ್ಲ. ಕಿಂಗ್ ಕೊಹ್ಲಿಯನ್ನು ಪಕ್ಕಾ ಪ್ಲಾನ್​ ಮಾಡಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ, ಹಿಟ್​ಮ್ಯಾನ್​​​ಗೆ ಪಟ್ಟಕಟ್ಟಿದ್ದು ಕಥೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್​​ಗೆ ಬಿಗ್ ಶಾಕ್ ಕೊಟ್ಟ ಪಂತ್.. ತಂಡ ತೊರೆಯಲು ನಿರ್ಧಾರ.. ಆಗಿದ್ದೇನು..?

ಕೊಹ್ಲಿಯನ್ನ ಕ್ಯಾಪ್ಟನ್ಸಿ ಕೆಳಗಿಳಿಸಿದ್ದೇ ಗಂಗೂಲಿ
2021 ರಲ್ಲಿ ಕಿಂಗ್ ಕೊಹ್ಲಿ ಟಿ20 ನಾಯಕತ್ವಕ್ಕೆ ಗುಡ್​ಬೈ ಹೇಳಿದ್ರು. ಇದರ ಬೆನ್ನಲ್ಲೇ ಕೊಹ್ಲಿಯನ್ನ ಏಕಾಏಕಿ ಏಕದಿನ ತಂಡದ ನಾಯಕತ್ವದಿಂದಲೂ ಕಿತ್ತು ಹಾಕಲಾಯ್ತು. ಈ ವಿಚಾರವಾಗಿ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ವಿರಾಟ್​ಕೊಹ್ಲಿ ಮಧ್ಯೆ ಕೋಲ್ಡ್​​​ವಾರ್​ ಏರ್ಪಟ್ಟಿತ್ತು. ವಿರಾಟ್​​​​ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಸೋ ಮುನ್ನ ನನ್ನನ್ನ ಯಾರೂ ಕೇಳಿಲ್ಲ ಎಂದು ಬಹಿರಂಗವಾಗಿ ದೂರಿದ್ರು. ಇದ್ರ ಬೆನ್ನಲ್ಲೇ ಸೌರವ್​ ಗಂಗೂಲಿ ಕೊಹ್ಲಿ, ತಾವಾಗಿಯೇ ಕ್ಯಾಪ್ಟನ್ಸಿ ತ್ಯಜಿಸಿದ್ದಾರೆ. ನಾನು ಅವರನ್ನ ತೆಗೆದಿಲ್ಲ ಎನ್ನುವ ಸಮಾಜಾಯಿಷಿ ನೀಡಿದ್ರು. ಹಲವರು ದೃಷ್ಟಿಯಲ್ಲಿ ಒಳ್ಳೆಯವರೆಂಬ ಸರ್ಟಿಫಿಕೆಟ್ ಕೂಡ ಪಡೆದಿದ್ರು.

ನಾನು ಕೊಹ್ಲಿಯನ್ನ ಕೆಳಗಿಳಿಸಿಲ್ಲ
ಕೊಹ್ಲಿಯನ್ನ ನಾನು ಕೆಳಗಿಳಿಸಿಲ್ಲ. ಅವರಿಗೆ ತಂಡವನ್ನು ಮುನ್ನಡೆಸುವ ಆಸಕ್ತಿ ಇರಲಿಲ್ಲ. ಅವರು ನಿರ್ಧಾರ ತೆಗೆದುಕೊಂಡ ಬಳಿಕ ನಾಯಕತ್ವ ವಹಿಸಲು ಆಸಕ್ತಿ ಇಲ್ಲದಿದ್ದರೆ, ಸಂಪೂರ್ಣ ವೈಟ್-ಬಾಲ್ ಕ್ರಿಕೆಟ್‌ನಿಂದ ಕೆಳಗಿಳಿದರೆ ಉತ್ತಮ ಎಂದು ಹೇಳಿದ್ದೆ. ಬಳಿಕವೇ ವೈಟ್​​​ ಬಾಲ್​ ಕ್ಯಾಪ್ಟನ್​ ಮತ್ತು ರೆಡ್​​ ಬಾಲ್​ಗೆ ನೂತನ ಕ್ಯಾಪ್ಟನ್ ನೇಮಿಸಿದೆವು-ಸೌರವ್ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷ

ಸೌರವ್ ಗಂಗೂಲಿ ಅಂದು ಹೇಳಿದ ಮಾತುಗಳು ಇವೇ. ಅಂದು ನಾನು ಕೊಹ್ಲಿಯನ್ನ ಟಿ20 ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿಲ್ಲ ಎಂದಿದ್ದ ದಾದಾ ಇಂದು ರೋಹಿತ್​ ಶರ್ಮಾರನ್ನ ನಾಯಕನಾಗಿ ನಾನೇ ಮಾಡಿದೆ ಎಂದಿದ್ದಾರೆ. ಈ ಮೂಲಕ ಅಸಲಿ ಸತ್ಯವನ್ನ ಕೊನೆಗೂ ಬಾಯಿ ಬಿಟ್ಟಿದ್ದಾರೆ. ಅಂದು ಕಿಂಗ್ ಕೊಹ್ಲಿಯನ್ನೇ ವಿಲನ್ ಮಾಡಿದ್ದ ಗಂಗೂಲಿ ಇದೀಗ ಕೊಹ್ಲಿ ಫ್ಯಾನ್ಸ್​ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ:ಬದುಕು ಸುಟ್ಟ ಬೆಂಕಿ.. ಅಪ್ಪ-ಅಮ್ಮನ ಕಳೆದುಕೊಂಡು ಅನಾಥರಾದ ರಮಾನಂದ ಶೆಟ್ಟಿ ಮಕ್ಕಳು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಯಲಾಯ್ತು ಗಂಗೂಲಿ ಅಸಲಿ ಮುಖವಾಡ.. ಕ್ರೆಡಿಟ್ ಆಸೆಗಾಗಿ ಸತ್ಯ ಒಪ್ಪಿಕೊಂಡ ದಾದಾ..!

https://newsfirstlive.com/wp-content/uploads/2024/07/GANGULY-4.jpg

Load More