newsfirstkannada.com

‘ನಾನು ಅಳುತ್ತ ಕೂತಿದ್ದೆ..’ ರೋಹಿತ್ ಶರ್ಮಾಗೆ ಇರುವ ‘ಮಾನವೀಯ ಗುಣ’ ಅನಾವರಣ ಮಾಡಿದ ಅಶ್ವಿನ್

Share :

Published March 13, 2024 at 12:31pm

  ರಾಜ್​ಕೋಟ್​ ಟೆಸ್ಟ್​ನಲ್ಲಿ ಅಶ್ವಿನ್​ಗೆ ಎದುರಾಗಿತ್ತು ದೊಡ್ಡ ಆಘಾತ

  ಅಶ್ಚಿನ್ ಸಹಾಯಕ್ಕೆ ಬಂದಿದ್ದು ಕ್ಯಾಪ್ಟನ್ ರೋಹಿತ್ ಶರ್ಮಾ

  ತೀವ್ರ ತಲೆ ನೋವಿನಿಂದ ಕುಸಿದು ಬಿದ್ದಿದ್ದ ಅವರ ತಾಯಿ

ಇಂಗ್ಲೆಂಡ್ ವಿರುದ್ಧದ ರಾಜ್‌ಕೋಟ್ ಟೆಸ್ಟ್‌ನಲ್ಲಿ 500 ವಿಕೆಟ್​ ಕಬಳಿಸುವ ಮೂಲಕ ಸ್ಪಿನ್ ಮಾಂತ್ರಿಕ ಅಶ್ವಿನ್ ಐತಿಹಾಸಿಕ ಸಾಧನೆ ಮಾಡಿದರು. ಕ್ರಿಕೆಟ್ ಜೀವನದ ಖುಷಿಯ ಕ್ಷಣದಲ್ಲಿರುವ ಹೊತ್ತಿನಲ್ಲಿ ಅಶ್ವಿನ್ ಅವರಿಗೆ ಆಘಾತವೊಂದು ಎದುರಾಗಿತ್ತು. ಅದುವೇ, ಅವರ ತಾಯಿ ಅನಾರೋಗ್ಯಕ್ಕೆ ಒಳಗಾಗಿರೋದು.

ಅಶ್ವಿನ್ ಹೇಳಿದ್ದೇನು?
500 ವಿಕೆಟ್ ಪಡೆದ ನಂತರ ನಾನು, ಪತ್ನಿ ಮತ್ತು ಹೆತ್ತವರ ದೂರವಾಣಿ ಕರೆಗಾಗಿ ಕಾಯುತ್ತಿದ್ದೆ. ನಾನು ಯೋಚಿಸಿದೆ, ಮನೆಗೆ ಸಂದರ್ಶಕರು ಬಂದಿರಬಹುದು, ಅವರ ಜೊತೆ ಮಾತನಾಡುತ್ತಿರಬಹುದು. ಶುಭಾಶಯ ಕೋರಲು ಬಂದಿದ್ದ ಅತಿಥಿಗಳ ಜೊತೆ ಬ್ಯುಸಿ ಇರಬಹುದು ಅನ್ಕೊಂಡೆ. ಅದು ಸಂಜೆ 7 ಗಂಟೆ ಸಮಯ. ಮನೆ ಕಡೆಯಿಂದ ಯಾವುದೇ ಕರೆಗಳು ಬಾರದ ಹಿನ್ನೆಲೆಯಲ್ಲಿ ತಳಮಳ ಶುರುವಾಗಿತ್ತು.
ಸ್ನಾನಕ್ಕೆ ಹೋಗುವ ಮೊದಲು ಪತ್ನಿಗೆ ಕರೆ ಮಾಡಿದೆ. ಆದರೆ ಯಾರೂ ಕರೆಯನ್ನು ಸ್ವೀಕರಿಸಲಿಲ್ಲ. ಮತ್ತೆ ಮಾಡಿದಾಗ ನನ್ನ ಪತ್ನಿಯ ಧ್ವನಿ ನಡಗುತ್ತಿತ್ತು. ನೀವು ಸ್ವಲ್ಪ ಆಚೆ ಬಂದು ಮಾತನಾಡಬಹುದಾ ಎಂದು ಕೇಳಿಕೊಂಡಳು. ನಾನು ಸಹ ಆಟಗಾರರ ಬಳಿಯಿಂದ ಹೊರಗೆ ಬಂದು ಮಾತನಾಡಿದೆ. ಆಗ ಆಕೆ ಹೇಳಿದಳು.. ಅಮ್ಮ ತೀವ್ರ ತಲೆ ನೋವಿನಿಂದ ಬಿದ್ದುಬಿಟ್ಟಿದ್ದಾರೆ ಅಂತಾ ಬೇಸರದಲ್ಲಿ ಹೇಳಿದಳು.

ನನಗೆ ಒಂದು ಕ್ಷಣ ಏನು ಮಾಡಬೇಕು ಎಂದು ತೋಚಲಿಲ್ಲ. ಬ್ಲ್ಯಾಂಕ್ ಆಗಿಬಿಟ್ಟೆ. ಏನು ಹೇಳಬೇಕು ಅಂತಲೇ ಗೊತ್ತಾಗಲಿಲ್ಲ. ನಾನು ಕೂಡ ಕಣ್ಣೀರು ಹಾಕಿದೆ. ನಾನು ಅಳುತ್ತಿರೋದನ್ನು ಯಾರೂ ನೋಡುತ್ತಿಲ್ಲ ಅನ್ನೋದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದೆ. ದಿಕ್ಕೇ ತೋಚದ ನನಗೆ ರೂಮಿನಲ್ಲಿ ಒಬ್ಬನೇ ಕೂತಿದ್ದೆ. ಅಳುತ್ತಲೇ ಇದ್ದೆ!

ಈ ಸಂದರ್ಭದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಬಿಸಿಸಿಐ ಕಾರ್ಯಾಧ್ಯಕ್ಷ ಜೈ ಶಾ ಅವರು ಮಾಡಿದ ಸಹಾಯವನ್ನು ಅಶ್ವಿನ್ ನೆನಪಿಸಿಕೊಂಡಿದ್ದಾರೆ. ರಾಜ್​ಕೋಟ್​ನಿಂದ ಚೆನ್ನೈಗೆ ಹೋಗುವ ಸಂದರ್ಭದಲ್ಲಿ ಅಶ್ವಿನ್​ ಸಹಾಯಕ್ಕೆ ಬಂದಿದ್ದು ಚೇತೇಶ್ವರ್ ಪೂಜಾರ. ಚೇತೇಶ್ವರ್ ಪೂಜಾರ ಚೆನ್ನೈಗೆ ಹೋಗಲು ಚಾರ್ಟೆಡ್​ ವಿಮಾನದ ವ್ಯವಸ್ಥೆ ಮಾಡಿದರು. ಅಲ್ಲಿಂದ ವಾಪಸ್ ಬರುವಾಗ ನನಗೆ ಜೈ ಶಾ ಅವರು ವಿಮಾನದ ವ್ಯವಸ್ಥೆ ಮಾಡಿಕೊಟ್ಟರು ಎಂದಿದ್ದಾರೆ.

ಅದಕ್ಕೂ ಮೊದಲ ಅಂದರೆ ಹೋಟೆಲ್​​ನಿಂದ ಬರಲು ನೆರವಾಗಿದ್ದು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್​. ನಾನು ಅಸಹಾಯಕನಾಗಿ ಕೂತಿದ್ದ ಕ್ಷಣದಲ್ಲಿ ನನ್ನ ಬೆನ್ನಿಗೆ ನಿಂತಿದ್ದು ರೋಹಿತ್ ಶರ್ಮಾ. ನಾನು ಮೂರನೇ ಟೆಸ್ಟ್ ಪಂದ್ಯವನ್ನು ಆಡಬೇಕೇ? ಅಮ್ಮನನ್ನು ನೋಡಲು ಹೋಗಬೇಕೇ ಎಂದು ಗೊಂದಲದಲ್ಲಿದ್ದೆ. ಆಗ ರೋಹಿತ್ ಶರ್ಮಾ ಬಂದು ಹೇಳಿದರು. ನೀನು ಯೋಚನೆ ಮಾಡೋದನ್ನು ನಿಲ್ಲಿಸು. ನೀನು ಮನೆಗೆ ಹೋಗು, ಕುಟುಂಬದ ಜೊತೆ ಇರು. ನಾವು ಅದಕ್ಕೆ ಬೇಕಾದ ಎಲ್ಲಾ ಸಹಾಯವನ್ನೂ ಮಾಡುತ್ತೇವೆ ಒತ್ತಾಯಿಸಿದರು. ಅಲ್ಲದೇ ನನ್ನ ಜೊತೆಗೆ ವೈದ್ಯಾಧಿಕಾರಿ ಒಬ್ಬರು ಕಳುಹಿಸಿಕೊಟ್ಟರು. ನನ್ನ ಪ್ರಕಾರ ರೋಹಿತ್ ಶರ್ಮಾ ಔಟ್​ಸ್ಟ್ಯಾಂಡಿಂಗ್ ಲೀಡರ್. ಅವರಲ್ಲಿ ಒಳ್ಳೆಯ ಹೃದಯ ಇದೆ ಎಂದಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಅಶ್ವಿನ್ ಮೈದಾನಕ್ಕೆ ಇಳಿಯಲಿಲ್ಲ. ಆದರೆ ನಾಲ್ಕನೇ ದಿನಕ್ಕೆ ಅವರು ಮತ್ತೆ ತಂಡವನ್ನು ಸೇರಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನು ಅಳುತ್ತ ಕೂತಿದ್ದೆ..’ ರೋಹಿತ್ ಶರ್ಮಾಗೆ ಇರುವ ‘ಮಾನವೀಯ ಗುಣ’ ಅನಾವರಣ ಮಾಡಿದ ಅಶ್ವಿನ್

https://newsfirstlive.com/wp-content/uploads/2024/03/ASWIN.jpg

Load More