/newsfirstlive-kannada/media/post_attachments/wp-content/uploads/2024/04/Will-Jacks-4.jpg)
ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 41 ಬಾಲ್​​ನಲ್ಲಿ ಸ್ಫೋಟಕ ಶತಕ ಬಾರಿಸಿ ವಿಲ್ ಜಾಕ್ಸ್​, ಆರ್​ಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್​ ತಂಡವು 200 ರನ್​​ ಕಲೆ ಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ 16ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು.
ಅದಕ್ಕೆ ಕಾರಣ ಕೊಹ್ಲಿ ಮತ್ತು ವಿಲ್ ಜಾಕ್ಸ್ ಅವರ ಅದ್ಭುತ ಆಟ. ಪಂದ್ಯ ಮುಗಿದ ಬಳಿಕ ಮಾತನಾಡಿದ ವಿಲ್ ಜಾಕ್ಸ್, ಆರಂಭದಲ್ಲಿ ನಾನು ತುಂಬಾ ಕಷ್ಟಪಟ್ಟೆ. ಮೊದಲ 15 ಬಾಲ್​ಗಳನ್ನು ಎದುರಿಸುವಾಗ ನರ್ವಸ್ ಆಗಿದ್ದೆ. ವಿರಾಟ್ ಕೊಹ್ಲಿ ಜೊತೆಯಲ್ಲಿದ್ದರು, ಅವರು ಸಾಕಷ್ಟು ಸಹಾಯ ಮಾಡಿದ್ದರು.
/newsfirstlive-kannada/media/post_attachments/wp-content/uploads/2024/04/Will-Jacks-3.jpg)
ಕೊಹ್ಲಿ ಸ್ಪಿನ್ ಬಾಲ್​ಗೆ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ನನಗೆ ಮಾರ್ಗದರ್ಶನ ಮಾಡಿದರು. ಪಿಚ್​​ ಬಗ್ಗೆ ಆಗಾಗ ಮಾಹಿತಿ ನೀಡುತ್ತಿದ್ದರು. ಅವರಲ್ಲಿರುವ ಅನುಭವನ್ನು ಹಂಚಿಕೊಂಡರು. ಅವರು ನಿರಂತರವಾಗಿ ನನ್ನ ಬಳಿ ಮಾತನಾಡುತ್ತಲೇ ಇದ್ದರು. ವಿರಾಟ್​​ ನನ್ನ ಬೆನ್ನು ತಟ್ಟಿದ್ರು. ಸ್ಟ್ರೈಕ್​ ರೊಟೇಟ್​ ಮಾಡಲು ಅವಕಾಶ ಮಾಡಿಕೊಟ್ಟರು. ಕೊಹ್ಲಿ ಅವರಿಂದ ನಾನು ಬಹಳ ಕಲಿತಿದ್ದೇನೆ ಎಂದರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us