newsfirstkannada.com

‘ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ’- ಪ್ರಜ್ವಲ್​ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?

Share :

Published May 27, 2024 at 4:25pm

Update May 27, 2024 at 4:27pm

  ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ಮಾಡಿದ್ದಾರೆ

  ಆರೋಪಗಳನ್ನು ನೋಡಿ, ಕೇಳಿ ನಾನು ಡಿಪ್ರೆಶನ್​ಗೆ ಹೋಗಬೇಕಾಯಿತು

  ನನ್ನ ತಂದೆ, ತಾಯಿ, ದೇವೇಗೌಡರು, ಕುಮಾರಣ್ಣರ ಕ್ಷಮೆ ಕೇಳುತ್ತೇನೆ

ಬೆಂಗಳೂರು: ಹಾಸನದಲ್ಲಿ ವೈರಲ್‌ ಆದ ಅಶ್ಲೀಲ ವಿಡಿಯೋ ಹಾಗೂ ಪೆನ್‌ಡ್ರೈವ್ ಪ್ರಕರಣ ರಾಜ್ಯ, ದೇಶಾದ್ಯಂತ ಸುದ್ದಿಯಾಗಿತ್ತು. ಸೆಕ್ಸ್‌ ಸ್ಕ್ಯಾಂಡಲ್ ಹಗರಣದ ತನಿಖೆ ಜೋರಾಗಿರುವಾಗಲೇ ಹೊಸ ಟ್ವಿಸ್ಟ್ ಸಿಕ್ಕಿದೆ. ಸತತ ಒಂದು ತಿಂಗಳ ಬಳಿಕ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಅವರು ಇಡೀ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ವಾಪಸ್​ ಬಾ.. ದೇಶ ಬಿಟ್ಟು ಹೋದ ಪ್ರಜ್ವಲ್​ಗೆ ದೇವೇಗೌಡ ಖಡಕ್​ ಎಚ್ಚರಿಕೆ! 

ವಿದೇಶದಿಂದಲೇ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ ಅವರು, ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ. ಇದೇ ಶುಕ್ರವಾರ ಅಂದ್ರೆ ಮೇ 31ರಂದು ಎಸ್‌ಐಟಿ ಮುಂದೆ ಹಾಜರಾಗಲಿದ್ದೇನೆ. ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಎದುರಿಸಲು ನಾನು ಸಿದ್ಧ ಎಂದಿದ್ದಾರೆ.

ವಿಡಿಯೋದಲ್ಲಿ ನನ್ನ ತಂದೆ, ತಾಯಿ, ದೇವೇಗೌಡರು, ಕುಮಾರಣ್ಣರ ಕ್ಷಮೆ ಕೇಳ್ತೇನೆ ಎಂದಿರುವ ಪ್ರಜ್ವಲ್ ರೇವಣ್ಣ ಅವರು ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ಮಾಡಿದ್ದಾರೆ. ಕೆಲ ಶಕ್ತಿಗಳು ಒಟ್ಟಾಗಿ ಸೇರಿಕೊಂಡು ನನ್ನ ವಿರುದ್ದ ಪಿತೂರಿ ಮಾಡಿದ್ರು. ಕಾಂಗ್ರೆಸ್ ನಾಯಕರು, ರಾಹುಲ್‌ ಗಾಂಧಿ ನನ್ನ ವಿರುದ್ದ ಬಹಿರಂಗವಾಗಿ ಮಾತಾಡಿದ್ದರು. ಈ ಮಾಹಿತಿಯನ್ನು ನೋಡಿ ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ ಎಂದಿದ್ದಾರೆ.

ಪ್ರಜ್ವಲ್‌ ವಿಡಿಯೋದಲ್ಲಿ ಇರೋದೇನು? 

ಎಲ್ಲರಿಗೂ ನಮಸ್ಕಾರ.. ಮೊದಲನೆಯದಾಗಿ ನನ್ನ ತಂದೆ ತಾಯಿಗೆ, ತಾತನಿಗೆ, ನನ್ನ ಕುಮಾರಣ್ಣನಿಗೆ, ನಾಡಿನ ಜನತೆಗೆ ಮತ್ತು ನನ್ನ ಎಲ್ಲ ಕಾರ್ಯತರ್ಕರಿಗೆ ಕ್ಷಮಾಪಣೆ ಕೇಳಲು ಬಂದಿದ್ದೇನೆ. ನಾನು ಫಾರಿನ್​ನಲ್ಲಿ  ಎಲ್ಲಿ ಇದ್ದೇನೆ ಅಂತ ಸರಿಯಾಗಿ ಮಾಹಿತಿ ನೀಡಿರಲಿಲ್ಲ. 26ರ ಚುನಾವಣೆ ನಡೆದಂತ ಸಂದರ್ಭದಲ್ಲಿ ನನ್ನ ಮೇಲೆ ಯಾವುದೇ ಕೇಸ್​ ದಾಖಲಾಗಿ ಇರಲಿಲ್ಲ. ಎಸ್​ಐಟಿ ಕೂಡ ರಚನೆಯಾಗಿರಲಿಲ್ಲ. 26ರಂದು ವಿದೇಶಕ್ಕೆ ಹೋಗುವ ಬಗ್ಗೆ ಪ್ರೀ ಪ್ಲಾನ್ ಆಗಿತ್ತು. ಹಾಗಾಗಿ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ.

ನಾನು ವಿದೇಶದಲ್ಲಿದ್ದಾಗ ನ್ಯೂಸ್​ ನೋಡಿ ನನ್ನ ಮೇಲೆ ಆರೋಪ ಬಂದಿರುವುದು ಕಂಡುಬಂದಿದೆ. ಎಸ್​ಐಟಿ ನೋಟಿಸ್​ಗೂ ಕೂಡ ನಾನು ಟ್ವೀಟ್​ ಹಾಗೂ ವಕೀಲರ ಮುಖಾಂತರ 7 ದಿನ ಸಮಯ ಹೇಳಿದ್ದೆ. ಇದಾದ ನಂತರ ಕಾಂಗ್ರೆಸ್​ ಹಿರಿಯ ನಾಯಕ ರಾಹುಲ್ ಗಾಂಧಿ ಸೇರಿ ಎಲ್ಲ ವೇದಿಕೆ ಮೇಲೆ ಈ ವಿಚಾರದ ಬಗ್ಗೆ ಮಾತನಾಡಲು ಶುರು ಮಾಡಿದ್ದರು.

ಇದನ್ನು ನೋಡಿ, ಕೇಳಿ ನಾನು ಡಿಪ್ರೆಶನ್​ಗೆ ಹೋಗಬೇಕಾಯಿತು. ಹಾಗಾಗಿ ನಾನು ಮೊದಲನೆಯದಾಗಿ ಕ್ಷಮೆ ಕೇಳಿದ್ದೇನೆ. ಹಾಸನದಲ್ಲಿ ಕೂಡ ಕೆಲವರು ಸೇರಿಕೊಂಡು ರಾಜಕೀಯ ಪಿತೂರಿ ಮಾಡುವಂತ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಾನು ಬೆಳೆಯುತ್ತಿರುವುದನ್ನು ನೋಡಿದ ಅವರು ಕೆಲ ಕೇಸ್​​ಗಳಲ್ಲಿ ನನ್ನನ್ನು ಭಾಗಿ ಮಾಡಿದ್ದಾರೆ.

ಹೀಗಾಗಿ ಯಾರು ಕೂಡ ಇದರ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ. ನಾನೇ ಮೇ 31ನೇ ತಾರೀಖು ಶುಕ್ರವಾರದಂದು SIT ಮುಂದೆ ಬಂದು ಸರಿಯಾಗಿ ಉತ್ತರ ನೀಡುತ್ತೇನೆ. ಹಾಗೇ ನ್ಯಾಯಲಯದ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿ ಕೂಡ ನನ್ನ ಮೇಲೆ ಇರುವ ಸುಳ್ಳು ಪ್ರಕರಣಗಳಿಂದ ಆಚೆ ಬರುವಂತ ಕೆಲಸ ಮಾಡುತ್ತೇನೆ. ದೇವರ, ಜನರ ಹಾಗೂ ಕುಟುಂಬಸ್ಥರ ಆರ್ಶಿವಾದ ನನ್ನ ಮೇಲೆ ಇರಲಿ. ಮೇ 31ನೇ ತಾರೀಖು ಶುಕ್ರವಾರದಂದು ಬಂದ ಕೂಡಲೇ ಇದಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತೇನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ’- ಪ್ರಜ್ವಲ್​ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?

https://newsfirstlive.com/wp-content/uploads/2024/05/prajaval1.jpg

Load More