ಮುಂದಿನ 5 ವರ್ಷಗಳಲ್ಲೂ ಕೂಡ ನಾನೇ ಮುಖ್ಯಮಂತ್ರಿ -ದಸರಾ ಕಾರ್ಯಕ್ರಮದಲ್ಲಿ ಸಿದ್ದು ಕೌಂಟರ್

author-image
Ganesh
Updated On
ಮುಂದಿನ 5 ವರ್ಷಗಳಲ್ಲೂ ಕೂಡ ನಾನೇ ಮುಖ್ಯಮಂತ್ರಿ -ದಸರಾ ಕಾರ್ಯಕ್ರಮದಲ್ಲಿ ಸಿದ್ದು ಕೌಂಟರ್
Advertisment
  • ನಾನು ಮಂತ್ರಿಯಾಗಿ 40 ವರ್ಷಗಳಾಯಿತು- ಸಿಎಂ
  • ‘ನಾನು ಯಾವ ತಪ್ಪು ಮಾಡಿಲ್ಲ, ಒಂದು ವೇಳೆ ಮಾಡಿದ್ದರೆ..’
  • ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

ಮೈಸೂರು: ರಾಜ್ಯದಲ್ಲಿ ದೇವರಾಜ ಅರಸು ಬಿಟ್ಟರೆ 5 ವರ್ಷ ಸಿಎಂ ಆಗಿದ್ದು ನಾನೇ, ಅದು ಸಿದ್ದರಾಮಯ್ಯ. ಮುಂದಿನ 5 ವರ್ಷಗಳಲ್ಲೂ ಕೂಡ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.. ಈಗಲೂ ಎಷ್ಟೇ ತೊಡಕು ಬಂದರೂ ತಾಯಿಯ ಚಾಮುಂಡೇಶ್ವರಿ ಆಶೀರ್ವಾದ ನನಗಿದೆ. ನಾನು ಮಂತ್ರಿಯಾಗಿ 40 ವರ್ಷಗಳಾಯಿತು. ನಾನು ಯಾವ ತಪ್ಪು ಮಾಡಿಲ್ಲ, ಮಾಡಿದ್ರೆ ಸುದೀರ್ಘ ರಾಜಕೀಯದಲ್ಲಿ ಇರುತ್ತಿರಲಿಲ್ಲ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಜಿಟಿ ದೇವೇಗೌಡರು ಮತ್ತು ನಾವು ಒಂದೇ ತಾಲ್ಲೂಕಿನವರು. ಜಿಟಿ ದೇವೇಗೌಡ ಸತ್ಯಕ್ಕೆ ಜಯ ಸಿಗ್ಬೇಕು ಎಂದಿರುವುದು ನನಗೆ ಮತ್ತಷ್ಟು ಬಲ ಬಂದಿದೆ ಎಂದರು.

ಅಂದು ನಾನು ಡಿಕೆ ಇಬ್ಬರು ಒಟ್ಟಿಗೆ ಬೆಟ್ಟಕ್ಕೆ ಬಂದು ಚಾಮುಂಡಿ ತಾಯಿಯ ಪೂಜೆ ಮಾಡಿ 5 ಗ್ಯಾರೆಂಟಿಗೆ ಶಕ್ತಿ ಕೊಡಮ್ಮ ಅಂತ ಕೇಳಿದ್ವಿ. ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಎಲ್ಲಾ ಗ್ಯಾರೆಂಟಿ ಜಾರಿ ಮಾಡಿದ್ದೇವೆ. ಇದು ಚಾಮುಂಡಿಯ ಆಶೀರ್ವಾದ ಎಂದು ಪುನರುಚ್ಚರಿಸಿದರು.

ಇದನ್ನೂ ಓದಿ:ಚುನಾಯಿತ ಸರ್ಕಾರಗಳನ್ನ ಉಳಿಸುವ ಚಿಂತನೆ ಆಗಬೇಕು-ಹಂಪ ನಾಗರಾಜಯ್ಯ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment