Advertisment

ಧೋನಿಯನ್ನ ನಾನು ಕ್ಷಮಿಸಲ್ಲ, ಮಗನ ಬದುಕು ನಾಶ ಮಾಡಿದ; ಮಾಜಿ ಕ್ರಿಕೆಟಿಗನ ತಂದೆ ಗಂಭೀರ ಆರೋಪ

author-image
AS Harshith
Updated On
ಧೋನಿಯನ್ನ ನಾನು ಕ್ಷಮಿಸಲ್ಲ, ಮಗನ ಬದುಕು ನಾಶ ಮಾಡಿದ; ಮಾಜಿ ಕ್ರಿಕೆಟಿಗನ ತಂದೆ ಗಂಭೀರ ಆರೋಪ
Advertisment
  • ಧೋನಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ
  • ಭಾರತದ ಮಾಜಿ ಆಲ್​​ರೌಂಡರ್ ಬಗ್ಗೆ ತಂದೆಯ ಮಾತು​
  • ಮಗನ ವೃತ್ತಿ ಜೀವನ ಹಾಳು ಮಾಡಿದ್ದು ಕ್ಯಾಪ್ಟನ್​ ಕೂಲ್​

ಯುವರಾಜ್​ ಸಿಂಗ್​​ ಭಾರತದ ಮಾಜಿ ಆಲ್​ರೌಂಡರ್​​. ಸಿಕ್ಸರ್​ ಸಿಂಗ್​ ಎಂದೇ ಪ್ರಖ್ಯಾತಿ ಪಡೆದಿದ್ದರು. ಆದರೆ ಧೋನಿ ಅವರ ವೃತ್ತಿ ಜೀವನ ಹಾಳು ಮಾಡಿದರು ಎಂದು ಯುವರಾಜ್​ ಸಿಂಗ್​ ತಂದೆ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ.

Advertisment

ಯೋಗರಾಜ್​​ ಸಿಂಗ್​​ರವರು ಧೋನಿಯನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡಿದ್ದಾರೆ. ಕ್ಯಾಪ್ಟನ್​ ಕೂಲ್​ ಯುವರಾಜ್​ನ​ ವೃತ್ತಿ ಜೀವನ ಹಾಳು ಮಾಡಿದರು. ಇನ್ನೂ ನಾಲ್ಕೈದು ವರ್ಷಗಳ ಕಾಲ ಆಡಬಹುದಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಲ್​​ ಆಕ್ಷನ್​​ಗೆ ಮುನ್ನವೇ ಬಿಗ್​ ಟ್ರೇಡ್​​.. ಆರ್​​ಸಿಬಿಗೆ ಸ್ಟಾರ್​​ ಪ್ಲೇಯರ್​ ರೀ ಎಂಟ್ರಿ!

publive-image

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗರಾಜ್​ ಸಿಂಗ್​, ‘ನಾನು ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಅವರು ಶ್ರೇಷ್ಠ ಕ್ರಿಕೆಟಿಗನಾದರೆ ನನ್ನ ಮಗನ ವಿರುದ್ಧ ಏನು ಮಾಡಿದ್ರು. ಅದು ಈಗ ಬೆಳಕಿಗೆ ಬರುತ್ತಿದೆ. ನಾನು ಎಂದಿಗೂ ಕ್ಷಮಿಸುವುದಿಲ್ಲ. ಅವರು ನನ್ನ ಕುಟುಂಬವಾಗಿದ್ದರೂ ಸರಿ ನಾನು ತಪ್ಪು ಮಾಡಿಕೊಂಡದವರನ್ನು ಕ್ಷಮಿಸಲ್ಲ ಎಂದಿದ್ದಾರೆ.

Advertisment

publive-image

ಇದನ್ನೂ ಓದಿ: IPL 2025: RCB ರೀಟೈನ್​ ಲಿಸ್ಟ್​ ರೆಡಿ; ಬೆಂಗಳೂರು ತಂಡದಿಂದ ಸ್ಟಾರ್​ ಆಟಗಾರ ಔಟ್​​!

ಯಾರಾದರೂ ಯುವರಾಜ್​ ಸಿಂಗ್​ನಂತಹ ಮಗನನ್ನು ಹುಟ್ಟು ಹಾಕಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಗೌತಮ್​ ಗಂಭೀರ್​​, ವಿರೇಂದ್ರ ಸೆಹ್ವಾಗ್​ ಮತ್ತು ಯುವರಾಜ್​​​ ಸಿಂಗ್​​ನಂತರ ಆಟಗಾರರು ಎಂದಿಗೂ ಹುಟ್ಟಿಲ್ಲ ಎಂದಿಗೂ ಹುಟ್ಟಲ್ಲ. ಯುವರಾಜ್​ ಸಿಂಗ್​ಗೆ ಭಾರತ ರತ್ನ ಕೊಡಬೇಕು. ಯುವಿ ಕ್ಯಾನ್ಸರ್​​ ವಿರುದ್ಧ ಹೋರಾಡಿ ಭಾರತಕ್ಕೆ ವಿಶ್ವಕಪ್​​ ಗೆದ್ದು ಕೊಟ್ಟವರು ಎಂದು ತಂದೆ ಯೋಗರಾಜ್​ ಸಿಂಗ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment