/newsfirstlive-kannada/media/post_attachments/wp-content/uploads/2025/01/Job_aspirants-1.jpg)
ಅಗ್ನಿವೀರ್ಗೆ ಸೇರಲು ಬಯಸುವ ಯುವಕ, ಯುವತಿಯರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಲು ಭಾರತೀಯ ವಾಯುಪಡೆ (IAF Agniveervayu) ಇಲಾಖೆಯು ಅವಕಾಶ ನೀಡಿದೆ. ಹೀಗಾಗಿ ಈ ಮೊದಲು ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಈಗ ಮತ್ತೆ ಅಪ್ಲೇ ಮಾಡಬಹುದು.
ಭಾರತೀಯ ವಾಯುಪಡೆ ಇಲಾಖೆಯು ಇತ್ತೀಚೆಗೆ ಅಗ್ನಿವೀರ್ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಿತ್ತು. ಅರ್ಜಿಯ ಕೊನೆಯ ದಿನಾಂಕ ಕೂಡ ಮುಕ್ತಾಯವಾಗಿತ್ತು. ಆದರೆ ಭಾರತೀಯ ವಾಯುಪಡೆಯೂ ಈ ದಿನಾಂಕವನ್ನು ಇದೀಗ ವಿಸ್ತರಣೆ ಮಾಡಿ ಉದ್ಯೋಗಾಕಾಂಕ್ಷಿಗಳಿಗೆ ಶುಭಸುದ್ದಿ ನೀಡಿದೆ.
ಇದನ್ನೂ ಓದಿ:608 ಉದ್ಯೋಗ ಆಹ್ವಾನ ಮಾಡಿರುವ ESIC.. ಆರಂಭದಲ್ಲೇ 56,100 ರೂಪಾಯಿ ಸಂಬಳ
ಅಭ್ಯರ್ಥಿಗಳು ವಾಯುಪಡೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು. ಕೇವಲ ಇವು ಆನ್ಲೈನ್ ಅರ್ಜಿ ಮಾತ್ರ ಆಗಿವೆ. ಬೇರೆ ಮೂಲದಿಂದ ಬರುವ ಅರ್ಜಿಗಳನ್ನು ಇಲಾಖೆ ಸ್ವೀಕಾರ ಮಾಡಲ್ಲ ಎಂದು ತಿಳಿಸಲಾಗಿದೆ. ಈ ಮೊದಲು ಭಾರತೀಯ ವಾಯುಪಡೆ ಇಲಾಖೆಯು ಅರ್ಜಿ ಸಲ್ಲಿಕೆ ಮಾಡಲು ದಿನಾಂಕ 27 ಜನವರಿ 2025 ಕೊನೆಯ ಆಗಿತ್ತು.
ಆದರೆ ಈಗ ವಿಸ್ತರಣೆ ಮಾಡಿದ್ದು ದಿನಾಂಕ 02 ಫೆಬ್ರುವರಿ 2025ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ಎಂದು ಹೇಳಬಹುದು. ಆನ್‌ಲೈನ್‌ನಲ್ಲಿ ನೋಂದಾಯಿತ ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಲಾಗುತ್ತಿದೆ. ಈ ಹುದ್ದೆಗಳ ಸಂಪೂರ್ಣ ಮಾಹಿತಿಗಾಗಿ ಲಿಂಕ್ ಈ ಕೆಳಗೆ ಇದೆ.
ಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ- https://newsfirstlive.com/iaf-agniveervayu-recruitment-2024-25-registration-soon/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ