ಅಗ್ನಿವೀರ್ ಹುದ್ದೆಗಳ ನೇಮಕಾತಿಗೆ ಅರ್ಜಿ.. ಯುವಕ, ಯುವತಿಯರಿಗೆ ಸುವರ್ಣಾವಕಾಶ​

author-image
Bheemappa
Updated On
ಕ್ರೀಡಾ ಸಚಿವಾಲಯ ಅಡಿ ಉದ್ಯೋಗಗಳ ನೇಮಕಾತಿ.. ಎಷ್ಟು ಹುದ್ದೆಗಳು ಖಾಲಿ ಇವೆ?
Advertisment
  • ಅಗ್ನಿವೀರ್​ ಹುದ್ದೆಗಳಿಗೆ ಯಾವ ಕೋರ್ಸ್ ಮಾಡಿರಬೇಕು.?
  • ಯುವತಿ, ಯುವಕರು ಇಬ್ಬರಿಗು ಅವಕಾಶ ನೀಡಿದ ಐಎಎಫ್
  • ಮೊದಲ ತಿಂಗಳಲ್ಲೇ ನೇಮಕಾತಿ ಹೊರಡಿಸಿರುವ ಸಂಸ್ಥೆ

ಭಾರತೀಯ ವಾಯುಪಡೆ (IAF Agniveervayu) ಯಲ್ಲಿ ಅಗ್ನಿವೀರ್ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ. ಈ ಸಂಬಂಧದ ವಿವರವಾದ ಅಧಿಸೂಚನೆಯನ್ನು ಭಾರತೀಯ ವಾಯುಪಡೆ ಬಿಡುಗಡೆ ಮಾಡಿದೆ. ಹೀಗಾಗಿ ಯುವಕರಲ್ಲಿ ಯಾರು ಅಗ್ನಿವೀರ್ ಹುದ್ದೆಗಳಿಗೆ ಸೇರ್ಪಡೆಯಾಗಬೇಕು ಎನ್ನುತ್ತಿರೋ ಅವರು ಈಗಿನಿಂದ ಪೂರ್ವ ತಯಾರಿ ಮಾಡಿಕೊಳ್ಳುವುದು ಮುಖ್ಯ. ಇದರಲ್ಲಿ ಆಕಾಂಕ್ಷಿಗಳು ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಹೊತ್ತು ಕೊಡಬೇಕಾಗಿದೆ.

ಪುರುಷ ಹಾಗೂ ಮಹಿಳಾ ಇಬ್ಬರಿಗೂ ಈ ಹುದ್ದೆಗಳನ್ನು ನೀಡಲಾಗುತ್ತದೆ. ಅಗ್ನಿವೀರ್ ಹುದ್ದೆಗಳು ಎಷ್ಟು ಇವೆ ಎಂದು ವಾಯುಪಡೆಯು ಮಾಹಿತಿ ನೀಡಲ್ಲವಾದರೂ ಹುದ್ದೆಗಳನ್ನು ನೇಮಕಾತಿ ಮಾಡುವುದರ ಬಗ್ಗೆ ಮಾಹಿತಿ ನೀಡಿದೆ. ಹುದ್ದೆಗಳಿಗೆ ಆನ್​ಲೈನ್​ ಮೂಲಕ ಅಪ್ಲೇ ಮಾಡಬೇಕು ಎಂದು ಹೇಳಲಾಗಿದೆ. ಇದಕ್ಕಾಗಿ ಸಂಸ್ಥೆಯು ಈ ಲಿಂಕ್ https://agnipathvayu.cdac.in ಅನ್ನು ನೀಡಿದೆ. ಇದರ ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಕು.

ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು, ಶುಲ್ಕಗಳು, ವಯಸ್ಸಿನ ಮಿತಿ, ವಿದ್ಯಾರ್ಹತೆ, ವೇತನ ಪ್ರಮಾಣ ಸೇರಿ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಲಿಂಕ್‌ ಕೂಡ ಇವೆ. ಐಎಎಫ್ ಅಗ್ನಿವೀರ್ ವಾಯುಪಡೆ ನೇಮಕಾತಿ ಕುರಿತು ಎಲ್ಲಾ ಮಾಹಿತಿ ಲಭ್ಯವಿದೆ.

ಸಂಬಳ ಹೇಗಿದೆ?

  • ಮೊದಲ ವರ್ಷ- ₹30,000
  • 2ನೇ ವರ್ಷ- ₹33,000
  • 3ನೇ ವರ್ಷ- ₹36,500
  • 4ನೇ ವರ್ಷ- ₹40,000

4 ವರ್ಷದ ನಂತರ ಸೇವಾ ನಿಧಿ ಅಡಿ ಅಗ್ನಿ ವೀರ್​​ಗೆ ₹10.4 ಲಕ್ಷ ನೀಡಲಾಗುತ್ತದೆ

ವಿದ್ಯಾರ್ಹತೆ ಏನು ಕೇಳಿದ್ದಾರೆ..?

ದ್ವಿತೀಯ ಪಿಯುಸಿ (ಗಣಿತ, ಭೌತಶಾಸ್ತ್ರ, ಇಂಗ್ಲಿಷ್)
ಅಥವಾ
ಡಿಪ್ಲೊಮಾದಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು

ಇದನ್ನೂ ಓದಿ: SSLC, PUC ಮುಗಿಸಿದವ್ರಿಗೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಹುದ್ದೆಗಳು

publive-image

ವಯೋಮಿತಿ

01 ಜನವರಿ 2005 ರಿಂದ 01 ಜುಲೈ 2008ರ ನಡುವೆ ಜನಿಸಿರಬೇಕು. 21 ವರ್ಷಗಳು ಆಗಿರಬೇಕು.

ಪರೀಕ್ಷಾ ಶುಲ್ಕ ಎಷ್ಟು..?

  • ಎಲ್ಲರಿಗೂ 550 ರೂಪಾಯಿಗಳು
  • ಆನ್​ಲೈನ್ ಮೂಲಕ ಪಾವತಿಸಬೇಕು

ಆಯ್ಕೆ ವಿಧಾನ ಹೇಗೆ?

ಆನ್​​ಲೈನ್ ಪರೀಕ್ಷೆ

  • ಈ ಪರೀಕ್ಷೆಯಲ್ಲಿ 4 ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿದರೆ 1 ಅಂಕ ಕಡಿತ ಇರುತ್ತದೆ.
  • ಪಿಸಿಕಲ್ ಫಿಟ್ನೆಸ್ ಟೆಸ್ಟ್​ ಇರುತ್ತದೆ. ಇದರಲ್ಲಿ 7 ನಿಮಿಷದಲ್ಲಿ 1.6 ಕೀಲೋ ಮೀಟರ್ ದೂರ ರನ್ನಿಂಗ್ ಮಾಡಬೇಕು. ಮಹಿಳೆಯರಿಗೆ 8 ನಿಮಿಷ ಇರುತ್ತದೆ. ಇನ್ನು ಕೆಲ ಸ್ಪೋರ್ಟ್ಸ್​ಗಳಿರುತ್ತವೆ.

ಪ್ರಮುಖವಾದ ದಿನಾಂಕಗಳು

ಅರ್ಜಿ ಆರಂಭದ ದಿನಾಂಕ- 7 ಜನವರಿ 2025
ಅರ್ಜಿ ಕೊನೆಯ ದಿನಾಂಕ- 27 ಜನವರಿ 2025

ಪೂರ್ಣ ಮಾಹಿತಿಗಾಗಿ ಲಿಂಕ್- https://agnipathvayu.cdac.in/AV/img/upcoming/AGNIVEER_VAYU_01-2026.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment