ಭಾರತೀಯ ವಾಯು ಪಡೆಯಲ್ಲಿ ಯುವಕ, ಯುವತಿಯರಿಗೆ ಅಗ್ನಿವೀರ್​ ಹುದ್ದೆಗಳು.. ನಾಳೆ ಅರ್ಜಿ ಸಲ್ಲಿಕೆಗೆ ಆರಂಭ

author-image
Bheemappa
Updated On
ರಾಜ್ಯ ಸರ್ಕಾರದಡಿ ಉದ್ಯೋಗ ಬಯಸುವರಿಗೆ ಸುವರ್ಣಾವಕಾಶ.. ಇಂದೇ ಅರ್ಜಿ ಸಲ್ಲಿಸಿ
Advertisment
  • IAFನ ಉದ್ಯೋಗಗಳಿಗೆ ನಿಮಗೆಲ್ಲರಿಗೂ ಅವಕಾಶ ಇದೆ
  • ವರ್ಷದ ಆರಂಭದಲ್ಲೇ ವಾಯು ಪಡೆಯಿಂದ ಶುಭಸುದ್ದಿ
  • ಅಗ್ನಿವೀರ್ ಕೆಲಸಕ್ಕೆ ಮೊದಲ ವರ್ಷ ಎಷ್ಟು ಸಂಬಳ ಇದೆ?

ಅಗ್ನಿವೀರ್​ ಉದ್ಯೋಗಗಳಿಗೆ ಸೇರಲು ಬಯಸುವ ಯುವಕ, ಯುವತಿಯರಿಗೆ ಉತ್ತಮವಾದ ಅವಕಾಶ ಒದಗಿ ಬಂದಿದೆ. ಈ ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಉದ್ಯೋಗಾಕಾಂಕ್ಷಿಗಳು ಮುಂದುವರೆಸಿಕೊಂಡು ಹೋಗಬಹುದು. ಏಕೆಂದರೆ ಭಾರತೀಯ ವಾಯುಪಡೆ (IAF Agniveervayu) ಯಲ್ಲಿ ಅಗ್ನಿವೀರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಆಸಕ್ತರು ಅಪ್ಲೇ ಮಾಡಬಹುದು.

ಭಾರತೀಯ ವಾಯುಪಡೆಯು ಈಗಾಗಲೇ ವಿವರವಾದ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಗ್ನಿವೀರ್ ಹುದ್ದೆಗಳಿಗೆ ಸೇರ್ಪಡೆ ಆಗಲು ಬಯಸುವ ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಹೊತ್ತು ಕೊಡಬೇಕು. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಇದ್ದು ಇಬ್ಬರಿಗೂ ಹುದ್ದೆಗಳು ಮೀಸಲಿವೆ. ಈ ಕೆಲಸಗಳಿಗೆ ಆನ್​ಲೈನ್​ ಮೂಲಕ ಅಪ್ಲೇ ಮಾಡಬೇಕು.

ಸಂಸ್ಥೆಯhttps://agnipathvayu.cdac.in ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು. ನಾಳೆಯಿಂದಲೇ ಅರ್ಜಿಗಳು ಆರಂಭವಾಗುತ್ತಿವೆ. ಹೀಗಾಗಿ ಆಕಾಂಕ್ಷಿಗಳು ಇವುಗಳಿಗೆ ಪ್ರಯತ್ನಿಸಬಹುದು. ಐಎಎಫ್ ಅಗ್ನಿವೀರ್ ವಾಯುಪಡೆ ನೇಮಕಾತಿ ಕುರಿತು ಎಲ್ಲಾ ಮಾಹಿತಿ ಇಲ್ಲಿ ಲಭ್ಯವಿದೆ. ವಿದ್ಯಾರ್ಹತೆ, ವೇತನ ಪ್ರಮಾಣ, ಪ್ರಮುಖ ದಿನಾಂಕಗಳು, ಶುಲ್ಕ ಪಾವತಿ, ವಯಸ್ಸಿನ ಮಿತಿ, ಅರ್ಜಿ ಸಲ್ಲಿಸುವ ವಿಧಾನ ಸೇರಿ ಇತರೆ ಮಾಹಿತಿ ಇಲ್ಲಿದೆ.

ವಿದ್ಯಾರ್ಹತೆ ಏನು ಕೇಳಿದ್ದಾರೆ..?

ದ್ವಿತೀಯ ಪಿಯುಸಿ (ಗಣಿತ, ಭೌತಶಾಸ್ತ್ರ, ಇಂಗ್ಲಿಷ್)
ಅಥವಾ
ಡಿಪ್ಲೊಮಾದಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು

ವಯೋಮಿತಿ

01 ಜನವರಿ 2005 ರಿಂದ 01 ಜುಲೈ 2008ರ ನಡುವೆ ಜನಿಸಿರಬೇಕು.
21 ವರ್ಷಗಳು ಆಗಿರಬೇಕು.

ಇದನ್ನೂ ಓದಿ:ರೈಲ್ವೆ ಇಲಾಖೆಯಿಂದ ಗುಡ್​ನ್ಯೂಸ್; ಬೃಹತ್ ಮಟ್ಟದಲ್ಲಿ ಉದ್ಯೋಗ ನೇಮಕಾತಿ.. SSLC ಮುಗಿಸಿದ್ರೆ ಸಾಕು

publive-image

ತಿಂಗಳ ಸಂಬಳ ಎಷ್ಟು?

  • 1ನೇ ವರ್ಷ- ₹30,000
  • 2ನೇ ವರ್ಷ- ₹33,000
  • 3ನೇ ವರ್ಷ- ₹36,500
  • 4ನೇ ವರ್ಷ- ₹40,000

4 ವರ್ಷದ ನಂತರ ಸೇವಾ ನಿಧಿ ಅಡಿ ಅಗ್ನಿವೀರ್​​ಗೆ ₹10.4 ಲಕ್ಷ ನೀಡಲಾಗುತ್ತದೆ

ಪರೀಕ್ಷಾ ಶುಲ್ಕ ಎಷ್ಟು..?

ಎಲ್ಲರಿಗೂ 550 ರೂಪಾಯಿಗಳು
ಆನ್​ಲೈನ್ ಮೂಲಕ ಪಾವತಿಸಬೇಕು

ಆಯ್ಕೆ ವಿಧಾನ ಹೇಗೆ?

ಆನ್​​ಲೈನ್ ಪರೀಕ್ಷೆ
ಈ ಪರೀಕ್ಷೆಯಲ್ಲಿ 4 ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿದರೆ 1 ಅಂಕ ಕಡಿತ

ಪಿಸಿಕಲ್ ಫಿಟ್ನೆಸ್ ಟೆಸ್ಟ್​ ಇರುತ್ತದೆ. ಇದರಲ್ಲಿ 7 ನಿಮಿಷದಲ್ಲಿ 1.6 ಕೀಲೋ ಮೀಟರ್ ದೂರ ರನ್ನಿಂಗ್ ಮಾಡಬೇಕು. ಮಹಿಳೆಯರಿಗೆ 8 ನಿಮಿಷ ಇರುತ್ತದೆ. ಇನ್ನು ಕೆಲ ಸ್ಪೋರ್ಟ್ಸ್​ಗಳಿರುತ್ತವೆ.

ಮುಖ್ಯವಾದ ದಿನಾಂಕಗಳು

ಅರ್ಜಿ ಆರಂಭದ ದಿನಾಂಕ- 7 ಜನವರಿ 2025
ಅರ್ಜಿ ಕೊನೆಯ ದಿನಾಂಕ- 27 ಜನವರಿ 2025

ಪೂರ್ಣ ಮಾಹಿತಿಗಾಗಿ ಲಿಂಕ್-https://static-cdn.publive.online/newsfirstlive-kannada/media/pdf_files/AV/img/upcomingAGNIVEER_VAYU_01-2026.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment