/newsfirstlive-kannada/media/post_attachments/wp-content/uploads/2025/04/ROHIT_SHARMA_MI.jpg)
2025ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್​ ತಂಡ ಮುಖಭಂಗಕ್ಕೆ ಒಳಗಾಗುತ್ತಿದೆ. ಗೆಲ್ಲುವ ಪಂದ್ಯಗಳೆಲ್ಲಾ ಕೈ ಜಾರಿ ಹೋಗುತ್ತಿರುವುದು ಮುಜುಗರ ತಂದಿದೆ. ತಂಡದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡು ಕೂಡ ದುರ್ಬಲವಾಗಿ ಕಾಣುತ್ತಿವೆ. ಇದರ ಜೊತೆ ಮುಂಬೈ ತಂಡದ ಮಾಜಿ ಕ್ಯಾಪ್ಟನ್​ ರೋಹಿತ್ ಶರ್ಮಾ ವಿಫಲ ಬ್ಯಾಟಿಂಗ್ ಎಲ್ಲರಿಗೂ ಬೇಸರ ತರಿಸಿದೆ. ಜೊತೆಗೆ ಕಾಮೆಂಟರಿ ಮಾಡುವಾಗ ಇಯಾನ್ ಬಿಷಪ್ ಹಾಗೂ ರವಿಶಾಸ್ತ್ರಿ ಕೂಡ ತಾಳ್ಮೆ ಕಳೆದುಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ್ದ ರೋಹಿತ್ ಶರ್ಮಾ ಕೆಲವೇ ಕೆಲವು ರನ್​ಗಳಿಗೆ ಔಟ್ ಆದರು. 17 ರನ್​ಗಳಿಸಿ ಆಡುವಾಗ ಯಶ್​ ದಯಾಳ್ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಇಯಾನ್ ಬಿಷಪ್ ಇಷ್ಟು ರನ್​ ಸಾಕಾಗಲ್ಲ ಎಂದು ಹೇಳಿದ್ದಾರೆ.
ಕಾಮೆಂಟರಿ ಮಾಡುವಾಗ ಪಂದ್ಯದಲ್ಲಿ ರೋಹಿತ್ ಬೋಲ್ಡ್ ಆಗುತ್ತಿದ್ದಂತೆ 12, 15 ರನ್​ಗಳು, ಇಂತಹ ಸಣ್ಣ ಆರಂಭದ ಬ್ಯಾಟಿಂಗ್ ಬೇಕಾಗಿಲ್ಲ. ರೋಹಿತ್ ಅವರಿಂದ ಎಲ್ಲರೂ ದೊಡ್ಡ ಆರಂಭ ಬಯಸುತ್ತಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ರವಿಶಾಸ್ತ್ರಿ ತಂಡ ಸಂಕಷ್ಟಕ್ಕೆ ಒಳಗಾಗುತ್ತಿದೆ. ಇಂತಹ ಸಮಯದಲ್ಲಿ ರೋಹಿತ್ ಅವರಿಂದ ದೊಡ್ಡ ಇನ್ನಿಂಗ್ಸ್​ ಬೇಕಾಗಿದೆ ಎಂದಿದ್ದಾರೆ.
ಈ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರಿಂದ ಸುಮಾರು 400 ರನ್​ಗಳನ್ನಾದರೂ ನಿರೀಕ್ಷೆ ಮಾಡಬೇಕಿದೆ. ಸದ್ಯ ಅವರ ಬ್ಯಾಟಿಂಗ್​ನಿಂದ 15, 20 ರನ್​ಗಳು ಬರುತ್ತಿರುವುದನ್ನು 40, 60 ರನ್​ಗಳು ಆಗಿ ರೋಹಿತ್ ಬದಲಾವಣೆ ಮಾಡಿಕೊಳ್ಳಬೇಕು ಎಂದು ಕಾಮೆಂಟರಿ ಮಾಡುವಾಗ ಹೇಳಿದ್ದಾರೆ.
ಆರ್​ಸಿಬಿ ಜೊತೆಗಿನ ಪಂದ್ಯ ಮುಗಿದ ಮೇಲೆ ಮಾತನಾಡಿದ ಮುಂಬೈ ಇಂಡಿಯನ್ಸ್​ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ಉತ್ತರಿಸಿದ ಅವರು, ಪವರ್ ಪ್ಲೇನಲ್ಲಿ ನಾವು ನಿರೀಕ್ಷಿಸಿದಷ್ಟು ರನ್​ಗಳು ಬರುತ್ತಿಲ್ಲ. ಇದರಿಂದ ತಂಡ ಸಮಸ್ಯೆಯಲ್ಲಿದೆ. ಅನುಭವಿ ಆಟಗಾರರ ಅವಶ್ಯಕತೆ ಇದೆ. ಹೀಗಾಗಿ ರೋಹಿತ್ ಶರ್ಮಾ ತಂಡದಲ್ಲಿದ್ದಾರೆ. ಆರಂಭದಲ್ಲಿ ಕನ್ಸಿಸ್ಟೆಂಟ್​ ಆಗಿ ಬ್ಯಾಟ್ ಬೀಸಬೇಕಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ