Advertisment

ಅಪ್ಪ, ಅಮ್ಮ ಇಬ್ಬರೂ IAS; 10ನೇ ಮಹಡಿಯಿಂದ ಜಿಗಿದು ಪುತ್ರಿ ಸಾವು.. ಡೆತ್​ನೋಟ್​ನಲ್ಲಿ ಕಾರಣ ರಿವೀಲ್..

author-image
Ganesh
Updated On
ಅಪ್ಪ, ಅಮ್ಮ ಇಬ್ಬರೂ IAS; 10ನೇ ಮಹಡಿಯಿಂದ ಜಿಗಿದು ಪುತ್ರಿ ಸಾವು.. ಡೆತ್​ನೋಟ್​ನಲ್ಲಿ ಕಾರಣ ರಿವೀಲ್..
Advertisment
  • ಮುಂಜಾನೆ 4 ಗಂಟೆಗೆ ಕಟ್ಟಡದಿಂದ ಜಿಗಿದ ಯುವತಿ
  • ಆಸ್ಪತ್ರೆಗೆ ದಾಖಲಿಸಿದ್ರೂ ಬದುಕಿ ಬಾರದ ವಿದ್ಯಾರ್ಥಿನಿ
  • ಹರಿಯಾಣದ ಸೋಣಿಪತ್​​ನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಳು

ಮಹಾರಾಷ್ಟ್ರದ ಐಎಎಸ್​ ಅಧಿಕಾರಿಯ ಮಗಳೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಭಾರೀ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸೋಮವಾರ ಬೆಳಗ್ಗೆ 10ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾಳೆ ಎಂದು ದಕ್ಷಿಣ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisment

ಲಿಪಿ (27) ಮೃತ ದುರ್ದೈವಿ. ಇವರು ಮಂತ್ರಾಲಯ ಸಮೀಪದ ಸುರುಚಿ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. ಎಲ್​ಎಲ್​ಬಿ ಓದುತ್ತಿದ್ದ ಈಕೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಇವರು ಹರಿಯಾಣದ ಸೋಣಿಪತ್​​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಇದನ್ನೂ ಓದಿ:ಲಿವಿಂಗ್ ರಿಲೇಷನ್​​ನಲ್ಲಿದ್ದ ಪ್ರೇಮಿಗಳು ನಿಗೂಢ ಸಾವು.. ಫಜೀತಿಗೆ ಸಿಲುಕಿದ ಮನೆ ಮಾಲೀಕ

ಸಾವಿನ ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಡೆತ್​​ನೋಟ್ ಒಂದು ಸಿಕ್ಕಿದೆ. ಅದರಲ್ಲಿ ತನ್ನ ದುಡುಕಿನ ನಿರ್ಧಾರಕ್ಕೆ ಕಾರಣವನ್ನು ತಿಳಿಸಿದ್ದಾಳೆ. ಅದೆನೆಂದರೆ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಕಾರ್ಯಕ್ಷಮತೆ ಬಗ್ಗೆ ಅಸಮಾಧಾನಗೊಂಡಿದ್ದಳು. ಹೀಗಾಗಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisment

ಕಟ್ಟಡದಿಂದ ಜಿಗಿದಿರೋದು ಗೊತ್ತಾಗುತ್ತಿದ್ದಂತೆಯೇ ಮುಂಬೈನ GT ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ನಂತರ ಆತ್ಮಹತ್ಯೆ ಪತ್ರವನ್ನು ಪತ್ತೆ ಮಾಡಿದೇವು. ಆದರೆ ಆಕೆ ಅದರಲ್ಲಿ ಯಾರನ್ನೂ ದೂಷಿಸಿಲ್ಲ ಎಂದಿದ್ದಾರೆ ಪೊಲೀಸರು. ಅಸಹಜ ಸಾವು ಪ್ರಕರಣ ಎಂದು ಕೇಸ್ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮತ್ತೆ ಬಾರದ ಮಳೆರಾಯ.. KRS ಡ್ಯಾಮ್​​ನಲ್ಲಿ ನೀರಿನ ಹರಿವಿನಲ್ಲಿ ಏರಿಳಿತ..! ಇಂದು ಎಷ್ಟಿದೆ..?

ಲಿಪಿ ಅವರ ತಂದೆ ಹೆಸರು ವಿಕಾಸ್ ರಸ್ಟೋಗಿ. ಇವರು ಮಹಾರಾಷ್ಟ್ರ ಸರ್ಕಾರ ಹೈಯರ್ ಅಂಡ್ ಟೆಕ್ನಿಕಲ್ ಎಜುಕೇಷನ್ ಡಿಪಾರ್ಟ್​ಮೆಂಟ್​ನ ಪ್ರಿನ್ಸಿಪಾಲ್ ಸೆಕ್ರೆಟರಿ ಆಗಿದ್ದಾರೆ. ತಾಯಿ ರಾಧಿಕ ರಸ್ಟೋಗಿ ಕೂಡ ಐಎಎಸ್​ ಅಧಿಕಾರಿಯಾಗಿದ್ದಾರೆ.

Advertisment

ಇದನ್ನೂ ಓದಿ:ಮೊದಲ ಪಂದ್ಯದಲ್ಲೇ ಕೈಕೊಟ್ಟ ಸ್ಟಾರ್​.. ಟೀಂ ಇಂಡಿಯಾದ ಮೊದಲ ಪ್ರಯೋಗ ಫೇಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment