/newsfirstlive-kannada/media/post_attachments/wp-content/uploads/2024/12/Sanjay-Malhotra.jpg)
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ಗೆ ಹೊಸ ಗವರ್ನರ್ ನೇಮಕವಾಗಿದೆ. ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿರೋ ಸಂಜಯ್ ಮಲ್ಹೋತ್ರಾ ಅವರನ್ನು ಆರ್ಬಿಐ ಗವರ್ನರ್ ಆಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.
ಸದ್ಯ ಆರ್ಬಿಐ ಗವರ್ನರ್ ಆಗಿರೋ ಶಕ್ತಿಕಾಂತ ದಾಸ್ ಇವರ ಸೇವಾವಧಿ ಸದ್ಯದಲ್ಲೇ ಅಂತ್ಯವಾಗಲಿದೆ. ನಾಳೆಗೆ ಇವರ ಸೇವಾವಧಿ ಅಂತ್ಯವಾಗಲಿದ್ದು, ನಾಡಿದ್ದು ಡಿಸೆಂಬರ್ 11ಕ್ಕೆ ಸಂಜಯ್ ಮಲ್ಹೋತ್ರಾ ಆರ್ಬಿಐ ಹೊಸ ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಯಾರು ಈ ಸಂಜಯ್ ಮಲ್ಹೋತ್ರಾ?
ಸಂಜಯ್ ಮಲ್ಹೋತ್ರಾ ರಾಜಸ್ಥಾನದ ಕೇಡರ್. ಇವರು 1990ರ ಬ್ಯಾಚ್ನ ಐಎಎಸ್ ಆಫೀಸರ್ ಆಗಿದ್ರು. ಐಐಟಿ ಕಾನ್ಪುರ್ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ. ಸದ್ಯ ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಗವರ್ನರ್ ಆದ ಬಳಿಕ ಮೂರು ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದ್ದಾರೆ.
ಇದನ್ನೂ ಓದಿ: RCB ಸ್ಟಾರ್ ಆಟಗಾರನಿಗೆ ಖುಲಾಯಿಸಿದ ಅದೃಷ್ಟ; ಕ್ಯಾಪ್ಟನ್ ಯಾರು? ಎಂದು ಬಿಚ್ಚಿಟ್ಟ ದಿಗ್ಗಜ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ