16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!

author-image
Ganesh
Updated On
16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!
Advertisment
  • ಈಕೆಯ ಸಾಧನೆ ನಿಮ್ಮ ಬದುಕಿಗೂ ಸ್ಫೂರ್ತಿ ತುಂಬಬಹುದು
  • ಕೊಳೆಗೇರಿಯಲ್ಲಿ ಬೆಳೆದು UPSC ಪರೀಕ್ಷೆ ಪಾಸ್ ಮಾಡಿದ ಸಾಧಕಿ
  • ಸಾಧಕಿ ಉಮ್ಮುಲ್ ಖೈರ್ ಬಗ್ಗೆ ನಿಮಗೆ ಎಷ್ಟು ಗೊತ್ತು..?

ದೊಡ್ಡ ಅಧಿಕಾರಿ ಆಗಬೇಕು, ಸಾಧನೆ ಮಾಡಬೇಕು ಅಂದ್ಕೊಂಡು ಅನೇಕ ಯುವಕರು ಕನಸು ಕಾಣುತ್ತಾರೆ. ಕನಸುಗಳ ಲೋಕದಲ್ಲಿ ತೇಲಾಡುತ್ತಿದ್ದಾಗಲೇ ವಿಘ್ನಗಳು ಉಂಟಾಗಿ ಕನಸು ಭಗ್ನಗೊಳ್ಳುತ್ತದೆ. ಇಂಥ ಪ್ರಕರಣ ದೇಶದ ಒಬ್ಬರ, ಇಬ್ಬರ ಕತೆ ಅಲ್ಲ. ಇಲ್ಲಿ ಸಮಸ್ಯೆಗಳನ್ನು ಮೆಟ್ಟಿ ನಿಲ್ಲೋದೇ ಮುಖ್ಯ. ಸಂಕಷ್ಟಗಳನ್ನು ಜಸ್ಟ್ ಕಾಲಿನಿಂದ ತುಳಿದು ಮುನ್ನುಗ್ಗುತ್ತೇನೆ ಎಂಬ ಛಲ ಇರೋರಿಗೆ ಈಕೆಯ ಸಾಧನೆ ಮತ್ತಷ್ಟು ಹುರುಪು ತುಂಬಲಿದೆ.

publive-image

ಈ ಕತೆಯ ಹೀರೋಯಿನ್ ಐಎಎಸ್​ ಅಧಿಕಾರಿ ಉಮ್ಮುಲ್ ಖೈರ್ (Ummul Kher). ಉಮ್ಮುಲ್ ಖೈರ್ ಮನೆಯ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ದುರ್ಬಲ ಮೂಳೆಗಳಿಂದಾಗಿ ಮೂಳೆಗಳು ಮುರಿಯುತ್ತವೆ. 16 ಮೂಳೆ ಮುರಿತಗಳು ಮತ್ತು 8 ಶಸ್ತ್ರಚಿಕಿತ್ಸೆಗಳನ್ನು ಅನುಭವಿಸಿದರೂ ಉಮ್ಮುಲ್ ಬದುಕಿನ ಭರವಸೆಯನ್ನು ಕಳೆದುಕೊಳ್ಳಲಿಲ್ಲ!

publive-image

8 ಬಾರಿ ಶಸ್ತ್ರಚಿಕಿತ್ಸೆ
ರಾಜಸ್ಥಾನ ಮೂಲದ ಉಮ್ಮುಲ್ ದೆಹಲಿಯ ತ್ರಿಲೋಕಪುರಿ ಕೊಳೆಗೇರಿಯಲ್ಲಿ ಬೆಳೆದವರು. ಅವರ ತಂದೆ ಬಟ್ಟೆ ವ್ಯಾಪಾರಿ. ಉಮ್ಮುಲ್ ಚಿಕ್ಕವರಿದ್ದಾಗಿಂದಲೂ ಮೂಳೆ ಕಾಯಿಲೆಯಿಂದ ಬಳಲುತ್ತಿದ್ದರು. ಪರಿಣಾಮ ಎಂಟು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಹದಿನಾರು ಕಡೆಗಳಲ್ಲಿ ಮೂಳೆ ಮುರಿತಗಳನ್ನು ಎದುರಿಸಿದ್ದರು. ಮತ್ತೊಂದು ಕಡೆ ಮನೆಯ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿರಲಿಲ್ಲ. ಆದರೆ ಅವರಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಉತ್ಸಾಹ ಅವರಲ್ಲಿತ್ತು.

ಇದನ್ನೂ ಓದಿ:Jobs 2024: HALನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಸಂಬಳ ಎಷ್ಟು ಗೊತ್ತೇ..?

publive-image

ಮನೆ ಬಿಟ್ಟ ನಂತರ ಓದು
ಕುಟುಂಬದ ಆರ್ಥಿಕ ಪರಿಸ್ಥಿತಿ ಬಗ್ಗೆ ಅರಿತಿದ್ದ ಉಮ್ಮುಲ್ ಟ್ಯೂಷನ್ ಕಲಿಸಲು ಪ್ರಾರಂಭಿಸಿದರು. ಸರ್ಕಾರೇತರ ಸಂಸ್ಥೆಯೊಂದರ ನೆರವಿನಿಂದ 10ನೇ ತರಗತಿವರೆಗೆ ಓದು ಮುಗಿಸಿದರು. 10ನೇ ತರಗತಿಯ ನಂತರ ಆಕೆಗೆ ಓದಿಸಲು ಮನೆಯವರು ಯಾರೂ ಮನಸು ಮಾಡಲಿಲ್ಲ. ಈ ಎಲ್ಲಾ ಅಡೆತಡೆಗಳನ್ನು ದಾಟಿ 12ನೇ ತರಗತಿಯಲ್ಲಿ 91% ಅಂಕಗಳನ್ನು ಗಳಿಸಿದರು. ನಂತರ ದೆಹಲಿ ವಿಶ್ವವಿದ್ಯಾಲಯದ ಗಾರ್ಗಿ ಕಾಲೇಜಿನಲ್ಲಿ ಪದವಿ ಪಡೆದರು.

publive-image

ನಿರಂತರ ತಯಾರಿ
ಉಮ್ಮುಲ್ ಜೆಎನ್‌ಯು ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಸ್ಟಡೀಸ್‌ನಿಂದ ಎಂಎ ಪದವಿ ಪಡೆದರು. ನಂತರ ಅವರು ಎಂಫಿಲ್ / ಪಿಎಚ್‌ಡಿಗೆ ಪ್ರವೇಶ ಪಡೆದರು. ಆಗಲೇ UPSC ಗಾಗಿ ಕಠಿಣ ತಯಾರಿ ಆರಂಭಿಸಿದರು. 2016 ರಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ದೇಶಕ್ಕೆ 420ನೇ ಱಂಕ್ ಪಡೆದು ಇಂದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment