Advertisment

ಟ್ರೈನಿ IAS ಪೂಜಾ ಖೇಡ್ಕರ್​ ಕೇಸ್‌ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ

author-image
Bheemappa
Updated On
ಟ್ರೈನಿ IAS ಪೂಜಾ ಖೇಡ್ಕರ್​ ಕೇಸ್‌ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ
Advertisment
  • ಪೂಜಾ​ ಯಾವಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಗೆ ಹೋಗಬೇಕು?
  • ಕೇಂದ್ರ ಲೋಕಸೇವಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವ ಆರೋಪ
  • ನಕಲಿ ದಾಖಲೆಗಳನ್ನು ನೀಡಿ ಐಎಎಸ್ ಹುದ್ದೆ ಪಡೆಯಲು ಮುಂದಾಗಿದ್ದರಾ?​

ನವದೆಹಲಿ: ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಆಯ್ಕೆಯಾದ ವಿವಾದದ ನಡುವೆ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತರಬೇತಿಯನ್ನು ಮಹಾರಾಷ್ಟ್ರದಲ್ಲಿ ತಡೆ ಹಿಡಿಯಲಾಗಿದೆ. ಸದ್ಯ ವಾಸಿಮ್ ಜಿಲ್ಲೆಯಲ್ಲಿ ಪಡೆಯುತ್ತಿರುವ ತರಬೇತಿಯನ್ನು ನಿಲ್ಲಿಸಿ ನೇರ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisment

ಇದನ್ನೂ ಓದಿ:  ರಕ್ಷ್ ನಿರ್ಮಾಣದಲ್ಲಿ ಹೊಸ ಧಾರಾವಾಹಿ.. ಎಂಟ್ರಿಯಾಗ್ತಿದೆ ದೃಷ್ಟಿಬೊಟ್ಟು ಸೀರಿಯಲ್, ಹೀರೋ ಯಾರು?

ಪೂಜಾ ಖೇಡ್ಕರ್ ಅವರು ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪಾಸ್ ಆಗಲು ಅಂಗವೈಕಲ್ಯ ಪ್ರಮಾಣ ಪತ್ರಗಳನ್ನು ನೀಡಿದ್ದರು. ಆದರೆ ಇವು ನಕಲಿ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ತರಬೇತಿ ಸ್ಥಗಿತಗೊಳಿಸಲಾಗಿದ್ದು ಈ ಕುರಿತು ಪೂಜಾ ಅವರ ಮಾರ್ಗದರ್ಶನ ನೀಡುತ್ತಿದ್ದ ಅಧಿಕಾರಿಗೆ ಮಾಹಿತಿ ನೀಡಲಾಗಿದೆ. ಆದೇಶದಂತೆ ಪೂಜಾ ಅವರು ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ನ್ಯಾಷನಲ್ ಅಕಾಡೆಮಿಗೆ ಜುಲೈ 23ರೊಳಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಫಿಲ್ಮಿ ರೇಂಜ್​​ನಲ್ಲಿ ಶೆಡ್​​ಗೆ ಬೆಂಕಿಯಿಟ್ಟು ಸಾಯಿಸಿದ್ರು.. ಮೃತ ಸಭಾನಾಳ PSI ಕನಸು ಸುಟ್ಟು ಹೋಯ್ತು..

Advertisment

publive-image

ಐಎಎಸ್​ನಲ್ಲಿ 821ನೇ ಶ್ರೇಣಿ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮಹಾರಾಷ್ಟ್ರದ ಪುಣೆಗೆ ಐಎಎಸ್ ಟ್ರೈನಿಯಾಗಿ ಕಳುಹಿಸಲಾಗಿತ್ತು. ಪುಣೆ ಜಿಲ್ಲಾ ಕಚೇರಿಯಿಂದ ವಿಶೇಷ ಸವಲತ್ತುಗಳಿಗೆ ಮನವಿ ಮಾಡಿದ್ದರು. ಆದರೆ ಇವುಗಳನ್ನ ನೀಡುವುದಕ್ಕೆ ನಿರಾಕರಿಸಲಾಗಿದ್ದರಿಂದ ಇದು ವಿವಾದವಾಗಿತ್ತು. ಹೀಗಾಗಿ ಪೂಜಾರನ್ನ ವಾಸಿಮ್​ಗೆ ವರ್ಗಾವಣೆ ಮಾಡಲಾಗಿತ್ತು. ದೃಷ್ಟಿ ದೋಷ, ಅಂಗವೈಕಲ್ಯ, ವಯಸ್ಸು, ಹೆಸರು ಬಗ್ಗೆ ಪೂಜಾ ತಪ್ಪು ನೀಡಿದ್ದು ಕೇಂದ್ರ ಲೋಕಸೇವಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಗಂಭೀರ ಆರೋಪಗಳಿವೆ. ಹೀಗಾಗಿ ಅವರ ತರಬೇತಿಗೆ ಬ್ರೇಕ್ ಹಾಕಿ ಐಎಎಸ್​ ಅಕಾಡೆಮಿಗೆ ಬರುವಂತೆ ಆದೇಶ ನೀಡಲಾಗಿದೆ.

ಇದನ್ನೂ ಓದಿ: ಅದ್ಧೂರಿ ಮೊಹರಂ ಆಚರಣೆಯಲ್ಲಿ ಅವಘಡ.. ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ, ಸಾವು

ಐಎಎಸ್​ ಸೇವೆ ಪಡೆಯಲು ವಿಶೇಷ ಚೇತನ ಹಾಗೂ ಇತರೆ ಕೋಟಾಗಳನ್ನು ಪೂಜಾ ಅವರು ದುರ್ಬಳಕೆ ಮಾಡಿಕೊಂಡ ಆರೋಪವಿದೆ. ಇನ್ನು ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದುಕೊಂಡಿದ್ದರು ಪಾಸ್ ಆಗಲು ಕೆಲ ಕೋಟಾಗಳನ್ನು ಉಪಯೋಗಿಸಿಕೊಂಡು ಅವರು ಐಎಎಸ್ ಅನ್ನು ಪಡೆದುಕೊಂಡಿದ್ದರು. ಈಗ ಕೋಟಾಗಳಿಗಾಗಿ ನೀಡಿದ ಆ ದಾಖಲೆಗಳೇ ನಕಲಿ ಎಂದು ಹೇಳಲಾಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment