newsfirstkannada.com

ನಾನು ಮೌನವಾಗಿರಲು ಸಾಧ್ಯವಿಲ್ಲ – ಸುಪ್ರೀಂ ಕಟಕಟೆಯಲ್ಲಿ ರೂಪಾ ವಿರುದ್ಧ ಸಿಂಧೂರಿ ವಾದ

Share :

Published January 13, 2024 at 6:17am

    ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ‘ರೋ-ರೂ’ ಪ್ರಕರಣ ಇದು

    ಕರ್ನಾಟಕದ ಡಬಲ್‌ ಆರ್​​ ಲೇಡಿ ವಾರ್ ಮತ್ತೆ ಸದ್ದು ಮಾಡಿದೆ

    ಫೆ.16ರ ಬಳಿಕ ಪ್ರಕರಣ​ ಯಾವ ರೀತಿ ತಿರುವು ಪಡೆದುಕೊಳ್ಳುತ್ತೆ?

ಕಳೆದ ವರ್ಷ ಸುದ್ದಿ ಮಾಡಿದ್ದ ಐಎಎಸ್‌-ಐಪಿಎಸ್ ಅಧಿಕಾರಿಗಳ ನಡುವಿನ ಪ್ರತಿಷ್ಠೆಯ ಜಟಾಪಟಿ ಸುಪ್ರೀಂ ಕೋರ್ಟ್‌ ಅಂಗಳದವರೆಗೂ ಹೋಗಿದೆ. ಸೋಶಿಯಲ್ ಮೀಡಿಯಾದಿಂದ ಶುರುವಾದ ರೋಹಿಣಿ-ರೂಪಾ ರಾದ್ಧಾಂತ ಸುಪ್ರೀಂ ಕಟೆಕಟೆಯಲ್ಲಿ ನಿಂತಿದೆ.

ಇಬ್ಬರು ಅಧಿಕಾರಿಗಳ ನಡುವಿನ ಕಲಹದ ವಾದ-ಪ್ರತಿವಾದ ನಡೆದಿದೆ. ಇಬ್ಬರೂ ಅಧಿಕಾರಿಗಳು ಪಟ್ಟು ಸಡಿಲಿಸದೇ ವಾದ ಮಂಡಿಸಿದ್ದಾರೆ. ಕರ್ನಾಟಕದ ಡಬಲ್‌ ಆರ್​​ ಲೇಡಿ ವಾರ್ ಮತ್ತೆ ಸದ್ದು ಮಾಡಿದೆ. ಇಬ್ಬರು ಮಹಿಳಾ ಅಧಿಕಾರಿಗಳ ಬಹಿರಂಗ ಕದನ ಸದ್ಯ ಸುಪ್ರೀಂ ಕೋರ್ಟ್‌ವರೆಗೂ ತಲುಪಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಾರ್ಧನಿಸಿದ್ದ ರೂಪಾ-ರೋಹಿಣಿ ಕಲಹ ಸುಪ್ರೀಂ ಕೋರ್ಟ್‌ ಬಾಗಿಲು ಬಡಿದಿದೆ.

ಐಎಎಸ್‌-ಐಪಿಎಸ್‌ ಅಧಿಕಾರಿಗಳ ಪ್ರತಿಷ್ಠೆಯ ಕದನ!

ಐಪಿಎಸ್ ಅಧಿಕಾರಿ ಡಿ. ರೂಪಾ, ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ತಮ್ಮ ಖಾಸಗಿ ಚಿತ್ರಗಳನ್ನ ಪೋಸ್ಟ್​ ಮಾಡಿದ್ದಕ್ಕೆ ರೂಪಾ ವಿರುದ್ಧ ರೋಹಿಣಿ ರಾಂಗ್​​​ ಆಗಿದ್ರು. ಇದಷ್ಟೇ ಅಲ್ಲ, ರೂಪಾ ವಿರುದ್ಧ ಸುಪ್ರೀಕೋರ್ಟ್ ಮೆಟ್ಟಿಲೇರಿದ್ರು. ಇವತ್ತು ನ್ಯಾಯಮೂರ್ತಿ ಎ.ಎಸ್ ಓಕಾ ರೋಹಿಣಿ ಸಲ್ಲಿಸಿದ್ಧ ಅರ್ಜಿ ವಿಚಾರಣೆ ನಡೆಸಿದ್ರು. ಈ ವೇಳೆ ಡಿ.ರೂಪಾ ಕ್ಷಮೆ ಕೋರುವಂತೆ ರೋಹಿಣಿ ಸಿಂಧೂರಿ ಪಟ್ಟು ಹಿಡಿದ ಪ್ರಸಂಗವೂ ನಡೀತು.

ಸುಪ್ರೀಂಕೋರ್ಟ್‌ನಲ್ಲಿ ರೋಹಿಣಿ ಸಿಂಧೂರಿ ವಾದಿಸಿದ್ದೇನು?

ರೋಹಿಣಿ ಸಿಂಧೂರಿ: ನನ್ನ ವಿರುದ್ಧ ಮಾಡಿರುವ ಅವಹೇಳನಕಾರಿ ಪೋಸ್ಟ್‌ಗಳನ್ನು ತೆಗೆದು ಹಾಕಬಹುದು. ಈ ಘಟನೆಯಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ. ಹೀಗಾಗಿ ಡಿ.ರೂಪಾ ಬೇಷರತ್ ಕ್ಷಮೆಯಾಚಿಸಬೇಕು.

ಡಿ.ರೂಪಾ ಪರ ವಕೀಲ: ರೋಹಿಣಿ ಸಿಂಧೂರಿ ಕೂಡಾ ಅವಹೇಳನಕಾರಿ ಮಾತನಾಡಿದ್ದಾರೆ. ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ.

ರೋಹಿಣಿ ಪರ ವಕೀಲ: ಹೌದು ಬುದ್ಧಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡುತ್ತಾರೆ. ಅವರಿಗೆ ಬುದ್ದಿ ಭ್ರಮಣೆಯಾಗಿದೆ ಎಂದು ಹೇಳಿಲ್ಲ.

ನ್ಯಾ.ಎ.ಎಸ್ ಓಕಾ: ನೀವು ಒಂದು ನಿರ್ಧಾರಕ್ಕೆ ಬರಬೇಕು. ಇದಕ್ಕೆ ಒಂದು ತಿಂಗಳ ಸಮಾವಕಾಶ ನೀಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಿಂದ ಎಲ್ಲ ಪೋಸ್ಟ್‌ಗಳನ್ನ ಡಿಲೀಟ್ ಮಾಡಬೇಕು.

ರೋಹಿಣಿ ಸಿಂಧೂರಿ: ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ?
ನ್ಯಾ.ಎ.ಎಸ್. ಓಕಾ: ನಿಮಗೆ ಒಳ್ಳೆಯ ಭವಿಷ್ಯವಿದೆ. ಉಜ್ವಲ ಭವಿಷ್ಯದ ಕಾರಣದಿಂದ ಪ್ರಕರಣವನ್ನ ಇತ್ಯರ್ಥ ಮಾಡಲು ಯೋಚಿಸಿದ್ದೇವೆ. ಆದ್ರೆ, ಭಾವನೆಗಳು ಅಧಿಕವಾಗಿದ್ದರೆ ನಾವು ಒತ್ತಾಯಿಸಲು ಸಾಧ್ಯವಿಲ್ಲ.

ರೋಹಿಣಿ ಸಿಂಧೂರಿ: ನಮಗೆ ಉಜ್ವಲ ಭವಿಷ್ಯವಿರಬಹುದು. ಆದ್ರೆ ಈಗ ಜನರು ನನ್ನನ್ನು ಒಂದು ರೀತಿಯಲ್ಲಿ ನೋಡುತ್ತಿದ್ದಾರೆ. ನಾನು ಮೌನವಾಗಿರಲು ಸಾಧ್ಯವಿಲ್ಲ.

ನ್ಯಾ.ಎ.ಎಸ್ ಓಕಾ: ಮೌನವಾಗಿರಲು ಅಥವಾ ಹಿಂತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ. ಎಲ್ಲಾ ವಾದ ಪ್ರತಿವಾದವನ್ನ ಆಲಿಸಿದ ನ್ಯಾಯಮೂರ್ತಿ ಎ.ಎಸ್ ಓಕಾ ಈಗಾಗಲೇ ಆರ್‌-ಆರ್‌ ಪ್ರಕರಣದಲ್ಲಿ ನೀಡಲಾಗಿರುವ ಮಧ್ಯಂತರ ಆದೇಶ ಮುಂದುವರಿಸುವಂತೆ ಸೂಚಿಸಿದ್ರು. ಅಲ್ಲದೇ ಫೆಬ್ರವರಿ 16ರಂದು ವಿಚಾರಣೆಯನ್ನ ಮುಂದೂಡಿದ್ರು. ಒಟ್ಟಾರೆ, ಸ್ವಲ್ಪದಿನ ತಣ್ಣಗಾಗಿದ್ದ ರೋ-ರೂ ವಾರ್ ಮತ್ತೆ ಮಾರ್ಧನಿಸಿದೆ. ನ್ಯಾಯಮೂರ್ತಿಗಳು ಬುದ್ಧಿಮಾತು ಹೇಳಿದ್ರೂ ಇಬ್ಬರು ಅಧಿಕಾರಿಗಳ ಪ್ರತಿಷ್ಠೆ ಬಗ್ಗದಾಗಿದೆ. ಇದೀಗ ಫೆಬ್ರವರಿ 16ರ ಬಳಿಕ ಪ್ರಕರಣ ಯಾವ ತಿರುವನ್ನ ಪಡೆದುಕೊಳ್ಳುತ್ತೋ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಮೌನವಾಗಿರಲು ಸಾಧ್ಯವಿಲ್ಲ – ಸುಪ್ರೀಂ ಕಟಕಟೆಯಲ್ಲಿ ರೂಪಾ ವಿರುದ್ಧ ಸಿಂಧೂರಿ ವಾದ

https://newsfirstlive.com/wp-content/uploads/2024/01/rr.jpg

Load More