/newsfirstlive-kannada/media/post_attachments/wp-content/uploads/2025/07/JOBS_IB.jpg)
ಕೇಂದ್ರ ಸರ್ಕಾರದ ಗೃಹ ಇಲಾಖೆಯಡಿ ಬರುವಂತ ಗುಪ್ತಚರ ಇಲಾಖೆ (Intelligence Bureau) ದೊಡ್ಡ ಮಟ್ಟದಲ್ಲಿ ಉದ್ಯೋಗಗಳನ್ನ ನೇಮಕಾತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಕೆಲಸ ಸಿಕ್ಕಿಲ್ಲ ಸಿಕ್ಕಿಲ್ಲ ಅಂತ ಖಾಲಿ ಕುಳಿತಿರುವ ಅಭ್ಯರ್ಥಿಗಳು ಈಗ ಈ ಉದ್ಯೋಗಗಳಿಗೆ ಪ್ರಯತ್ನ ಮಾಡಬಹುದು. ಆನ್​​ಲೈನ್​ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.
2025ರಲ್ಲಿ ಇಂಟೆಲಿಜೆನ್ಸ್​ ಬ್ಯೂರೋ ಬೃಹತ್ ನೇಮಕಾತಿ ಮಾಡುತ್ತಿದೆ. ಈ ಸಂಬಂಧ ಅರ್ಜಿಗಳನ್ನ ಆಹ್ವಾನ ಮಾಡಿದೆ. ಯಾರಿಗೆ ಈ ಉದ್ಯೋಗಕ್ಕೆ ಆಸಕ್ತಿ ಇದೆಯೋ ಅಂಥವರು ಯತ್ನಿಸಬಹುದು. ಕೇವಲ 10 ತರಗತಿ ಪಾಸ್ ಆಗಿದ್ದವರಿಗೆ ಇದು ಗೋಲ್ಡನ್​ ಚಾನ್ಸ್ ಎಂದೇ ಹೇಳಬಹುದು. ಏಕೆಂದರೆ ಇಂಟೆಲಿಜೆನ್ಸ್​ ಬ್ಯೂರೋದಲ್ಲಿ ಸದ್ಯ 4 ಸಾವಿರಕ್ಕೂ ಅಧಿಕ ಹುದ್ದೆಗಳನ್ನ ತುಂಬಲಾಗುತ್ತಿದೆ.
ಇಂಟೆಲಿಜೆನ್ಸ್​ ಬ್ಯೂರೋ ಬೆಂಗಳೂರಿನಲ್ಲಿ ಬ್ರ್ಯಾಂಚ್​ ಇದೆ. ಹೀಗಾಗಿ ಸಿಲಿಕಾನ್​ ಸಿಟಿಯಲ್ಲೂ ಉದ್ಯೋಗಗಳು ಖಾಲಿ ಇವೆ. ಆಸಕ್ತಿ ಇರುವವರು ಇಲ್ಲಿಗೂ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಬೆಂಗಳೂರಿನಲ್ಲೂ 204 ಉದ್ಯೋಗಗಳು ಖಾಲಿ ಇವೆ. ಇನ್ನುಳಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಈ ಆರ್ಟಿಕಲ್​ನಲ್ಲಿದೆ. ಉಳಿದಂತೆ ಇದಕ್ಕೆ ಸಂಬಂಧಿಸಿದ ಲಿಂಕ್ ಕೂಡ ಕೆಳಗೆ ನೀಡಲಾಗಿದೆ.
ಉದ್ಯೋಗದ ಹೆಸರು-
ಸಹಾಯಕ/ಕಾರ್ಯನಿರ್ವಾಹಕ (Assistant/Executive)
ಒಟ್ಟು ಉದ್ಯೋಗಗಳು ಎಷ್ಟು?
4,987
ಈ ಉದ್ಯೋಗಗಳಿಗೆ ವಿದ್ಯಾರ್ಹತೆ
10ನೇ ತರಗತಿ
ವಯಸ್ಸಿನ ಮಿತಿ
18 ರಿಂದ 27 ವರ್ಷಗಳು
ಅರ್ಜಿ ಶುಲ್ಕ?
ಪುರುಷ ಸಮಾನ್ಯ, ಇಡ್ಲುಎಸ್, ಒಬಿಸಿ- 650
ಉಳಿದ ಎಲ್ಲ ಅಭ್ಯರ್ಥಿಗಳು- 550
ಉದ್ಯೋಗಗಳ ವರ್ಗೀಕರಣ
ಅನ್​​ರಿಸರ್ವಡ್​ (ಯುಆರ್)- 2,471
ಇತರೆ ಹಿಂದುಳಿದ ವರ್ಗಗಳು- 1,015
ಆರ್ಥಿಕ ದುರ್ಬಲ ವಿಭಾಗ- 501
ಪರಿಶಿಷ್ಟ ಜಾತಿ- 574
ಪರಿಶಿಷ್ಟ ಪಂಗಡ- 426
ಆಯ್ಕೆ ಪ್ರಕ್ರಿಯೆ ಹೇಗೆ?
ಕಂಪ್ಯೂಟರ್ ಬೇಸ್ಡ್​​​ ಟೆಸ್ಟ್
ಅನುವಾದ (ಸ್ಥಳೀಯ ಭಾಷೆ)
ಸಂದರ್ಶನ ಮತ್ತು ವೈಯಕ್ತಿಕ ಮೌಲ್ಯಮಾಪನ
ಈ ಮೂರಲ್ಲಿ ಪಾಸ್ ಆದವರಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯ
ಈ ಹುದ್ದೆಯ ಮುಖ್ಯ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ ಯಾವುದು- ಜುಲೈ 18
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು- ಆಗಸ್ಟ್​ 17
ಸಂಪೂರ್ಣ ಮಾಹಿತಿಗಾಗಿ- https://static-cdn.publive.online/newsfirstlive-kannada/media/pdf_files/wp-content/uploads/multisite/2025/07/25180119ib-sa.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ