/newsfirstlive-kannada/media/post_attachments/wp-content/uploads/2025/02/Ibrahim-Zadran.jpg)
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಹಳ ರೋಚಕತೆಯಿಂದ ಕೂಡಿದೆ. ಇಂದು ನಡೆಯುತ್ತಿರೋ ಬಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಅಫ್ಘಾನಿಸ್ತಾನ ಬಿಗ್ ಟಾರ್ಗೆಟ್ ಕೊಟ್ಟಿದೆ.
ಇನ್ನು, ಅಫ್ಘಾನಿಸ್ತಾನದ ಪರ ಸ್ಟಾರ್ ಬ್ಯಾಟರ್ ಇಬ್ರಾಹಿಂ ಜದ್ರಾನ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ರು. ಇವರ ಸ್ಫೋಟಕ ಬ್ಯಾಟಿಂಗ್ ಕಂಡು ಇಡೀ ಕ್ರೀಡಾಲೋಕವೇ ಬೆಚ್ಚಿಬಿದ್ದಿದೆ. ಇವರ ನೆರವಿನಿಂದ ಅಫ್ಘಾನಿಸ್ತಾನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 325 ರನ್ ಕಲೆ ಹಾಕಿದೆ.
ಅಫ್ಘಾನಿಸ್ತಾನದ ಪರ 5ನೇ ವಿಕೆಟ್‌ಗೆ ಇಬ್ರಾಹಿಂ ಜದ್ರಾನ್ ಹಾಗೂ ಮೊಹಮ್ಮದ್ ನಬಿ ಜೋಡಿ ಸ್ಫೋಟಕ ಜೊತೆಯಾಟ ಆಡಿತು. ಈ ಜೋಡಿ 55 ಎಸೆತಗಳಲ್ಲಿ 111 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ನಬಿ 2 ಬೌಂಡರಿ, 3 ಸಿಕ್ಸರ್ ಸಮೇತ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇಬ್ರಾಹಿಂ ಜದ್ರಾನ್ ಅಬ್ಬರ
ಅಫ್ಘಾನಿಸ್ತಾನದ ಸ್ಟಾರ್ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಅಮೋಘ ಬ್ಯಾಟಿಂಗ್ ಮಾಡಿದರು. ಮಹತ್ವದ ಪಂದ್ಯದಲ್ಲಿ ಅಫ್ಘಾನಿಸ್ತಾನ ಪರ ಇವರು ದಾಖಲೆಗಳನ್ನೇ ಬರೆದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿಕೊಂಡರು.
ಕ್ರೀಸ್ನಲ್ಲೇ ಬಹುತೇಕ ಕೊನೆಯವರೆಗೂ ನಿಂತು ಆಡಿದ ಇಬ್ರಾಹಿಂ ಜದ್ರಾನ್ ಅವರು ಅಬ್ಬರಿಸಿದರು. ಇವರು 146 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್‌ಗಳ ನೆರವಿನಿಂದ 177 ರನ್ ಸಿಡಿಸಿ ಔಟ್ ಆದರು. ಅತಿಮವಾಗಿ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 325 ರನ್ ಸಿಡಿಸಿತು.
ಇದನ್ನೂ ಓದಿ:ಶುಭ್ಮನ್ ಗಿಲ್ಗೆ ಭರ್ಜರಿ ಗಿಫ್ಟ್ ಕೊಟ್ಟ ICC; ವಿರಾಟ್ ಕೊಹ್ಲಿಗೂ ಸಖತ್ ಗುಡ್ನ್ಯೂಸ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ