CA ಪರೀಕ್ಷೆಯ ರಿಸಲ್ಟ್​ ಔಟ್​.. ಇಡೀ ದೇಶಕ್ಕೆ ಪ್ರಥಮ ಸ್ಥಾನ ಪಡೆದ ರಾಜನ್ ಕಬ್ರಾ!

author-image
Bheemappa
Updated On
CA ಪರೀಕ್ಷೆಯ ರಿಸಲ್ಟ್​ ಔಟ್​.. ಇಡೀ ದೇಶಕ್ಕೆ ಪ್ರಥಮ ಸ್ಥಾನ ಪಡೆದ ರಾಜನ್ ಕಬ್ರಾ!
Advertisment
  • ಫೈನಲ್ ಪರೀಕ್ಷೆಯಲ್ಲಿ ರಾಜನ್ ಕಬ್ರಾ ಅವರು ಪಡೆದ ಅಂಕಗಳು.?
  • ರಾಜನ್ ಚಾರ್ಟರ್ಡ್​​ ಅಕೌಂಟೆಂಟ್ಸ್​ ಪರೀಕ್ಷೆಯಲ್ಲಿ ಮೊದಲ ಸ್ಥಾನ
  • ಫೌಂಡೇಶನ್, ಇಂಟರ್ಮೀಡಿಯೇಟ್, ಕೊನೆ ಪರೀಕ್ಷೆ ಫಲಿತಾಂಶ

ನವದೆಹಲಿ: ದ ಇನ್​​ಸ್ಟಿಟ್ಯೂಟ್​ ಆಫ್​ ಚಾರ್ಟರ್ಡ್​​ ಅಕೌಂಟೆಂಟ್ಸ್​ ಆಫ್​ ಇಂಡಿಯಾ (ಐಸಿಎಐ) 2025ರ ಸಿಎ ಫೌಂಡೇಶನ್, ಇಂಟರ್ಮೀಡಿಯೇಟ್ ಮತ್ತು ಅಂತಿಮ ಪರೀಕ್ಷೆಗಳ ಫಲಿತಾಂಶವನ್ನ ಪ್ರಕಟಿಸಿದೆ. ಇಡೀ ಭಾರತದಲ್ಲೇ ಮುಂಬೈನ ರಾಜನ್ ಕಬ್ರಾ ಅವರು ಪ್ರಥಮ ಶ್ರೇಣಿ (Rank)ಯಲ್ಲಿ ಪಾಸ್ ಆಗಿದ್ದಾರೆ.

ಸಿಎ ಪರೀಕ್ಷೆಯಲ್ಲಿ ಆಲ್​ ಇಂಡಿಯಾ ಶ್ರೇಣಿಯಲ್ಲೇ ಪ್ರಥಮ ಸ್ಥಾನ ಪಡೆದಿರುವ ರಾಜನ್ ಕಬ್ರಾ ಅವರು 600 ಅಂಕಗಳಿಗೆ ಒಟ್ಟು 516 ಅಂಕಗಳನ್ನು ಪಡೆದಿದ್ದಾರೆ. ಈ ಬಾರಿ ಒಟ್ಟು 14,247 ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್‌ಗಳಾಗಿ ಅರ್ಹತೆ ಪಡೆದುಕೊಂಡಿದ್ದಾರೆ. ಈ ವರೆಗೆ ಫಲಿತಾಂಶ ನೋಡದೇ ಇರುವ ಅಭ್ಯರ್ಥಿಗಳು ಐಸಿಎಐ ವೆಬ್​​ಸೈಟ್​ (icai.org)ಗೆ ಭೇಟಿ ನೀಡಿ ರಿಸಲ್ಟ್​ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ:ಹರಪ್ಪ, ಮೊಹೆಂಜೋದಾರೋದಂತೆ 3,500 ವರ್ಷಗಳ ಹಿಂದಿನ ಹಳೆಯದಾದ ನಗರ ಪತ್ತೆ..!

publive-image

ಪರೀಕ್ಷೆಯನ್ನು ಬರೆದಿರುವ ಅಭ್ಯರ್ಥಿಗಳು ಪ್ರತಿ ಪತ್ರಿಕೆಯಲ್ಲಿ 50 ಅಂಕಗಳನ್ನು ಪಡೆದಿದ್ದರೇ ಉತ್ತೀರ್ಣರು ಎಂದು ಪರಿಗಣಿಸಲಾಗುತ್ತದೆ. ಒಟ್ಟು 29,286 ವಿದ್ಯಾರ್ಥಿಗಳು ಫೈನಲ್​ ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ 5,490 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರೂಪ್​- 1ನಲ್ಲಿ 66,943 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು 14,979 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಗ್ರೂಪ್​- 2ನಲ್ಲಿ 46,173 ವಿದ್ಯಾರ್ಥಿಗಳು ಸಿಎ ಫೈನಲ್ ಪರೀಕ್ಷೆ ಬರೆದಿದ್ದು ಇದರಲ್ಲಿ 12,204 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಸಿಎ Foundation ಮೇ 2025 ಟಾಪರ್ಸ್​ ಪಟ್ಟಿ
ವೃಂದಾ ಅಗರ್ವಾಲ್ (ಘಾಜಿಯಾಬಾದ್)- 90.5%
ಯದ್ನೇಶ್ ರಾಜೇಶ್​ ನರ್ಕರ್​ (ಮುಂಬೈ)- 89.75%
ಶಾರ್ದೂಲ್ ಶೇಕರ್ ವಿಛಾರೆ (ಥಾಣೆ)- 89.5%

ಸಿಎ Intermediate ಮೇ 2025 ಟಾಪರ್ಸ್​ ಪಟ್ಟಿ
ದಿಶಾ ಆಶಿಶ್ ಗೋಖ್ರು
ದೇವಿದಾನ್ ಯಶ್ ಸಂದೀಪ್
ಯಮಿಶ್ ಜೈನ್/ನಿಲಯ್ ಡಾಂಗಿ

ಸಿಎ Final ಮೇ 2025 ಟಾಪರ್ಸ್​ ಪಟ್ಟಿ
ರಾಜನ್ ಕಬ್ರಾ
ನಿಷ್ಠಾ ಬೋತ್ರಾ
ಮಾನವ್ ರಾಕೇಶ್ ಶಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment