ಇಂದಿನಿಂದ ಮಿನಿ ವಿಶ್ವಕಪ್ ಸಮರ.. 8 ಸೈನ್ಯಗಳು ಸಜ್ಜು, ಗೆದ್ದ ತಂಡಕ್ಕೆ ಕೋಟಿ ಕೋಟಿ ಹಣ..!

author-image
Ganesh
Updated On
ಇಂದಿನಿಂದ ಮಿನಿ ವಿಶ್ವಕಪ್ ಸಮರ.. 8 ಸೈನ್ಯಗಳು ಸಜ್ಜು, ಗೆದ್ದ ತಂಡಕ್ಕೆ ಕೋಟಿ ಕೋಟಿ ಹಣ..!
Advertisment
  • ಚಾಂಪಿಯನ್ಸ್​ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗಿ
  • ಪಾಕ್​ನ 3 ಮತ್ತು ದುಬೈನ ಒಂದು ಸ್ಟೇಡಿಯಂನಲ್ಲಿ ಪಂದ್ಯ
  • ನ್ಯೂಜಿಲೆಂಡ್ ಮತ್ತು ಪಾಕ್ ನಡುವೆ ಉದ್ಘಾಟನಾ ಮ್ಯಾಚ್

ಇಂದಿನಿಂದ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ 9ನೇ ಆವೃತ್ತಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಸೆಣಸಾಟ ನಡೆಸಲಿವೆ. ಕರಾಚಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಇದಕ್ಕೆ ಸಾಕ್ಷಿಯಾಗಲಿದೆ.

ಚಾಂಪಿಯನ್ಸ್​ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಲಿವೆ. ಇಂದು ನಡೆಯುವ ಪಂದ್ಯವು ಭಾರತೀಯ ಕಾಲಮಾನ 2.30ಕ್ಕೆ ಆರಂಭವಾಗಲಿದೆ. ಸ್ಟಾರ್​ ಸ್ಪೋರ್ಟ್ಸ್​​ ಮತ್ತು ಜಿಯೋ ಹಾಟ್​ಸ್ಟಾರ್​​ನಲ್ಲಿ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ.

ಇದನ್ನೂ ಓದಿ: Namma Metro: ಬಿಎಂಆರ್​ಸಿಎಲ್ ವಿರುದ್ಧ ಭಾರೀ ಆಕ್ರೋಶ.. ಸಂಕಷ್ಟಕ್ಕೆ ಸಿಲುಕಿದ ಗುತ್ತಿಗೆದಾರರು..!

publive-image

ಟ್ರೋಫಿ ಗೆದ್ದ ತಂಡಕ್ಕೆ ಚಾಂಪಿಯನ್ಸ್​ ಕಿರೀಟ ಮುಡಿಗೇರಿಸಿಕೊಂಡ ಹೆಗ್ಗಳಿಕೆಯ ಜೊತೆ ಜೊತೆಗೆ ಭರಪೂರ ದುಡ್ಡು ಸಿಗುತ್ತೆ. ಚಾಂಪಿಯನ್ ಟ್ರೋಫಿಯ ಬಹುಮಾನದ ಮೊತ್ತವನ್ನು ಐಸಿಸಿ ಪ್ರಕಟಿಸಿದೆ. ಚಾಂಪಿಯನ್ಸ್​ ಟ್ರೋಫಿ ಬಹುಮಾನ ಮೊತ್ತದಲ್ಲಿ ಐಸಿಸಿ ಶೇ.53ರಷ್ಟು ಹೆಚ್ಚಳ ಮಾಡಿದ್ದು, ಒಟ್ಟಾರೆ ಬಹುಮಾನ ಮೊತ್ತವನ್ನ 59.95 ಕೋಟಿಗೆ ಹೆಚ್ಚಿಸಲಾಗಿದೆ. ಇದು ಟೂರ್ನಿಯಲ್ಲಾಡಿದ ಎಲ್ಲಾ ತಂಡಗಳಿಗೆ ಸೇರಿ ಸಿಗುವ ಅಮೌಂಟ್. ಅಂದ್ರೆ, 8 ತಂಡಗಳ 120 ಆಟಗಾರರಿಗೆ ಸೇರಿ ಸಿಗುವ ಬಹುಮಾನದ ಮೊತ್ತ. ಚಾಂಪಿಯನ್ ಆದ ತಂಡಕ್ಕೆ 19.40 ಕೋಟಿ ರೂಪಾಯಿ ಸಿಗಲಿದೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿ: ಟೀಮ್​ ಇಂಡಿಯಾದಿಂದ ಹೊರಬಿದ್ದ ಸ್ಟಾರ್​​ ವೇಗಿ ಬುಮ್ರಾ

publive-image

ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡಗಳಿಗೆ ಸಿಗುವ ಬಹುಮಾನ

  • ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ- 19.45 ಕೋಟಿ ರೂಪಾಯಿ
  •  ಚಾಂಪಿಯನ್ಸ್ ಟ್ರೋಫಿ ರನ್ನರ್ ಅಪ್- 9.73 ಕೋಟಿ ಕೋಟಿ ರೂಪಾಯಿ
  •  ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ- 4.86 ಕೋಟಿ ರೂಪಾಯಿ (ಪ್ರತಿ ತಂಡ)
  •  5 ಮತ್ತು 6 ಮುಗಿಸಿದ ತಂಡಗಳಿಗೆ- 3.04 ಕೋಟಿ ರೂಪಾಯಿ (ಪ್ರತಿ ತಂಡ)
  •  ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4 ಮೈದಾನದಲ್ಲಿ ಪಂದ್ಯ

ಚಾಂಪಿಯನ್ಸ್​ ಟ್ರೋಫಿಯು ಒಟ್ಟು ನಾಲ್ಕು ಮೈದಾನಗಳಲ್ಲಿ ನಡೆಯಲಿದೆ. ಪಾಕಿಸ್ತಾನದಲ್ಲಿ ಮೂರು, ದುಬೈನ ಒಂದು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ನ್ಯಾಷನಲ್ ಸ್ಟೇಡಿಯಂ ಕರಾಚಿ, ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂ, ಗಡಾಫಿ ಸ್ಟೇಡಿಯಂ ಲಾಹೋರ್, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಪಂದ್ಯ ನಡೆಯಲಿದೆ. ಇಂದಿನಿಂದ 15 ದಿನಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ಹಬ್ಬ ಸಿಗಲಿದೆ. ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜರ್ಸಿ ಮೇಲೆ ಪಾಕಿಸ್ತಾನದ ಹೆಸರು.. ಭಾರೀ ವಿರೋಧ

publive-image

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment