/newsfirstlive-kannada/media/post_attachments/wp-content/uploads/2025/02/ROHIT_KOHLI.jpg)
ಚಾಂಪಿಯನ್ಸ್ ಟ್ರೋಫಿಗೆ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಚಾಂಪಿಯನ್ಸ್ ಟ್ರೋಪಿ ಮುಕ್ತಾಯದ ಬಳಿಕವೇ ಇಂಡಿಯನ್ ಪ್ರಿಮೀಯರ್ ಲೀಗ್ ಕಿಕ್ ಸ್ಟಾರ್ಟ್ ಆಗಲಿದೆ. ಆದ್ರೆ, ಐಸಿಸಿ ಪ್ರಕಟಿಸಿರುವ ಬಹುಮಾನದ ಮೊತ್ತ. ಈಗ ಐಸಿಸಿ ವರ್ಸಸ್ ಐಪಿಎಲ್ ಸ್ಯಾಲರಿ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಐಸಿಸಿ ಟೂರ್ನಿ ಅಂದ್ರೆ, ಅದಕ್ಕೊಂದು ಕ್ರೇಜ್ ಇರುತ್ತೆ. ಟೂರ್ನಿ ಆಯೋಜಕರ ಬೊಕ್ಕಸವಷ್ಟೇ ಅಲ್ಲ. ಐಸಿಸಿ ಖಜಾನೆಗೂ ಹಣದ ಹೊಳೆ ಹರಿಯುತ್ತೆ. ಟ್ರೋಫಿ ಗೆದ್ದ ತಂಡಕ್ಕೆ ಚಾಂಪಿಯನ್ಸ್ ಕಿರೀಟ ಮುಡಿಗೇರಿಸಿಕೊಂಡ ಹೆಗ್ಗಳಿಕೆಯ ಜೊತೆ ಜೊತೆಗೆ ಭರಪೂರ ದುಡ್ಡು ಸಿಗುತ್ತೆ. ಇದಕ್ಕೆ ಪಾಕ್ ಅಂಡರ್ನಲ್ಲಿ ನಡೀತಿರುವ ಚಾಂಪಿಯನ್ಸ್ ಟ್ರೋಫಿಯೂ ಹೊರತಾಗಿಲ್ಲ. ಆದ್ರೆ, ICC ಪ್ರಕಟಿಸಿರುವ ಬಹುಮಾನದ ಮೊತ್ತ ಮಾತ್ರ ನಗೆಪಾಟಲಿಗೀಡಾ ಆಗುವಂತೆ ಮಾಡಿದೆ.
ಫೆಬ್ರುವರಿ 19ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದ್ದು, ಚಾಂಪಿಯನ್ ಟ್ರೋಫಿಯ ಬಹುಮಾನದ ಮೊತ್ತವನ್ನು ಐಸಿಸಿ ಪ್ರಕಟಿಸಿದೆ. ಆದ್ರೆ, ಐಸಿಸಿ ಚಾಂಪಿಯನ್ ತಂಡಕ್ಕೆ ಪ್ರಕಟಿಸಿರುವ 19.40 ಕೋಟಿಯೇ ಈಗ ಫ್ಯಾನ್ಸ್ ವಲಯದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ. ಇದಕ್ಕೆ ಕಾರಣ ಐಪಿಎಲ್..
ಐಪಿಎಲ್ ಮುಂದೆ ಐಸಿಸಿ ಈವೆಂಟ್ಸ್ ಏನಿಲ್ಲ..!
ಇಂಡಿಯನ್ ಪ್ರೀಮಿಯರ್ ಲೀಗ್.. ಇದು ಯಾವುದೇ ಗ್ಲೋಬಲ್ ಈವೆಂಟ್ಸ್ಗಿಂತ ಕಡಿಮೆ ಇಲ್ಲ. ಯಾಕಂದ್ರೆ, ಗ್ಲೋಬಲ್ ಈವೆಂಟ್ಸ್ಗೆ ಮೀರಿದ ಕ್ರೇಜ್ ಐಪಿಎಲ್ಗೆ ಇದೆ. ಐಸಿಸಿ ಈವೆಂಟ್ಸ್ ವೇಳೆ ಹೇಗೆ ದ್ವಿಪಕ್ಷೀಯ ಸರಣಿಗಳೂ ನಡೆಯಲ್ವೋ ಅದೇ ರೀತಿಯೇ ಐಪಿಎಲ್ ನಡೆದಾಗ ಯಾವುದೇ ಸಿರೀಸ್ ನಡೆಯಲ್ಲ. ಐಪಿಎಲ್ನಲ್ಲಿ ಸಿಗುವ ಅಮೌಂಟ್, ಐಸಿಸಿ ಈವೆಂಟ್ಸ್ನಲ್ಲೂ ಸಿಗಲ್ಲ. ಇದು ಜಸ್ಟ್ ನಾವ್ ಹೇಳ್ತಿರುವ ಮಾತಲ್ಲ. ಚಾಂಪಿಯನ್ಸ್ ಟ್ರೋಫಿಗೆ ಬಹುಮಾನದ ಮೊತ್ತ ಪ್ರಕಟಿಸಿದ ಬಳಿಕ ಫ್ಯಾನ್ಸ್ ವಲಯದಲ್ಲಿ ಕೇಳಿ ಬರ್ತಿರೋ ವಿಷ್ಯ.
ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ 59.95 ಕೋಟಿ..!
ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತದಲ್ಲಿ ಐಸಿಸಿ ಶೇ.53ರಷ್ಟು ಹೆಚ್ಚಳ ಮಾಡಿದ್ದು, ಒಟ್ಟಾರೆ ಬಹುಮಾನ ಮೊತ್ತವನ್ನ 59.95 ಕೋಟಿಗೆ ಹೆಚ್ಚಿಸಲಾಗಿದೆ. ಇದು ಟೂರ್ನಿಯಲ್ಲಾಡಿದ ಎಲ್ಲಾ ತಂಡಗಳಿಗೆ ಸೇರಿ ಸಿಗುವ ಅಮೌಂಟ್. ಅಂದ್ರೆ, 8 ತಂಡಗಳ 120 ಆಟಗಾರರಿಗೆ ಸೇರಿ ಸಿಗುವ ಬಹುಮಾನದ ಮೊತ್ತ. ಆದ್ರೆ, ಐಪಿಎಲ್ನಲ್ಲಿ 6 ಆಟಗಾರರೇ ಬರೋಬ್ಬರಿ 142.25 ಕೋಟಿ ವೇತನ ರೂಪದಲ್ಲಿ ಸಿಗುತ್ತೆ.
ಅಂಕಿಅಂಶಗಳ ಪ್ರಕಾರ ಈ ಆಟಗಾರರ ಸ್ಯಾಲರಿ, ಚಾಂಪಿಯನ್ಸ್ ಟ್ರೋಫಿಯ ಬಹುಮಾನದ ಮೊತ್ತಕ್ಕೆ ಹೋಲಿಕೆ ಮಾಡಿದ್ರೆ. ಜಸ್ಟ್ 35ರಷ್ಟು ಮಾತ್ರ. ಅಷ್ಟೇ ಅಲ್ಲ, ಲಕ್ನೋ ಕ್ಯಾಪ್ಟನ್ ರಿಷಬ್ ಪಂತ್, ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಪಡೆಯೋ 53.5 ಕೋಟಿ ರೂಪಾಯಿಯ ಸ್ಯಾಲರಿಗಿಂತ 6 ಕೋಟಿಯಷ್ಟೇ ಹೆಚ್ಚು.
ವಿಜೇತ ಬಹುಮಾನಕ್ಕಿಂತ ಈ 6 ಮಂದಿಯ ಸಂಬಳವೇ ಜಾಸ್ತಿ..!
ಒಂದು ತಿಂಗಳ ಐಸಿಸಿ ಈವೆಂಟ್ ಆಡಿ, ಚಾಂಪಿಯನ್ ಪಟ್ಟಕ್ಕೇರಿದ ತಂಡಕ್ಕೆ ಐಸಿಸಿಯಿಂದ 19.40 ಕೋಟಿ ರೂಪಾಯಿ ಬಹುಮಾನ ಸಿಗುತ್ತೆ. ಇದನ್ನ 15 ಆಟಗಾರರಿಗೆ ಹಂಚಿದ್ರೆ. ತಲಾ ಸಿಗೋದು 1.29 ಕೋಟಿ ರೂಪಾಯಿ ಮಾತ್ರ. ಆದ್ರೆ, ಐಪಿಎಲ್ನಲ್ಲಿ ಬಿಡ್ಡಿಂಗ್ನಲ್ಲಿ ದಾಖಲೆಯ ಮತ್ತೊಕ್ಕೆ ಸೇಲಾಗಿರುವ ರಿಷಬ್ ಪಂತ್, 27 ಕೋಟಿ ಕಮಾಯ್ ಮಾಡ್ತಾರೆ. ಅಂದ್ರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆದ್ದ ತಂಡಕ್ಕೆ ಸಿಗೋ ಅಮೌಂಟ್ಗಿಂತ 7.6 ಕೋಟಿ ಹೆಚ್ಚು.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಬಿಗ್ ಶಾಕ್; ಮೈದಾನದಲ್ಲಿ ಒದ್ದಾಡಿದ ಪ್ಲೇಯರ್.. ಸ್ಟಾರ್ ವಿಕೆಟ್ ಕೀಪರ್ಗೆ ಗಾಯ
ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡಗಳಿಗೆ ಸಿಗುವ ಬಹುಮಾನ
- ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ- 19.45 ಕೋಟಿ ರೂಪಾಯಿ
- ಚಾಂಪಿಯನ್ಸ್ ಟ್ರೋಫಿ ರನ್ನರ್ ಅಪ್- 9.73 ಕೋಟಿ ಕೋಟಿ ರೂಪಾಯಿ
- ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ- 4.86 ಕೋಟಿ ರೂಪಾಯಿ (ಪ್ರತಿ ತಂಡ)
- 5 ಮತ್ತು 6 ಮುಗಿಸಿದ ತಂಡಗಳಿಗೆ- 3.04 ಕೋಟಿ ರೂಪಾಯಿ (ಪ್ರತಿ ತಂಡ)
ಪಂತ್ಗೆ ಮಾತ್ರವಲ್ಲ. 26.50 ಕೋಟಿಗೆ ಪಂಜಾಬ್ ಸೇರಿರುವ ಶ್ರೇಯಸ್ ಅಯ್ಯರ್ ಜೊತೆ ಹೋಲಿಕೆ ಮಾಡಿದ್ರೆ. 7.1 ಕೋಟಿ ಡಿಫರೆನ್ಸ್ ಇರುತ್ತೆ. ಜಸ್ಟ್ ಪಂತ್ ಶ್ರೇಯಸ್ ಅಯ್ಯರ್ಗೆ ಮಾತ್ರವಲ್ಲ. 23.75 ಕೋಟಿ ಒಡೆಯ ವೆಂಕಟೇಶ್ ಅಯ್ಯರ್, 23 ಕೋಟಿ ವೀರ ಹೆನ್ರಿಚ್ ಕ್ಲಾಸೆನ್, 21 ಕೋಟಿ ಒಡೆಯರಾದ ನಿಕೋಲಸ್ ಪೂರನ್, ವಿರಾಟ್ ಕೊಹ್ಲಿಗೆ ನೀಡುವ ಮೊತ್ತವನ್ನ ಬ್ರೇಕ್ ಮಾಡಲ್ಲ. ಇದೇ ಕಾರಣಕ್ಕೆ ಅಭಿಮಾನಿಗಳು, ಚಾಂಫಿಯನ್ಸ್ ಟ್ರೋಫಿ ಬಹುಮಾನದ ಮೊತ್ತವನ್ನು ಐಪಿಎಲ್ ಜೊತೆ ಕಂಪೇರ್ ಮಾಡ್ತಾ ಕಿಚಾಯಿಸ್ತಿದ್ದಾರೆ.
ಐಪಿಎಲ್ ಅನ್ನೋದು ರಿಚೆಸ್ಟ್ ಲೀಗ್ ಅನ್ನೋದು ನಿಜ. ಇಲ್ಲಿ ಕೋಟಿ ಕೋಟಿ ಹಣದ ಹೊಳೆ ಅರಿಯುತ್ತೆ. ಆದ್ರೆ, ಗ್ಲೋಬಲ್ ಈವೆಂಟ್ಸ್ ಬಹುಮಾನದ ಜೊತೆ ಕಂಪೇರ್ ಮಾಡುವುದು ನಿಜಕ್ಕೂ ಸೂಕ್ತವಲ್ಲ. ಯಾಕಂದ್ರೆ, ಐಸಿಸಿ ಈವೆಂಟ್ಸ್ಗೆ ತನ್ನದೆ ಆದ ಗೌರವ, ಶ್ರೇಷ್ಠತೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ