/newsfirstlive-kannada/media/post_attachments/wp-content/uploads/2025/03/IND-VS-AUS.jpg)
ಐಸಿಸಿ ಚಾಂಪಿಯನ್ಸ್​ ಟ್ರೋಫಿ ಪಂದ್ಯಾವಳಿ ಅಂತಿಮ ಘಟ್ಟದತ್ತ ಸಾಗುತ್ತಿದೆ. ಗ್ರೂಪ್ ಹಂತದ ಎಲ್ಲಾ ಪಂದ್ಯಗಳು ಮುಕ್ತಾಯವಾಗಿದ್ದು, ಸೆಮಿ ಫೈನಲ್​​ನಲ್ಲಿ ಸೆಣಸಾಡುವ ತಂಡಗಳು ಯಾವುದು ಅಂತಾ ಅಧಿಕೃತವಾಗಿ ಗೊತ್ತಾಗಿದೆ.
ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಕಾದಾಡಲಿವೆ. ನಾಳೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಪಂದ್ಯ ಆರಂಭವಾಗಲಿದೆ. ಫೈನಲ್ ಪ್ರವೇಶಕ್ಕಾಗಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ನಾಳೆ ಕಣಕ್ಕೆ ಇಳಿಯುತ್ತಿವೆ.
NZ vs SA ಎರಡನೇ ಸೆಮೀಸ್​..!
ಎರಡನೇ ಸೆಮಿ ಫೈನಲ್​​ನಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಟ ನಡೆಸಲಿವೆ. ಮಾರ್ಚ್​ 5 ರಂದು ಲಾಹೋರ್​​ನಲ್ಲಿ ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದ ತಂಡ ಫೈನಲ್​​ನಲ್ಲಿ ಕಾದಾಡಲಿದೆ. ಫೈನಲ್ ಪಂದ್ಯವು ಮಾರ್ಚ್​ 9 ರಂದು ನಡೆಯಲಿದೆ. ಆದರೆ ಪಂದ್ಯ ನಡೆಯುವ ಸ್ಥಳ ಇನ್ನೂ ಕನ್ಫರ್ಮ್ ಆಗಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us