/newsfirstlive-kannada/media/post_attachments/wp-content/uploads/2025/03/Team-india-6.jpg)
ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಇಂದು ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.
ವರದಿಗಳ ಪ್ರಕಾರ.. ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯವು ಹೊಸ ಪಿಚ್‌ನಲ್ಲಿ ನಡೆಯಲಿದೆ. ಆದರೆ ಮೈದಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇದಕ್ಕೂ ಮೊದಲು ಭಾರತ ತಂಡವು ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಒಂದೇ ಪಿಚ್‌ಗಳಲ್ಲಿ ಆಡಿತ್ತು.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್.. ಬ್ಯಾಟಿಂಗ್ ಒಂದೇ ಭಾರತ ತಂಡದ ಸ್ಟ್ರೆಂಥ್, ವೀಕ್ನೆಸ್..!
ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಹೊಸ ಪಿಚ್‌ನಲ್ಲಿ ನಡೆದರೆ ಪರಿಸ್ಥಿತಿ ಹೇಗಿರುತ್ತದೆ ಅನ್ನೋದ್ರ ಬಗ್ಗೆ ಚರ್ಚೆ ಆಗ್ತಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದ ಪಿಚ್ ಈಗ ಇರುವುದಿಲ್ಲ. ಈ ಪಿಚ್‌ನ ಸ್ವರೂಪದಲ್ಲಿ ಬದಲಾವಣೆ ಇರುತ್ತದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಐಸಿಸಿ ಮೇಲ್ವಿಚಾರಣೆಯಲ್ಲಿ ಹೊಸ ಪಿಚ್ ಸಿದ್ಧಪಡಿಸಿದೆ. ಆಸ್ಟ್ರೇಲಿಯಾದ ಮ್ಯಾಥ್ಯೂ ಸ್ಯಾಂಡ್ರಿ ಕ್ಯುರೇಟರ್ ಆಗಿ ಪಿಚ್ ರೆಡಿ ಮಾಡಿದ್ದಾರೆ.
ಟೀಂ ಇಂಡಿಯಾಗೆ ಆಘಾತ?
ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 4 ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಜಡೇಜಾ ಮತ್ತು ಚಕ್ರವರ್ತಿ ಆಡುವ ಹನ್ನೊಂದರ ಭಾಗವಾಗಿದ್ದರು. ಹೊಸ ಪಿಚ್ ಸ್ಪಿನ್ನರ್‌ಗಳಿಗೆ ಚೆಂಡನ್ನು ತಿರುಗಿಸುವುದು ಸುಲಭವಲ್ಲ. ಹೀಗಾಗಿ ಭಾರತಕ್ಕೆ ದೊಡ್ಡ ಹಿನ್ನಡೆ ಆಗಬಹುದು ಅನ್ನೋದು ತಜ್ಞರ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: IND vs AUS ಸೆಮಿ ಫೈನಲ್; ಪಿಚ್ ರಿಪೋರ್ಟ್ ಹೇಗಿದೆ..? ಯಾರಿಗೆ ಹೆಚ್ಚು ಲಾಭ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್