/newsfirstlive-kannada/media/post_attachments/wp-content/uploads/2024/07/Rohit_sharma-CUp.jpg)
ಭಾರತ, ಇಂಗ್ಲೆಂಡ್ ನಡುವಿನ 2ನೇ T20 ಪಂದ್ಯ ಇಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟಿ20 ಪಂದ್ಯವನ್ನೂ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಗುರಿ ಭಾರತದ್ದಾಗಿದೆ. T20 ಪಂದ್ಯದ ರೋಚಕತೆಯ ಮಧ್ಯೆ ICC 2024 ವರ್ಷದ T20 ತಂಡವನ್ನು ಪ್ರಕಟ ಮಾಡಿದೆ.
ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) 2024 ವರ್ಷದ T20 ತಂಡದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ನಾಯಕತ್ವದ ಪಟ್ಟ ಕಟ್ಟಲಾಗಿದೆ. ರೋಹಿತ್ ಶರ್ಮಾ ಅವರ ಜೊತೆ ಟೀಂ ಇಂಡಿಯಾದ 3 ಆಟಗಾರರಿಗೂ ಸ್ಥಾನ ನೀಡಲಾಗಿದೆ.
/newsfirstlive-kannada/media/post_attachments/wp-content/uploads/2024/08/Rohit-sharma-2-2.jpg)
ರೋಹಿತ್ ಶರ್ಮಾ ಅವರು 2024ರ T20 ವರ್ಲ್ಡ್ ಕಪ್ ಗೆದ್ದ ಚಾಂಪಿಯನ್ ನಾಯಕ. 2024ರ T20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ನಾಯಕನಿಗೆ ICC 2024 ವರ್ಷದ T20 ತಂಡದ ಕ್ಯಾಪ್ಟನ್ ಎಂದು ಘೋಷಿಸಲಾಗಿದೆ.
2024ರ ICC T20I ತಂಡ: ರೋಹಿತ್ ಶರ್ಮಾ (c), ಟ್ರಾವಿಸ್ ಹೆಡ್, ಫಿಲ್ ಸಾಲ್ಟ್, ಬಾಬರ್ ಅಜಮ್, ನಿಕೋಲಸ್ ಪೂರನ್ (WK), ಸಿಕಂದರ್ ರಜಾ, ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ವನಿಂದು ಹಸರಂಗ, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್.
ರೋಹಿತ್ ಶರ್ಮಾ ನಾಯಕತ್ವದಲ್ಲಿ 2024ರಲ್ಲಿ ಭಾರತ 2ನೇ ಬಾರಿಗೆ ಟಿ20 ವರ್ಲ್ಡ್ ಕಪ್ ಗೆದ್ದು ಚಾಂಪಿಯನ್ ಆಗಿತ್ತು. ಹೀಗಾಗಿ ರೋಹಿತ್ ಶರ್ಮಾ ICC T20I ತಂಡದ ನಾಯಕನಾದ್ರೆ, ವೇಗಿ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us