/newsfirstlive-kannada/media/post_attachments/wp-content/uploads/2024/09/GILL-ROHIT-KOHLI.jpg)
ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಪಂದ್ಯವನ್ನು ಡಿಸೆಂಬರ್ 26 ರಂದು ಆಡಲಿದ್ದಾರೆ. ಎರಡು ತಂಡಗಳಿಗೂ ಈ ಪಂದ್ಯ ಅತ್ಯಂತ ಮುಖ್ಯವಾಗಿದೆ. ಇದರ ಬೆನ್ನಲ್ಲೇ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಟೀಮ್ ಇಂಡಿಯಾದ ಆಟಗಾರರು ಯಾವ್ಯಾವ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ಭಾರತದ ಓಪನರ್ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಇದಾದ ಬಳಿಕ ಉಳಿದ ಪಂದ್ಯಗಳಲ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಇದರಿಂದ ಜೈಸ್ವಾಲ್ ಒಂದು ಸ್ಥಾನ ಕುಸಿದಿದ್ದು 5ನೇ ಸ್ಥಾನದಲ್ಲಿದ್ದಾರೆ. ವಿಕೆಟ್ ಕೀಪರ್ ರಿಷಬ್ ಪಂತ್ ಬ್ಯಾಟಿಂಗ್ನಲ್ಲಿ ವಿಫಲ ಕಂಡಿದ್ದು 708 ಪಾಯಿಂಟ್ಸ್ನಿಂದ ಒಂದು ಸ್ಥಾನ ಕುಸಿದು 11ನೇ ಸ್ಥಾನದಲ್ಲಿದ್ದಾರೆ. ಬ್ರಿಸ್ಬೇನ್‌ನಲ್ಲಿ ಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ 10ನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ.
ಇದನ್ನೂ ಓದಿ:ಗೆಸ್ ಮಾಡಿ.. ಸಾಂತಾ ಕ್ಲಾಸ್ನಲ್ಲಿ ಇರುವ ಈ ಸ್ಟಾರ್ ಕ್ರಿಕೆಟ್ ದಿಗ್ಗಜ ಯಾರು..?
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ನ ಜೋ ರೂಟ್ ಅವರು 895 ಪಾಯಿಂಟ್ಸ್ನಿಂದ ಮೊದಲ ಸ್ಥಾನದಲ್ಲಿದ್ರೆ, ಹ್ಯಾರಿ ಬ್ರೂಕ್ 876 ಅಂಕಗಳಿಂದ 2ನೇ ಸ್ಥಾನದಲ್ಲಿದ್ದಾರೆ. ಕೇನ್ ವಿಲಿಯಮ್ಸನ್ 867 ಅಂಕಗಳಿಂದ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಇವರ ನಂತರ ಸದ್ಯ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟ್ರಾವಿಸ್ ಹೆಡ್ ಮನಮೋಹಕ ಬ್ಯಾಟ್ ಬೀಸಿದ್ದಾರೆ. ಅಲ್ಲದೇ 3 ಟೆಸ್ಟ್ಗಳ ಪೈಕಿ ಎರಡು ಟೆಸ್ಟ್ಗಳಲ್ಲಿ ಶತಕ ಬಾರಿಸಿ ಆಸ್ಟ್ರೇಲಿಯಾಕ್ಕೆ ಕ್ರಿಸ್ಮಸ್ ಗಿಫ್ಟ್ ನೀಡಿದ್ದರು. ಹೀಗಾಗಿ ಹೆಡ್ 825 ಪಾಯಿಂಟ್ಗಳಿಂದ 4ನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ.
ವಿರಾಟ್ ಕೊಹ್ಲಿ ತೀವ್ರ ಕುಸಿತ ಕಂಡಿದ್ದು ಟಾಪ್ 10 ರಲ್ಲೂ ಇಲ್ಲ. ವಿಫಲ ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಸದ್ಯ ರ್ಯಾಂಕಿಂಗ್ನಲ್ಲಿ 21ನೇ ಶ್ರೇಯಾಂಕದಲ್ಲಿದ್ದಾರೆ. ಗಿಲ್ 4 ಸ್ಥಾನ ಕುಸಿತ ಕಂಡು 20ನೇ ಸ್ಥಾನದಲ್ಲಿದ್ದಾರೆ. ಇನ್ನು ರೋಹಿತ್ ಶರ್ಮಾ 5 ಸ್ಥಾನ ಕುಸಿದಿದ್ದು ಒಂದೇ ಬಾರಿಗೆ 35ನೇ ಸ್ಥಾನದಲ್ಲಿದ್ದಾರೆ. ರೋಹಿತ್ ನಂತರ ಭಾರತ ಆಟಗಾರ ಎಂದರೆ ಕೆ.ಎಲ್ ರಾಹುಲ್ ಅವರು 40ನೇ ಸ್ಥಾನದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ