ಐಸಿಸಿ ಅಂಪೈರ್ ಪಾಕಿಸ್ತಾನದಲ್ಲಿ ಹಠಾತ್ ನಿಧನ.. ವಯಸ್ಸು ಕೇವಲ 41.. ಅಸಲಿಗೆ ಆಗಿದ್ದೇನು?

author-image
Ganesh
Updated On
ಐಸಿಸಿ ಅಂಪೈರ್ ಪಾಕಿಸ್ತಾನದಲ್ಲಿ ಹಠಾತ್ ನಿಧನ.. ವಯಸ್ಸು ಕೇವಲ 41.. ಅಸಲಿಗೆ ಆಗಿದ್ದೇನು?
Advertisment
  • ಐಸಿಸಿ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಇನ್ನಿಲ್ಲ
  • ಶಿನ್ವಾರಿ ನಿಧನಕ್ಕೆ ICC ಅಧ್ಯಕ್ಷ ಜಯ್ ಶಾ ಸಂತಾಪ
  • ಪಾಕಿಸ್ತಾನದ ಪೇಶಾವರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು

ಐಸಿಸಿ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ (Bismillah Jan Shinwari) 41ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಂಪೈರ್ (ICC Umpire) ಆಗಿದ್ದರು. ಅಫ್ಘಾನಿಸ್ತಾನದ ಶಿನ್ವಾರಿ ಆರೋಗ್ಯವು ಇತ್ತೀಚೆಗೆ ಹದಗೆಟ್ಟಿತ್ತು. ಹೀಗಾಗಿ ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಪೇಶಾವರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಶಿನ್ವಾರಿ 46 ಅಂತರರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್​ ಆಗಿ ಮೈದಾನದಲ್ಲಿ ಕಾರ್ಯನಿರ್ವಹಿಸಿದ್ದರು. 34 ಏಕದಿನ ಪಂದ್ಯಗಳು, 26 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು, 31 ಫಸ್ಟ್​ ಕ್ಲಾಸ್​ ಕ್ರಿಕೆಟ್, 51 ಲಿಸ್ಟ್ A, 96 ಡೊಮೆಸ್ಟಿಕ್ ಟಿ-20 ಪಂದ್ಯಗಳಿಗೆ ಅಂಪೈರ್ ಆಗಿದ್ದರು. ಅವರ ಹಠಾತ್ ನಿಧನದಿಂದ ಕ್ರಿಕೆಟ್ ಜಗತ್ತು ಶೋಕದಲ್ಲಿದೆ. ಐಸಿಸಿ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಶ್ರದ್ಧಾಂಜಲಿ ಸಲ್ಲಿಸಿದೆ.

ಪೇಶಾವರದಲ್ಲಿ ಚಿಕಿತ್ಸೆ..

ಬಿಸ್ಮಿಲ್ಲಾ ಜಾನ್ ಶಿನ್ವಾರಿ ಅವರು ಪೇಶಾವರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಸಹೋದರ ನೀಡಿದ ಮಾಹಿತಿ ಪ್ರಕಾರ, ತೀವ್ರ ಅನಾರೋಗ್ಯಕ್ಕೆ ಒಳಗಾದ ನಂತರ ಪೇಶಾವರಕ್ಕೆ ಕರೆದುಕೊಂಡು ಹೋಗಲಾಗಿತ್ತು. ದೇಹದಲ್ಲಿದ್ದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು ಆಸ್ಪತ್ರೆ ಹೇಳಿತ್ತು. ಅಂತೆಯೇ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ದುರಾದೃಷ್ಟವಶಾತ್ ಶಸ್ತ್ರಚಿಕಿತ್ಸೆಯ ನಂತರ ನಿಧನರಾದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕೇವಲ ನಿದ್ದೆ ಮಾಡಿಯೇ 9 ಲಕ್ಷ ರೂಪಾಯಿ ಗೆದ್ದ ಮಹಿಳಾ IPS ಆಕಾಂಕ್ಷಿ.. ಹೇಗೆ?

ಅಫ್ಘಾನಿಸ್ತಾನದ ಗಣ್ಯ ಅಂಪೈರಿಂಗ್ ಪ್ಯಾನೆಲ್‌ನ ಗೌರವಾನ್ವಿತ ಸದಸ್ಯರಾಗಿದ್ದ ಬಿಸ್ಮಿಲ್ಲಾ ಜಾನ್ ಶಿನ್ವಾರಿ (1984 -2025) ನಿಧನದಿಂದ ಎಸಿಬಿಯ ಎಲ್ಲರೂ ತೀವ್ರ ದುಃಖಿತರಾಗಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್​ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದೆ.

ಐಸಿಸಿ ಅಧ್ಯಕ್ಷ ಜಯ್ ಶಾ ಕೂಡ ಸಂತಾಪ ಸೂಚಿಸಿ, ಕ್ರಿಕೆಟ್​ಗೆ ಅವರ ಕೊಡುಗೆ ಅಪಾರ. ಕ್ರಿಕೆಟ್ ಸಮುದಾಯ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತದೆ. ಈ ನಷ್ಟದಿಂದ ದುಃಖಿತರಾಗಿದ್ದೇವೆ ಮತ್ತು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಸಂತಾಪ ಸೂಚಿಸುತ್ತೇವೆ ಎಂದು ಜಯ್ ಶಾ ಹೇಳಿದ್ದಾರೆ.

ಇದನ್ನೂ ಓದಿ: CSK, RR ಮಧ್ಯೆ ಭರ್ಜರಿ ಟ್ರೇಡಿಂಗ್​ ಟಾಕ್; ಚೆನ್ನೈ ಫ್ರಾಂಚೈಸಿಯಿಂದ ಹೊರಬಿತ್ತು ಶಾಕಿಂಗ್​ ನ್ಯೂಸ್​..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment