T20 ಅಂಡರ್-19 ವಿಶ್ವಕಪ್​ಗೆ ಮುತ್ತಿಕ್ಕಿದ ಭಾರತದ ಯುವತಿಯರು.. ಈ ವರ್ಲ್ಡ್​ಕಪ್​ನಲ್ಲಿ ಸೋತೇ ಇಲ್ಲ ಗರ್ಲ್ಸ್​

author-image
Bheemappa
Updated On
T20 ಅಂಡರ್-19 ವಿಶ್ವಕಪ್​ಗೆ ಮುತ್ತಿಕ್ಕಿದ ಭಾರತದ ಯುವತಿಯರು.. ಈ ವರ್ಲ್ಡ್​ಕಪ್​ನಲ್ಲಿ ಸೋತೇ ಇಲ್ಲ ಗರ್ಲ್ಸ್​
Advertisment
  • ಬೌಲಿಂಗ್​ನಲ್ಲಿ ಪರಕ್ರಾಮ ಮೆರೆದ ಟೀಮ್ ಇಂಡಿಯಾದ ವನಿತೆಯರು
  • ಎರಡು ಪ್ರಶಸ್ತಿಗಳನ್ನು ಬಾಚಿಕೊಂಡ ಆಲ್​ರೌಂಡರ್​ ಗೊಂಗಡಿ ತ್ರಿಷಾ
  • ಕೇವಲ ಒಂದು ವಿಕೆಟ್​​ಗೆ ಗುರಿ ಮುಟ್ಟಿದ ಭಾರತಕ್ಕೆ, ಅದ್ಭುತ ವಿಜಯ

ICC ಮಹಿಳೆಯರ T20 ಅಂಡರ್-19 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾದ ಯುವತಿಯರು ಭರ್ಜರಿ ಗೆಲುವು ಪಡೆದು ಮತ್ತೊಮ್ಮೆ ವರ್ಲ್ಡ್​​ಕಪ್​ಗೆ ಮುತ್ತಿಕ್ಕಿದ್ದಾರೆ. ಕಳೆದ ಬಾರಿಯೂ ಭಾರತದ T20 ಅಂಡರ್-19 ವನಿತೆಯರು ಚಾಂಪಿಯನ್ ಆಗಿದ್ದರು. ಇನ್ನು ಭಾರತದ ವನಿತೆಯರು ಈ ಟೂರ್ನಿಯ ಆರಂಭದಿಂದಲೂ ಸೋಲನ್ನೇ ನೋಡಲಿಲ್ಲ ಎನ್ನುವುದು ವಿಶೇಷ.

ಕೌಲಾಲಂಪುರ್​​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ದಕ್ಷಿಣ ಆಫ್ರಿಕಾದ T20 ಅಂಡರ್-19 ತಂಡದ ನಾಯಕಿ ಕೈಲಾ ರೇನೆಕೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಭಾರತೀಯ ವನಿತೆಯರು ಫೀಲ್ಡಿಂಗ್​ಗೆ ಆಗಮಿಸಿದರು. ಇಂಗ್ಲೆಂಡ್ ವಿರುದ್ಧದ ಸೆಮಿಸ್​ನಲ್ಲಿ ಬೌಲಿಂಗ್​ನಲ್ಲಿ ಪರಾಕ್ರಮ ಮೆರೆದಿದ್ದ ಭಾರತದ ಯಂಗ್​ ಗರ್ಲ್ಸ್​ ದಕ್ಷಿಣ ಆಫ್ರಿಕಾ ವಿರುದ್ಧವೂ ಬೆಸ್ಟ್ ಬೌಲಿಂಗ್ ಮಾಡಿದರು. ಇದರಿಂದ ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ ಆಲೌಟ್ ಆಗಿ ಕೇವಲ 82 ರನ್​ಗಳನ್ನು ಮಾತ್ರ ಗಳಿಸಿತು.

publive-image

ಇದನ್ನೂ ಓದಿ:ಕ್ಯಾಪ್ಟನ್​ ರೋಹಿತ್​ ತಂಡಕ್ಕೆ ಸ್ಟ್ರಾಂಗ್ ಮೆಸೇಜ್ ಕಳಿಸಿದ MS ಧೋನಿ.. ಏನದು ಗೊತ್ತಾ?

ಭಾರತದ ಪರ ಬೌಲರ್ಸ್​ ಮಿಂಚಿನ ಬೌಲಿಂಗ್ ಮಾಡಿ ಆಫ್ರಿಕಾ ತಂಡವನ್ನು ಎಡೆಮುರಿ ಕಟ್ಟಿದ್ದಾರೆ. ತಂಡದ ಪರ ಗೊಂಗಡಿ ತ್ರಿಷಾ 3 ವಿಕೆಟ್ ಪಡೆದರೆ, ಆಯುಷಿ ಶುಕ್ಲಾ, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ ತಲಾ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಇನ್ನು 83 ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಯುವತಿಯರು ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಭಾರಿಸಿದರು. ಬೌಲಿಂಗ್​ನಲ್ಲೂ ಮಿಂಚಿದ್ದ ಗೊಂಗಡಿ ತ್ರಿಷಾ ಬ್ಯಾಟಿಂಗ್​ನಲ್ಲಿ 8 ಫೋರ್ ಸಮೇತ 44 ರನ್​ ಸಿಡಿಸಿದರು. ಸಾನಿಕಾ ಚಲ್ಕೆ ಕೂಡ 26 ರನ್​ ಗಳಿಸಿ ತಂಡದ ಗೆಲುವಿಗೆ ತಮ್ಮ ಕಾಣಿಕೆ ನೀಡಿದರು. 11.2 ಓವರ್​ಗಳಲ್ಲಿ 1 ವಿಕೆಟ್​ ಕಳೆದುಕೊಂಡು 84 ರನ್​ ಗಳಿಸುವ ಮೂಲಕ ಭಾರತ ಗೆಲುವಿನ ನಗೆ ಬೀರಿತು. ಈ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ ಯಾವುದನ್ನೂ ಸೋಲದೇ ವನಿತೆಯರು ಗೆದ್ದಿದ್ದಾರೆ. ಇನ್ನು ಗೊಂಗಡಿ ತ್ರಿಷಾ ಅವರು ಪ್ಲೇಯರ್ ಆಫ್ ದೀ ಮ್ಯಾಚ್ ಹಾಗೂ ಪ್ಲೇಯರ್ ಆಫ್ ದೀ ಸೀರೀಸ್ ಪ್ರಶಸ್ತಿ ಪಡೆದುಕೊಂಡರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment