/newsfirstlive-kannada/media/post_attachments/wp-content/uploads/2025/06/WTC_KOHLI.jpg)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಅಮೋಘ ಗೆಲುವು ಪಡೆದು ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ. ಮಾರ್ಕ್ರಾಮ್ ಸೆಂಚುರಿ, ನಾಯಕ ಟೆಂಬಾ ಬವುಮಾ ಅರ್ಧಶತಕದ ನೆರವಿನಿಂದ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿನ ಆಫ್ರಿಕಾ ಗೆದ್ದುಕೊಂಡಿದೆ. ಹಾಗಾದರೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿದಿಯಾ?.
ಈಗಾಗಲೇ ಒಟ್ಟು ಮೂರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಗಳು ನಡೆದಿವೆ. 2019ರಿಂದ 2021ರ ನಡುವೆ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳು ನಡೆದವು. ಈ ಮೊದಲ ಆವೃತ್ತಿಯಲ್ಲೇ ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿಕೊಟ್ಟಿತ್ತು. ಎದುರಾಳಿಯಾಗಿ ನ್ಯೂಜಿಲೆಂಡ್ ಫೈನಲ್ಗೆ ಬಂದಿತ್ತು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು 2021ರ ಜೂನ್ 18 ರಿಂದ 23ರವರೆಗೆ ಸೌತಾಂಪ್ಟನ್‌ನ ದಿ ರೋಸ್ ಬೌಲ್‌ನಲ್ಲಿ ನಡೆಯಿತು. ಮಳೆ ಕಾರಣದಿಂದ ಈ ಫೈನಲ್ ಪಂದ್ಯ ಮುಂದೂಡಿದರೂ ನ್ಯೂಜಿಲೆಂಡ್ ಮಾತ್ರ ಭಾರತ ತಂಡವನ್ನು ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಮೊದಲ ಹಂತದಲ್ಲೇ ಟೀಮ್ ಇಂಡಿಯಾದ ಟ್ರೋಫಿ ಕನಸು ಭಗ್ನಗೊಂಡಿತ್ತು.
2ನೇ ಆವೃತ್ತಿಯಲ್ಲೂ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಹೋಗಿತ್ತು. 2023ರ ಜೂನ್ 7 ರಿಂದ 11ರವರೆಗೆ ಲಂಡನ್‌ನ ದಿ ಓವಲ್‌ನಲ್ಲಿ ನಡೆದ ಈ ಎರಡನೇ ಆವೃತ್ತಿಯ WTC ಫೈನಲ್‌ನಲ್ಲಿ ಆಸ್ಟ್ರೇಲಿಯಾ ಜೊತೆ ಟೀಮ್ ಇಂಡಿಯಾ ಅಖಾಡಕ್ಕೆ ಇಳಿದಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ 444 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿತು. ಆದರೆ 209 ರನ್ಗಳಿಂದ ಭಾರತ ಸೋತು ಮತ್ತೊಮ್ಮೆ ಫೈನಲ್‌ನಲ್ಲಿ ಅವಮಾನಕ್ಕೆ ಒಳಗಾಗಿತ್ತು.
ಇದನ್ನೂ ಓದಿ:ರಜನಿಕಾಂತ್ ಅಳಿಯನ ಜೊತೆ IPL ತಂಡದ ಓನರ್ ಕಾವ್ಯಾ ಮಾರನ್ ಮದುವೆ ಫಿಕ್ಸ್..?
ಸದ್ಯ ಇದೀಗ ಹಾಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ 2027ರಲ್ಲಿ ನಡೆಯಲಿದೆ. ಎರಡು ಬಾರಿ ಫೈನಲ್‌ನಲ್ಲಿ ಸೋತ ಟೀಮ್ ಇಂಡಿಯಾ 2027ಕ್ಕೆ ಕಪ್ ಗೆಲ್ಲುತ್ತ ಎಂದು ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ