/newsfirstlive-kannada/media/post_attachments/wp-content/uploads/2024/09/DRINKING-WATER-IN-EMPTY-STUMOCH.jpg)
ಕರ್ನಾಟಕದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲ ಅಬ್ಬರ ಶುರುವಾಗಿದೆ. ಈ ವರ್ಷದ ಆರಂಭದಲ್ಲೇ ಬೇಸಿಗೆಯಲ್ಲಿ ಸೂರ್ಯನ ಶಾಖ ವಿಪರೀತ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗಿದೆ. ಬೆಂಗಳೂರಲ್ಲಿ ತೀವ್ರ ಉಷ್ಣಾಂಶ ಹೊಸ ದಾಖಲೆಯನ್ನು ಬರೆಯುತ್ತಿದೆ. ಕಲಬುರಗಿಯಲ್ಲಂತೂ ಸೂರ್ಯನ ಪ್ರತಾಪ ಸಂಜೆ 6 ಗಂಟೆಯಾದ್ರೂ ಕಡಿಮೆ ಆಗುತ್ತಿಲ್ಲ.
ಉಷ್ಣತೆ 35ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್ ತಲುಪಿದಾಗ ತುಂಬಾ ತಣ್ಣನೆ ನೀರನ್ನು ಕುಡಿಯೋದು ಡೇಂಜರ್. ತುಂಬಾ ಬಿಸಿಯಾದ ವಾತಾವರಣದಿಂದ ಬಂದ ತಕ್ಷಣವೇ ಐಸ್ ನೀರನ್ನು ಗಟಗಟ ಕುಡಿದ್ರೆ ವ್ಯಕ್ತಿಯ ಸಣ್ಣ ರಕ್ತನಾಳಗಳಿಗೆ ಅಪಾಯವಿದೆ. ಹೀಗಾಗಿ ನೀವು ಹೊರಗೆ ಹೋಗಿ ಮನೆಗೆ ಬಂದಾಗ ತಣ್ಣೀರು ಕುಡಿಯಬಾರದು. ಅದರಲ್ಲೂ ಫ್ರಿಡ್ಜ್ ವಾಟರ್ ಬಳಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ಬೆಚ್ಚಗಿನ ನೀರನ್ನು ನಿಧಾನವಾಗಿ ಕುಡಿಯೋದು ಒಳ್ಳೆಯದು.
ಆರೋಗ್ಯ ಇಲಾಖೆ ಎಚ್ಚರಿಕೆ ಏನು?
ಯಾರಾದರೂ ಬಿಸಿಲಿನ ಶಾಖದಿಂದ ತಣ್ಣಗಾಗಲು ಬಯಸುತ್ತಾರೆ. ಆಗ ತಕ್ಷಣವೇ ಸ್ನಾನ ಮಾಡಿದರೆ ಸ್ನಾನದ ನಂತರ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಗಳು ಇರಬಹುದು. ಬಿಸಿಲಿನಿಂದ ತುಂಬಾ ದಣಿದಿದ್ದರೆ ತಕ್ಷಣವೇ ತಣ್ಣನೆಯ ನೀರನ್ನು ಕುಡಿಯಬಾರದು. ಏಕೆಂದರೆ ಇದು ರಕ್ತನಾಳಗಳು ಅಥವಾ ರಕ್ತನಾಳಗಳನ್ನು ಕಿರಿದಾಗುವಂತೆ ಮಾಡುತ್ತದೆ. ಇದರಿಂದ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಬಿಸಿಲಿನಲ್ಲಿ ನಿಮ್ಮ ಕೈ ಅಥವಾ ಪಾದಗಳನ್ನು ತಕ್ಷಣ ತೊಳೆಯಬೇಡಿ. ತೊಳೆಯುವ ಅಥವಾ ಸ್ನಾನ ಮಾಡುವ ಮೊದಲು ಕನಿಷ್ಠ ಅರ್ಧ ಗಂಟೆಯವರೆಗೆ ಕಾಯಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ:ಅಕ್ರಮ ಚಿನ್ನ ಸಾಗಾಣಿಕೆ ಕೇಸ್; ನಟಿ ರನ್ಯಾ ರಾವ್ಗೆ 15 ದಿನ ನ್ಯಾಯಾಂಗ ಬಂಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ