/newsfirstlive-kannada/media/post_attachments/wp-content/uploads/2025/01/China-hmpv.jpg)
ಚೀನಾದಲ್ಲಿ ತಲ್ಲಣ ಸೃಷ್ಟಿಸಿರುವ HMPV ವೈರಸ್ ಕರ್ನಾಟಕದಲ್ಲೂ ಪತ್ತೆ ಆಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರಿನ 8 ತಿಂಗಳ ಗಂಡು ಮಗುವಿನಲ್ಲಿ ವೈರಸ್ ಪತ್ತೆಯಾದ ಬೆನ್ನಲ್ಲೇ 3 ತಿಂಗಳ ಹೆಣ್ಣು ಮಗುವಿನಲ್ಲೂ ಎಚ್‌ಎಂಪಿವಿ ಕೇಸ್ ಪತ್ತೆಯಾಗಿದೆ.
3 ತಿಂಗಳ ಹೆಣ್ಣು ಮಗುವನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಬೆಂಗಳೂರಿನ ಬಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮಗುವನ್ನ ದಾಖಲಿಸಿ ಚಿಕಿತ್ಸೆ ನೀಡಿದ್ದು, ಈಗ ಚೇತರಿಸಿಕೊಳ್ಳುತ್ತಿದೆ. ಈ ಇಬ್ಬರು ಮಕ್ಕಳಿಗೂ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸ ಇಲ್ಲ ಎನ್ನಲಾಗಿದೆ.
ಐಎಲ್ಐ ಮತ್ತು ಸಾರಿ ಕೇಸ್‌ಗಳಲ್ಲಿ ಯಾವುದೇ ಅಸಾಮಾನ್ಯ ಏರಿಕೆಯಾಗಿಲ್ಲ. ಭಾರತದಲ್ಲಿ ತಪಾಸಣೆ, ಪರೀಕ್ಷೆ, ನಿಗಾದ ವ್ಯವಸ್ಥೆ ಸದೃಢವಾಗಿದೆ ಐಸಿಎಂಆರ್ ಸ್ಪಷ್ಟಪಡಿಸಿದೆ.
HMPV ಹೊಸ ವೈರಸ್ ಅಲ್ಲವೇ ಅಲ್ಲ!
HMPV ವೈರಸ್ ಹೊಸದೇನೂ ಅಲ್ಲ ಎಂದು ಭಾರತದ ತಜ್ಞ ವೈದ್ಯರು ತಿಳಿಸಿದ್ದಾರೆ. ಇದು ಕಳೆದ 2 ದಶಕದಿಂದ ಭಾರತದಲ್ಲೂ ಇರುವ ವೈರಸ್. ಸಾಮಾನ್ಯವಾಗಿ ಚಳಿಗಾಲದಲ್ಲಿ ಬರುವ ವೈರಸ್. ಭಾರತದಲ್ಲೂ ಈ ಹಿಂದೆ ಸಾಕಷ್ಚು ಭಾರಿ ಈ ವೈರಸ್ ಕಂಡು ಬಂದಿದೆ. ಇದು ಇನ್ ಫ್ಲುಯೆಂಜಾ ಅಥವಾ ಸಾಮಾನ್ಯ ವೈರಲ್ ಜ್ವರದಂತೆ ಇರುತ್ತೆ. ಎಚ್‌ಎಂಪಿವಿ ಕೇಸ್ ಗಳಲ್ಲಿ ಸಾಮಾನ್ಯವಾಗಿ ಜ್ವರ, ಕಫ, ಶೀತದ ಲಕ್ಷಣ ಇರುತ್ತೆ. ಇದು ತನಗೆ ತಾನೇ ನಿಯಂತ್ರಣ ಮಾಡಿಕೊಳ್ಳುತ್ತೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ 8 ತಿಂಗಳ ಮಗುವಿಗೆ HMPV ವೈರಸ್? ಆತಂಕ ಸೃಷ್ಟಿಸಿದ ಆರೋಗ್ಯ ಇಲಾಖೆ ಹೇಳಿಕೆ
ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಗುಪ್ತಾ ಅವರು ಮನೆಯಲ್ಲೇ ಜನರಲ್ ಮೆಡಿಸಿನ್ ತೆಗೆದುಕೊಂಡು HMPV ವೈರಸ್ ನಿಯಂತ್ರಿಸಿಕೊಳ್ಳಬಹುದು. ಮಕ್ಕಳಿಗೆ ಅಪರೂಪದ ಕೇಸ್‌ಗಳಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಿಸಬೇಕಾಗುತ್ತೆ. ಇದರ ಸೋಂಕು ಸ್ವಲ್ಪ ಪ್ರಮಾಣದಲ್ಲಿ ಮಾತ್ರವೇ ಇರುತ್ತೆ ಎಂದಿದ್ದಾರೆ.
ಸೀನಿಯರ್ ಕನ್ಸಲ್ಟೆಂಟ್ ಡಾ.ಬಾಬಿ ಬಾಲ್ಹೋತ್ರಾ ಅವರು ಭಾರತದಲ್ಲಿ ಎಚ್‌ಎಂಪಿವಿ ವೈರಸ್ ಸಾಕಷ್ಟು ಭಾರಿ ಕಂಡು ಬಂದಿದೆ. ಚಳಿಗಾಲದಲ್ಲಿ ಸಾಕಷ್ಟು ಭಾರಿ ಕಂಡು ಬಂದಿದೆ. ಇದರ ಲಕ್ಷಣಗಳೆಂದರೇ, ಸ್ಪಲ್ಪ ವೈರಲ್ ಜ್ವರ ಮಾತ್ರ ಬರುತ್ತೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ