newsfirstkannada.com

ಈ ವಯಸ್ಸಿನ ಯುವಕರಿಗೆ ಅತೀ ಹೆಚ್ಚು ಹಾರ್ಟ್​​​ ಅಟ್ಯಾಕ್​​.. ಸ್ಟೋರಿ ಓದಿದ್ರೆ ಬೆಚ್ಚಿಬೀಳ್ತೀರಾ!

Share :

Published August 23, 2024 at 6:17am

Update August 23, 2024 at 10:20am

    ಕಳೆದ ಹತ್ತು ವರ್ಷಗಳಲ್ಲಿ ಯುವಕರಲ್ಲಿ ಹೆಚ್ಚುತ್ತಿದೆ ಹೃದಯ ಸಂಬಂಧಿ ಕಾಯಿಲೆ

    ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ಹಲವು ಅಂಶಗಳು ಬಹಿರಂಗಗೊಂಡಿವೆ

    ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಲು ಕಾರಣವೇನು, ವರದಿ ಏನು ಹೇಳುತ್ತೆ?

ನವದೆಹಲಿ: ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಯುವಕರಲ್ಲಿ ಹಾರ್ಟ್​ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿವೆ ಎಂದು ಐಸಿಎಂಆರ್ ಅಧ್ಯಯನವೊಂದು ಹೇಳಿದೆ. ಅದರಲ್ಲೂ ನಿರುದ್ಯೋಗಿಗಳಲ್ಲಿ ಇದು ಅತಿಹೆಚ್ಚು ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಅತಿಹೆಚ್ಚು ಮಟ್ಟದಲ್ಲಿ ಸಕ್ಕರೆ ಕಾಯಿಲೆ ಇರುವವರಲ್ಲಿ ಹೃದಯಸಂಬಂಧಿ ಕಾಯಿಲೆಗಳು ಕಂಡು ಬರುತ್ತಿವೆ ಎಂದು ಈ ಅಧ್ಯಯನ ಹೇಳಿದೆ.

ಇದನ್ನೂ ಓದಿ: ಮರೆವಿನ ಕಾಯಿಲೆಗೆ ಬಂತು ಮದ್ದು.. ಹೊಸ ಸಂಶೋಧಕರು ಕೊಟ್ರು ಬಿಗ್​ ಅಪ್ಡೇಟ್​!
ಈ ಅಧ್ಯಯನದಲ್ಲಿ 4500 ಜನ 40 ರಿಂದ 69 ವಯಸ್ಸಿನವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 40 ರಿಂದ 49 ವಯಸ್ಸಿನವರಲ್ಲಿ ಅತಿಹೆಚ್ಚು ಹೃದಯಸಂಬಂಧಿ ಕಾಯಿಲೆಗಳು ಕಾಣಿಸುತ್ತಿವೆ ಎಂದು ಐಸಿಎಂಆರ್ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯ ಮೇರೆಗೆ ಈ ಒಂದು ಅಧ್ಯಯನವನ್ನು ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: 4ರಲ್ಲಿ ಒಬ್ಬ MBBS ವಿದ್ಯಾರ್ಥಿಗೆ ಭಯಾನಕ ಸಮಸ್ಯೆ; NMC ಚಿಂತೆಗೆ ಕಾರಣವಾಗಿದ್ದು ಈ ಅಂಕಿ ಅಂಶ!

ಈ ಅಧ್ಯಯನದ ಪ್ರಕಾರ ಶೇಕಡಾ 85ರಷ್ಟು ಜರನಲ್ಲಿ ಅತ್ಯಂತ ಕಡಿಮೆ ಅಂದ್ರೆ ಕಡಿಮೆ ಜನರಲ್ಲಿ ಹೃದಯರಕ್ತನಾಳದ ಸಮಸ್ಯೆ ಕಂಡು ಬಂದಿದೆ ಆದ್ರೆ ಶೇಕಡಾ 14.5 ರಷ್ಟು ಜನರಲ್ಲಿ ಹೃದಯರಕ್ತನಾಳದ ಸಮಸ್ಯೆಗಳು ಅತಿಹೆಚ್ಚು ಕಂಡು ಬಂದಿವೆ ಎಂದು ಹೇಳಲಾಗುತ್ತಿದೆ.
ಗಂಡು ಹಾಗೂ ಹೆಣ್ಣುಮಕ್ಕಳು ಇಬ್ಬರಲ್ಲಿಯೂ ಕಳೆದ ಹತ್ತು ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಹೆಚ್ಚಾಗಿವೆ ಎನ್ನಲಾಗುತ್ತಿದೆ.

ಬದಲಾಗುತ್ತಿರುವ ಹವಾಮಾನ, ವಾಯುಮಾಲಿನ್ಯ, ಆಹಾರ ಪದ್ಧತಿ, ಕೆಲದೊತ್ತಡ ಇವೆಲ್ಲವೂ ಕೂಡ ಹೃದಯಸಂಬಂಧಿ ಕಾಯಿಲೆಗೆ ಆಹ್ವಾನ ನೀಡುತ್ತಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಧ್ಯಯನದಲ್ಲಿ ಕಂಡು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವಯಸ್ಸಿನ ಯುವಕರಿಗೆ ಅತೀ ಹೆಚ್ಚು ಹಾರ್ಟ್​​​ ಅಟ್ಯಾಕ್​​.. ಸ್ಟೋರಿ ಓದಿದ್ರೆ ಬೆಚ್ಚಿಬೀಳ್ತೀರಾ!

https://newsfirstlive.com/wp-content/uploads/2023/06/HEART_ATTACK.jpg

Load More