IDBI ಬ್ಯಾಂಕ್​​ನಲ್ಲಿ 650 ಅಸಿಸ್ಟೆಂಟ್ ಮ್ಯಾನೇಜರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಯಾರಿಗೆ ಅವಕಾಶ?

author-image
Bheemappa
Updated On
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹುದ್ದೆಗಳು.. IT ವಿಭಾಗಕ್ಕೆ ಬೇಕಾಗಿದ್ದಾರೆ ಅಭ್ಯರ್ಥಿಗಳು
Advertisment
  • ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರಿಗೆ ಎಷ್ಟು ಶುಲ್ಕ ಇರುತ್ತೆ?
  • ಅರ್ಜಿ ಸಲ್ಲಿಕೆಗೆ ಕೆಲವೇ ಕೆಲವು ದಿನಗಳು ಮಾತ್ರ ಅವಕಾಶ
  • ಎಷ್ಟು ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು?

ಇಂಡಸ್ಟ್ರಿಯಲ್ ಡೆವಲಪ್​ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಜಿ ಸಲ್ಲಿಕೆ ಮಾಡಲು ಕೆಲವೇ ಕೆಲವು ದಿನಗಳನ್ನು ಮಾತ್ರ ಬ್ಯಾಂಕ್ ನೀಡಿದೆ. ಹೀಗಾಗಿ ಆಸಕ್ತಿ ಇರುವ, ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅಪ್ಲೇ ಮಾಡಬಹುದು.

ಬ್ಯಾಂಕ್​ನಿಂದಲೇ ತಮ್ಮ ವೃತ್ತಿ ಆರಂಭಿಸಬೇಕು ಎನ್ನುವ ಉದ್ಯೋಗಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ ಆಗಿದೆ. ಈ ಉದ್ಯೋಗಕ್ಕೆ ಬೇಕಾದ ಎಲ್ಲ ಮಾಹಿತಿ ಈ ಕಳಗೆ ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಇದನ್ನು ಸಂಪೂರ್ಣವಾಗಿ ಮನನ ಮಾಡಿದರೆ ಉತ್ತಮ. ಉತ್ತಮ ಜೀವನಕ್ಕಾಗಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಮರೆಯಬೇಡಿ.

ಇನ್ನು ಬ್ಯಾಂಕ್​ನಲ್ಲಿ ಯಾವ ಉದ್ಯೋಗಕ್ಕೆ ಅರ್ಜಿ ಕರೆದಿದ್ದಾರೆ, ಅರ್ಜಿ ಶುಲ್ಕ ಎಷ್ಟು, ಉದ್ಯೋಗಗಳು ಎಷ್ಟು ಇವೆ, ಅರ್ಜಿಗೆ ಕೊನೆ ದಿನಾಂಕ ಯಾವುದು, ಎಷ್ಟು ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು ಎನ್ನುವ ಹಲವು ಮಾಹಿತಿ ಈ ಆರ್ಟಿಕಲ್​​ನಲ್ಲಿವೆ.

ಉದ್ಯೋಗದ ಹೆಸರು- ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಕಿರಿಯ ಸಹಾಯಕ ವ್ಯವಸ್ಥಾಪಕ)

ಒಟ್ಟು ಉದ್ಯೋಗಗಳು- 650

ವಿದ್ಯಾರ್ಹತೆ- ಯಾವುದೇ ಪದವಿ

ಇದನ್ನೂ ಓದಿ:1,161 ಕಾನ್‌ಸ್ಟೆಬಲ್ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. SSLC ಪಾಸ್ ಆಗಿದ್ರೆ, ಅಪ್ಲೇ ಮಾಡಿ

publive-image

ಅರ್ಜಿ ಶುಲ್ಕ ಎಷ್ಟಿದೆ?.

ಯುಆರ್, ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- 1,050 ರೂಪಾಯಿ
ಎಸ್​ಸಿ, ಎಸ್​ಟಿ, ವಿಶೇಷ ಚೇತನ ಅಭ್ಯರ್ಥಿಗಳು- 250 ರೂಪಾಯಿ

ವಯಸ್ಸಿನ ಮಿತಿ- 20 ರಿಂದ 25

ವರ್ಗವಾರು ಉದ್ಯೋಗಗಳ ಹಂಚಿಕೆ ಹೇಗಿದೆ?

ಯುಆರ್​- 260, ಎಸ್​ಸಿ- 100, ಎಸ್​ಟಿ- 54, ಇಡಬ್ಲುಎಸ್- 65, ಒಬಿಸಿ- 171,

ಆಯ್ಕೆ ಪ್ರಕ್ರಿಯೆ

ಆನ್​​ಲೈನ್ ಟೆಸ್ಟ್
ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು ಹೀಗಿವೆ

ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 01 ಮಾರ್ಚ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 12 ಮಾರ್ಚ್ 2025
ಈ ಉದ್ಯೋಗಕ್ಕೆ ಎಕ್ಸಾಂ ನಡೆಯುವ ದಿನಾಂಕ- 06 ಏಪ್ರಿಲ್ 2025

ನಿಮಗೆ ಬೇಕಾದ ಸಂಪೂರ್ಣ ಮಾಹಿತಿ- https://static-cdn.publive.online/newsfirstlive-kannada/media/pdf_files/pdf/careersDetailed-Advertisement-PGDBF-2025-26.pdf

ಅರ್ಜಿ ಸಲ್ಲಿಕೆಗೆ-https://ibpsonline.ibps.in/idbipgfeb25/

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment