/newsfirstlive-kannada/media/post_attachments/wp-content/uploads/2024/11/JOB_SEEKERS.jpg)
ಐಡಿಬಿಐ ಬ್ಯಾಂಕ್ ಹೊಸ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ಅರ್ಹ ಹಾಗೂ ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಬ್ಯಾಂಕ್ನ ವಿವಿಧ ಬ್ರ್ಯಾಂಚ್ನಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ತುಂಬಲಾಗುತ್ತಿದೆ. ಹೀಗಾಗಿ ಬ್ಯಾಂಕ್ನಲ್ಲಿ ಕೆಲಸ ಮಾಡಬೇಕು ಎಂದು ಇಚ್ಛಿಸುವವರು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಆನ್ಲೈನ್ ಮೂಲಕ ಅಭ್ಯರ್ಥಿಗಳು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿ ಶುಲ್ಕ ಕೂಡ ಬ್ಯಾಂಕ್ ನಿಗದಿ ಮಾಡಿದೆ. ಈ ಉದ್ಯೋಗಗಳನ್ನ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ಕೆಲಸದ ಅವಧಿಯಲ್ಲಿ ಅಭ್ಯರ್ಥಿಗಳು ಒಳ್ಳೆಯ ಪರ್ಫಾಮೆನ್ಸ್ ತೋರಿದ್ದರೇ ಅವರನ್ನು ಬ್ಯಾಂಕ್ನ ಕೆಲಸದಲ್ಲಿ ಮುಂದುವರೆಸಲಾಗುತ್ತದೆ. ಬ್ಯಾಂಕ್ನಿಂದಲೇ ವೃತ್ತಿ ಜೀವನ ಆರಂಭಿಸಬೇಕು ಎನ್ನುವವರಿಗೆ ಇದೊಂದು ಉತ್ತಮವಾದ ಅವಕಾಶ ಆಗಿದೆ.
ಇನ್ನುಳಿದಂತೆ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ, ಶುಲ್ಕ ಎಷ್ಟು ಪಾವತಿ ಮಾಡಬೇಕು. ಶೈಕ್ಷಣಿಕ ಅರ್ಹತೆ ಏನು ಕೇಳಲಾಗಿದೆ. ಒಟ್ಟು ಎಷ್ಟು ಉದ್ಯೋಗಗಳನ್ನು ಸದ್ಯಕ್ಕೆ ಬ್ಯಾಂಕ್ ಭರ್ತಿ ಮಾಡುತ್ತಿದೆ ಎಂಬುದರ ಎಲ್ಲ ಮಾಹಿತಿಯೂ ಇಲ್ಲಿ ನೀಡಲಾಗಿರುತ್ತದೆ. ಬ್ಯಾಂಕ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬೇಕು.
ಉದ್ಯೋಗಗಳ ಹೆಸರು?
- ಎಕ್ಸ್ಕ್ಯೂಟಿವ್
- ಸೇಲ್ಸ್ ಮ್ಯಾನ್
- ಆಪರೇಷನ್ಸ್ (ಇಎಸ್ಒ)
ಒಟ್ಟು ಹುದ್ದೆಗಳು- 1,000
ಇದನ್ನೂ ಓದಿ:ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ಉದ್ಯೋಗ ನೇಮಕಾತಿ.. ಅಂತಿಮ ದಿನಾಂಕ?
ವಯಸ್ಸಿನ ಮಿತಿ- 20 ರಿಂದ 25 ವರ್ಷಗಳು
ಅಭ್ಯರ್ಥಿಗಳು 2 ಅಕ್ಟೋಬರ್ 1999 ರಿಂದ 1 ಅಕ್ಟೋಬರ್ 2004ರ ಒಳಗೆ ಜನಿಸಿರಬೇಕು
ವೇತನ ಶ್ರೇಣಿ- ಮೊದಲ ತಿಂಗಳು 29,000, 2ನೇ ತಿಂಗಳು 31,000
ವಿದ್ಯಾರ್ಹತೆ- ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು
ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತೆ?
- ಆನ್ಲೈನ್ ಪರೀಕ್ಷೆ
- ದಾಖಲಾತಿ ಪರಿಶೀಲನೆ
- ವೈಯಕ್ತಿಕ ಸಂದರ್ಶನ
- ಮೆಡಿಕಲ್ ಟೆಸ್ಟ್
ಅರ್ಜಿ ಶುಲ್ಕ ಎಷ್ಟು?
- ಎಸ್ಸಿ, ಎಸ್ಟಿ, ವಿಶೇಷ ಚೇತನರು- 250 ರೂಪಾಯಿಗಳು
- ಉಳಿದ ಎಲ್ಲ ಅಭ್ಯರ್ಥಿಗಳು- 1,050 ರೂಪಾಯಿಗಳು
ಇಂಪಾರ್ಟೆಂಟ್ ದಿನಾಂಕ-
- 16 ನವೆಂಬರ್ 2024 ಅರ್ಜಿಗೆ ಕೊನೆ ದಿನಾಂಕ
- ಆನ್ಲೈನ್ ಟೆಸ್ಟ್ ಡಿಸೆಂಬರ್ 01ಕ್ಕೆ ನಡೆಸಬಹುದು
ಪ್ರಮುಖ ಲಿಂಕ್-https://static-cdn.publive.online/newsfirstlive-kannada/media/pdf_files/pdf/careersESO-2025-26.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ