ಬ್ಯಾಂಕ್​​ನಿಂದ ಗುಡ್​ನ್ಯೂಸ್​; ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು.. ನಾಳೆ ಅರ್ಜಿ ಆರಂಭ

author-image
Bheemappa
Updated On
ಬ್ಯಾಂಕ್​​ನಿಂದ ಗುಡ್​ನ್ಯೂಸ್​; ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು.. ನಾಳೆ ಅರ್ಜಿ ಆರಂಭ
Advertisment
  • ಯಾವ ಕೋರ್ಸ್ ಮಾಡಿದವ್ರು ಹುದ್ದೆಗಳಿಗೆ ಅಪ್ಲೇ ಮಾಡಬಹುದು?
  • 100 ಅಲ್ಲ, 200 ಅಲ್ಲ 500ಕ್ಕೂ ಅಧಿಕ ಹುದ್ದೆಗಳ ಭರ್ತಿ ಮಾಡ್ತಿದ್ದಾರೆ
  • ಆಸಕ್ತಿ ಇರುವವರು ಆನ್​​ಲೈನ್ ಮೂಲಕ ಅಪ್ಲೇ ಮಾಡಬಹುದು

ಭಾರತದ ಪ್ರಮುಖ ಬ್ಯಾಂಕ್​​ಗಳಲ್ಲಿ ಒಂದಾಗಿರುವ ಐಡಿಬಿಐ ಬ್ಯಾಂಕ್​​ನಲ್ಲಿ ಉದ್ಯೋಗಗಳು ಖಾಲಿ ಇವೆ. ಈ ಸಂಬಂಧ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಬ್ಯಾಂಕಿಂಗ್​ ಮೂಲಕ ವೃತ್ತಿ ಆರಂಭ ಮಾಡಬೇಕು ಎನ್ನುವ ಅಭ್ಯರ್ಥಿಗಳಿಗೆ ಇದು ಗೋಲ್ಡನ್ ಚಾನ್ಸ್ ಆಗಿದೆ. ಐಡಿಬಿಐ ಬ್ಯಾಂಕ್​​ನ ಬ್ರ್ಯಾಂಚ್​ಗಳು ದೇಶದ ವಿವಿಧ ಕಡೆ ಇವೆ. ಇಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈಗ ಅರ್ಜಿ ಕರೆಯಲಾಗಿದೆ.

ಐಡಿಬಿಐ ಬ್ಯಾಂಕ್​​ನವರು ಕರೆದಿರುವ ಉದ್ಯೋಗಗಳು 500ಕ್ಕೂ ಅಧಿಕ ಇವೆ. ಆಕಾಂಕ್ಷಿಗಳು ಆನ್​​ಲೈನ್​ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಇದಕ್ಕಾಗಿ ಇಲಾಖೆಯ ಅಧಿಕೃತ ವೆಬ್​​ಸೈಟ್​ಗೆ ಭೇಟಿ ನೀಡಿ ನಿಮ್ಮ ಅರ್ಜಿ ಸಲ್ಲಿಸಬಹುದು. ಇನ್ನು ಈ ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ಅಪ್​ಡೇಟ್​ ನೋಡಬೇಕು ಎಂದರೆ ಬ್ಯಾಂಕ್​ನ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಬೇರೆ ಮೂಲದಿಂದ ಬರುವ ಸುದ್ದಿಗಳನ್ನ ನಂಬಬಾರದು ಎಂದು ತಿಳಿಸಲಾಗಿದೆ. Website- idbibank.in

  • ಹುದ್ದೆಯ ಹೆಸರು- ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (JAM)
  • ಒಟ್ಟು ಎಷ್ಟು ಉದ್ಯೋಗಗಳು ಇವೆ- 600
  • ಕೆಲಸ ಮಾಡುವ ಸ್ಥಳ- ಭಾರತದ್ಯಾಂತ

ಶೈಕ್ಷಣಿಕ ಅರ್ಹತೆ

  • ಸಾಮಾನ್ಯವಾದಿ ಹುದ್ದೆ (Generalist Post)- ಪದವಿ ಪೂರ್ಣಗೊಳಿಸಿರಬೇಕು
  • ಸ್ಪೆಷಲಿಸ್ಟ್ ಪೋಸ್ಟ್ (Specialist Post (AAO))- ಕೃಷಿ, ಹಾರ್ಟಿಕಲ್ಚರ್, ಅನಿಮಲ್ ಹಸ್ಬಂಡ್ರಿ ಸೇರಿ ಇದಕ್ಕೆ ಸಂಬಂಧಿಸಿದ ಕೋರ್ಸ್​ನಲ್ಲಿ 4 ವರ್ಷದ ಪದವಿ ಪಡೆದಿರಬೇಕು
    ಈ ಎರಡು ಹುದ್ದೆಗಳಿಗೆ ಎಸ್​​ಸಿ, ಎಸ್​ಟಿ ವಿಶೇಷ ಚೇತನರು ಶೇ.55 ರಷ್ಟು ಅಂಕ ಪಡೆದಿರಬೇಕು

publive-image

ವಯಸ್ಸಿನ ಮಿತಿ ಹೇಗಿದೆ?

20 ರಿಂದ 25 ವರ್ಷಗಳು
ಸರ್ಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ ಎಷ್ಟು?

  • ಜನರಲ್, ಒಬಿಸಿ, ಇಡಬ್ಲುಎಸ್- 1050 ರೂಪಾಯಿ
  • ಎಸ್​​ಸಿ, ಎಸ್​ಟಿ ವಿಶೇಷ ಚೇತನರು- 250 ರೂಪಾಯಿ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

  • ಆನ್​​ಲೈನ್ ಟೆಸ್ಟ್
  • ದಾಖಲಾತಿ ಪರಿಶೀಲನೆ
  • ವೈಯಕ್ತಿಕ ಸಂದರ್ಶನ
  • ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆ (PRMT)

ಈ ದಿನಾಂಕ ನೆನಪಿಡಿ

  • 21 ನವೆಂಬರ್ 2024- ಅರ್ಜಿ ಆರಂಭ
  • 30 ನವೆಂಬರ್ 2024- ಅರ್ಜಿ ಕೊನೆ ದಿನ
  • ತಾತ್ಕಾಲಿಕ ಆನ್‌ಲೈನ್ ಪರೀಕ್ಷಾ ದಿನಾಂಕ: ಡಿಸೆಂಬರ್ 2024/ಜನವರಿ 2025

ಪ್ರಮುಖವಾಗಿ ಬೇಕಾಗುವ ದಾಖಲಾತಿಗಳು

  • ಜನನ ಪ್ರಮಾಣಪತ್ರ ಅಥವಾ 10ನೇ/12ನೇ ತರಗತಿ ಅಂಕಪಟ್ಟಿ
  • ಪದವಿ ಅಂಕ ಪಟ್ಟಿಗಳು ಮತ್ತು ಪದವಿ ಪ್ರಮಾಣಪತ್ರ
  • ವಾಸಸ್ಥಳ (ಜನರಲಿಸ್ಟ್ ಪೋಸ್ಟ್ (ಸಾಮಾನ್ಯವಾದಿ ಹುದ್ದೆ ) ಅರ್ಜಿದಾರರಿಗೆ).
  • ಜಾತಿ ಪ್ರಮಾಣಪತ್ರ
  • ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ).
  • ಆಧಾರ್ ಕಾರ್ಡ್​, ಪಾಸ್‌ಪೋರ್ಟ್, ವೋಟರ್ ಐಡಿ
  • ಇತ್ತೀಚಿನ 2 ಪಾಸ್‌ಪೋರ್ಟ್​ಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment