/newsfirstlive-kannada/media/post_attachments/wp-content/uploads/2024/11/JOBS_KPSC-1.jpg)
ಭಾರತದ ಪ್ರಮುಖ ಬ್ಯಾಂಕ್ ಆಗಿರುವ ಐಡಿಬಿಐ ಹೊಸ ಉದ್ಯೋಗಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿತ್ತು. ಈಗಾಗಲೇ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಆದರೆ ಇದುವರೆಗೂ ಯಾರು ಅರ್ಜಿ ಸಲ್ಲಿಕೆ ಮಾಡಿಲ್ಲವೋ ಅವರು ಇಂದು ಸಂಜೆ ಒಳಗೆ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಏಕೆಂದರೆ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಇಂದು ಕೊನೆಯ ದಿನವಾಗಿದೆ. ಯಾರು ಬ್ಯಾಂಕಿಂಗ್ ಮೂಲಕ ವೃತ್ತಿ ಆರಂಭ ಮಾಡಬೇಕು ಎನ್ನುವ ಆಸಕ್ತಿ ಇದೆಯೋ ಅವರಿಗೆ ಉತ್ತಮ ಅವಕಾಶ ಆಗಿದೆ. ದೇಶದ ವಿವಿಧ ಕಡೆ ಐಡಿಬಿಐ ಬ್ಯಾಂಕ್ನ ಬ್ರ್ಯಾಂಚ್ಗಳು ಇವೆ. ಇಲ್ಲಿಗೆ ಆಯ್ಕೆ ಆದ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತಿದೆ.
ಉದ್ಯೋಗಾಕಾಂಕ್ಷಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಇನ್ನು ಈ ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ಅಪ್ಡೇಟ್ ನೋಡಬೇಕು ಎಂದರೆ ಬ್ಯಾಂಕ್ನ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ವೆಬ್ಸೈಟ್- idbibank.in
ಶೈಕ್ಷಣಿಕ ಅರ್ಹತೆ
Generalist Post- ಪದವಿ ಪೂರ್ಣಗೊಳಿಸಿರಬೇಕು
Specialist Post (AAO)- ಕೃಷಿ, ಹಾರ್ಟಿಕಲ್ಚರ್, ಅನಿಮಲ್ ಹಸ್ಬಂಡ್ರಿ ಸೇರಿ ಇದಕ್ಕೆ ಸಂಬಂಧಿಸಿದ ಕೋರ್ಸ್ನಲ್ಲಿ 4 ವರ್ಷದ ಪದವಿ ಪಡೆದಿರಬೇಕು
ಈ ಎರಡು ಹುದ್ದೆಗಳಿಗೆ ಎಸ್ಸಿ, ಎಸ್ಟಿ, ವಿಶೇಷ ಚೇತನರು ಶೇ.55 ಅಂಕದಲ್ಲಿ ಪಾಸ್ ಆಗಿರಬೇಕು
ಇದನ್ನೂ ಓದಿ: ಆಗ್ನೇಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1791 ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ನೀವು ಟ್ರೈ ಮಾಡಿ!
ಅರ್ಜಿ ಶುಲ್ಕ ಎಷ್ಟು?
- ಎಸ್ಸಿ, ಎಸ್ಟಿ ವಿಶೇಷ ಚೇತನರು- 250 ರೂಪಾಯಿ
- ಜನರಲ್, ಒಬಿಸಿ, ಇಡಬ್ಲುಎಸ್- 1050 ರೂಪಾಯಿ
ಹುದ್ದೆಯ ಹೆಸರು- ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (JAM)
ಒಟ್ಟು 600 ಉದ್ಯೋಗಗಳು ಇವೆ
ವಯಸ್ಸಿನ ಮಿತಿ ಹೇಗಿದೆ?
20 ರಿಂದ 25 ವರ್ಷಗಳು
ಸರ್ಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
- ಆನ್‌ಲೈನ್ ಟೆಸ್ಟ್
- ದಾಖಲಾತಿ ಪರಿಶೀಲನೆ
- ವೈಯಕ್ತಿಕ ಸಂದರ್ಶನ
- ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆ (PRMT)
ಅರ್ಜಿ ಸಲ್ಲಿಕೆಗೆ ಕೊನೆ ದಿನ- 30 ನವೆಂಬರ್ 2024
ತಾತ್ಕಾಲಿಕ ಆನ್‌ಲೈನ್ ಪರೀಕ್ಷಾ ದಿನಾಂಕ: ಡಿ.2024/ಜ.2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ