ಹುದ್ದೆಗಳಿಗೆ ಅರ್ಜಿ ಆಹ್ವಾನ.. ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ್ರೆ 50 ಸಾವಿರಕ್ಕಿಂತ ಹೆಚ್ಚು ಸ್ಯಾಲರಿ

author-image
Bheemappa
Updated On
ಸದ್ಯದಲ್ಲೇ BDAನಲ್ಲಿ ಉದ್ಯೋಗಗಳ ನೇಮಕಾತಿ.. ಸರ್ಕಾರದ ಅನುಮತಿಗೆ ಕಾಯುತ್ತಿರುವ ಇಲಾಖೆ
Advertisment
  • ಉದ್ಯೋಗಕಾಂಕ್ಷಿಗಳಿಗೆ ಶುಭಸುದ್ದಿ, ಈಗಲೇ ಅಪ್ಲೇ ಮಾಡಿ
  • ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ್ರೆ ಎಷ್ಟು ಸಂಬಳ?
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಯಾವುದು..?

ಕೆಲಸ ಹುಡುಕುತ್ತಿರುವ ಉದ್ಯೋಗಕಾಂಕ್ಷಿಗಳು ಈ ಕಡೆ ಗಮನಿಸಿ. ನಿಮಗಾಗಿ ಇಲ್ಲೊಂದು ಉದ್ಯೋಗ ಸುದ್ದಿ ಇದ್ದು ಈ ಹುದ್ದೆಗಳಿಗೆ ಆಸಕ್ತರು, ಅರ್ಹರು ಆಗಿದ್ದರೇ ಅರ್ಜಿ ಸಲ್ಲಿಕೆ ಮಾಡಬಹುದು. 600ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು ವೇತನ ಶ್ರೇಣಿ ಕೂಡ ಉತ್ತಮ ಮಟ್ಟದಲ್ಲಿದೆ. ಹೀಗಾಗಿ ಉದ್ಯೋಗ ಅವಶ್ಯಕತೆ ಇದ್ದರೇ ಈ ಕೂಡಲೇ ಅಪ್ಲೇ ಮಾಡಬಹುದು.

ಇಂಡಸ್ಟ್ರಿಯಲ್ ಡೆವಲಪ್​ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಉದ್ಯೋಗಗಳನ್ನು ಘೋಷಣೆ ಮಾಡಿದೆ. ಈಗಾಗಲೇ ತನ್ನ ವೆಬ್​ಸೈಟ್​ನಲ್ಲಿ ಉದ್ಯೋಗಗಳ ಪೂರ್ಣ ಮಾಹಿತಿಯನ್ನು ಪ್ರಕಟ ಮಾಡಿದೆ. ಆನ್​ಲೈನ್ ಅರ್ಜಿಗಳು ಇದೇ ತಿಂಗಳಿನಿಂದ ಆರಂಭವಾಗಿವೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಉದ್ಯೋಗದ ಹೆಸರು- ಜೂನಿಯರ್ ಸಹಾಯಕ ವ್ಯವಸ್ಥಾಪಕ (JAM- Grade ‘O’)

ಒಟ್ಟು ಉದ್ಯೋಗಗಳು- 676 (ಸರ್ಕಾರಿ ಉದ್ಯೋಗಗಳು)

ವೇತನ ಶ್ರೇಣಿ ಎಷ್ಟು ಇದೆ?
ಆಯ್ಕೆ ಆದ ಅಭ್ಯರ್ಥಿಗಳಿಗೆ ಮೊದಲು ತಿಂಗಳು 5,000 ರೂ. ನೀಡಲಾಗುತ್ತದೆ. ಇಲ್ಲಿಂದ ತರಬೇತಿಗೆ ಆಯ್ಕೆ ಮಾಡಿ ತಿಂಗಳಿಗೆ 15,000 ರೂ ನೀಡಲಾಗುತ್ತದೆ. ಪ್ರೊಬೇಷನರಿ ಅವಧಿ ಪೂರ್ಣಗೊಂಡ ನಂತರ ವರ್ಷಕ್ಕೆ 6.14 ಲಕ್ಷದಿಂದ 6.50 ಲಕ್ಷ ರೂಪಾಯಿವರೆಗೆ ಸಂಬಳ ಇರುತ್ತದೆ. ಅಂದರೆ ಪ್ರತಿ ತಿಂಗಳಿಗೆ 54,166 ರೂಪಾಯಿ ಸ್ಯಾಲರಿ ನೀಡಲಾಗುತ್ತದೆ.

ಇದನ್ನೂ ಓದಿ:ಸಹಾಯಕ ವ್ಯವಸ್ಥಾಪಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆರಂಭದಲ್ಲೇ 48,000 ರೂಪಾಯಿ ಸಂಬಳ

publive-image

ಅರ್ಜಿ ಶುಲ್ಕ?
ಜನರಲ್, ಒಬಿಸಿ, ಇಡಬ್ಲುಎಸ್- 1050 ರೂಪಾಯಿ
ಎಸ್​​ಸಿ. ಎಸ್​​ಟಿ, ವಿಕಲ ಚೇತನರು- 250 ರೂಪಾಯಿ

ಶೈಕ್ಷಣಿಕ ಅರ್ಹತೆ?
ಯಾವುದೇ ಪದವಿ (ಕಂಪ್ಯೂಟರ್ ಜ್ಞಾನ ತಿಳಿದಿರಬೇಕು)

ವಯಸ್ಸಿನ ಮಿತಿ
20 ರಿಂದ 25 ವರ್ಷದೊಳಗಿನವರಿಗೆ ಅವಕಾಶ

ವರ್ಗವಾರು ಮೀಸಲಾತಿ
ಯುಆರ್​- 271, ಒಬಿಸಿ- 124, ಇಡಬ್ಲ್ಯೂಎಸ್- 67, ಎಸ್‌ಸಿ- 140, ಎಸ್‌ಟಿ- 74,

ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 08 ಮೇ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20 ಮೇ 2025

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಮೊದಲು ಪೂರ್ಣವಾದ ಮಾಹಿತಿಯನ್ನು ಇಲಾಖೆಯ ವೆಬ್​ಸೈಟ್​ನಿಂದ ಓದಿಕೊಳ್ಳಬೇಕು. ಬಳಿಕ ಈ ಉದ್ಯೋಗಕ್ಕೆ ಅರ್ಹರು ಹೌದಾ, ಅಲ್ಲವೇ ಎಂದು ದೃಢ ಪಡಿಸಿಕೊಳ್ಳಬೇಕು.

ಅರ್ಜಿ ಸಲ್ಲಿಕೆಗೆ-https://ibpsonline.ibps.in/idbiamapr25/

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment