ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಿದ ಬ್ಯಾಂಕ್.. 25 ರಿಂದ 40 ವರ್ಷದವ್ರಿಗೆ ಅವಕಾಶ

author-image
Bheemappa
Updated On
ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!
Advertisment
  • ಅಭ್ಯರ್ಥಿಗಳು ಅರ್ಜಿ ಶುಲ್ಕಕ್ಕೆ ಎಷ್ಟು ಪಾವತಿ ಮಾಡಬೇಕು?
  • ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ ಇಲ್ಲಿದೆ
  • ಯಾವ ಉದ್ಯೋಗಗಳನ್ನು ಸದ್ಯಕ್ಕೆ ಭರ್ತಿ ಮಾಡಲಾಗುತ್ತಿದೆ?

ಇಂಡಸ್ಟ್ರೀಯಲ್ ಡೆವಲಪ್​ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಅಧಿಕೃತವಾಗಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಲಾಗಿದೆ. ಬಂಗಾರದಂತ ಅವಕಾಶವನ್ನು ಅಭ್ಯರ್ಥಿಗಳು ಬಳಕೆ ಮಾಡಿಕೊಳ್ಳಬೇಕು.

ಐಡಿಬಿಐ ಬ್ಯಾಂಕ್ ಆಹ್ವಾನ ಮಾಡಿರುವ ಈ ಉದ್ಯೋಗಗಳ ಬಗ್ಗೆ ಎಲ್ಲ ಮಾಹಿತಿ ಇಲ್ಲಿ ನೀಡಲಾಗಿದೆ. ಅರ್ಜಿ ಶುಲ್ಕ, ಹುದ್ದೆಗಳ ಹೆಸರು, ಎಷ್ಟು ಉದ್ಯೋಗಗಳು ಖಾಲಿ ಇವೆ, ಯಾರು ಈ ಕೆಲಸಗಳಿಗೆ ಅರ್ಹರು, ಸ್ಯಾಲರಿ ಎಷ್ಟು? ಎನ್ನುವ ಇತರೆ ಸಂಪೂರ್ಣ ಮಾಹಿತಿ ಇಲ್ಲಿದೆ. ಉದ್ಯೋಗಕ್ಕೆ ಬೇಕಾದ ಎಲ್ಲ ದಾಖಲೆ ಅಭ್ಯರ್ಥಿಗಳ ಬಳಿ ಇರಬೇಕು.

ಉದ್ಯೋಗದ ಹೆಸರು; ವಿವಿಧ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು (Specialist Officer)

  • ಡೆಪ್ಯೂಟಿ ಜನರಲ್ ಮ್ಯಾನೇಜರ್- 8
  • ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 42
  • ಮ್ಯಾನೇಜರ್ ಹುದ್ದೆಗಳು- 69

ಒಟ್ಟು ಉದ್ಯೋಗಗಳು; 119 ಇವೆ

ಇದನ್ನೂ ಓದಿ:ವಿವಿಧ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ.. ಎಷ್ಟು ಉದ್ಯೋಗಗಳು ಖಾಲಿ ಇವೆ?

publive-image

ಕೆಲಸ ಮಾಡುವ ಸ್ಥಳ ಭಾರತದಲ್ಲಿ

ವಿದ್ಯಾರ್ಹತೆ;

ಬಿಇ, ಬಿಟೆಕ್, ಎಂಎಸ್​ಸಿ, ಎಂಸಿಎ, ಎಂಟೆಕ್, ಎಂಇ, ಸಿಎ, ಎಂಬಿಎ, ಬಿಸಿಎ, ಬಿಎಸ್​ಸಿ, ಸಿವಿಲ್ ಇಂಜಿನಿಯರ್, (ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ ಕೇಳಲಾಗಿದೆ)

ಅರ್ಜಿ ಶುಲ್ಕ ಎಷ್ಟು ಪಾವತಿ ಮಾಡಬೇಕು?

ಜನರಲ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳು- 1,050 ರೂಪಾಯಿ
ಎಸ್​ಸಿ ಎಸ್​ಟಿ- 250 ರೂಪಾಯಿ

ವಯೋಮಿತಿ- 25 ರಿಂದ 40 ವರ್ಷದ ಒಳಗಿನವರು

ಹುದ್ದೆಗೆ ಆಯ್ಕೆ ಪ್ರಕ್ರಿಯೆ

  • ಪೂರ್ವಭಾವಿ ತಪಾಸಣೆ (Preliminary Screening)
  • ದಾಖಲೆ ಪರಿಶೀಲನೆ
  • ವೈಯಕ್ತಿಕ ಸಂದರ್ಶನ

ಉದ್ಯೋಗಕ್ಕೆ ಸಂಬಂಧಿಸಿದ ದಿನಗಳು
ಅರ್ಜಿ ಸಲ್ಲಿಕೆ ಮಾಡುವ ಆರಂಭದ ದಿನಾಂಕ; 7 ಏಪ್ರಿಲ್ 2025
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ; 20 ಏಪ್ರಿಲ್ 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment