/newsfirstlive-kannada/media/post_attachments/wp-content/uploads/2024/02/IDFC.jpg)
ಬೆಳಗಾವಿ: ಸಾಲ ಮರುಪಾವತಿ ವಿಚಾರದಲ್ಲಿ ಖಾಸಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡ್ತಿದ್ದಾರೆಂದು ಆರೋಪಿಸಿ ಬೈಲಹೊಂಗಲ ತಾಲೂಕಿನ ಬೈರನಟ್ಟಿ ಗ್ರಾಮದ ಮಹಿಳೆ ಒಬ್ಬರು ವಿಷ ಸೇವಿಸಿದ್ದಾಳೆ.
ಸಾಲ ತುಂಬುವಂತೆ ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ, ಇದರಿಂದ ಬದುಕೋದು ಕಷ್ಟ ಆಗ್ತಿದೆ ಎಂದು ಆರೋಪಿಸಿ ವಿಷ ಸೇವಿಸಿದ್ದು, ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಸು ಕೊಂಡುಕ್ಕೊಳ್ಳಲು ಮಹಿಳೆಯ ಮಗ 2 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದ. ಯುವಕ 2 ಲಕ್ಷ ರೂಪಾಯಿ ಸಾಲಕ್ಕೆ ಪ್ರತಿ ತಿಂಗಳು ಹಣ ತುಂಬುತ್ತಾ ಬಂದಿದ್ದ. ಜಮಖಂಡಿಯಲ್ಲಿರುವ ಹೋಟೆಲ್ ಒಂದರಲ್ಲಿ ಕೆಲಸ ಮಾಡಿ ಸಾಲ ತೀರಿಸುತ್ತಿದ್ದ. ಆದರೆ ಈ ತಿಂಗಳು 15 ದಿನ ತಡವಾಗಿದ್ದಕ್ಕೆ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಖಾಸಗಿ ಬ್ಯಾಂಕ್ ಸಿಬ್ಬಂದಿ ಸೋಮು ಕಿರಗಾವ ಹಾಗೂ ಇನ್ನೋರ್ವ ಸಿಬ್ಬಂದಿಯಿಂದ ವಿರುದ್ಧ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ವಿಷ ಸೇವಿಸಿದ್ದ ಯುವಕನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವೇಳೆ ಆಕೆಯ ಮನೆಗೆ ಎಂಟ್ರಿ ನೀಡಿದ್ದ ಬ್ಯಾಂಕ್ ಸಿಬ್ಬಂದಿ, ನನ್ನ ಮಗ ಬಂದು ನಿಮ್ಮ ದುಡ್ಡು ಕಟ್ಟುತ್ತಾನೆ ಬಿಡಿ ಎಂದು ಅಂಗಲಾಚಿಕೊಂಡಿದ್ದಾಳೆ. ಆದರೆ ಅವರು ಆ ಯುವಕನಿಗೆ ಫೋನ್ ಕರೆ ಮಾಡಿ ನಿಂದಿಸಿದ್ದರಂತೆ. ಒಂದು ದಿನ ಗ್ರಾಮಕ್ಕೆ ಬಂದಿದ್ದ ಸಿಬ್ಬಂದಿ, ಮನೆ ಬಿಟ್ಟು ಹೊರಗೆ ಬಾ, ನಾವು ಮನೆಗೆ ಕೀಲಿ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಆಗ ಮರ್ಯಾದೆ ವಿಚಾರವಾಗಿ ನಾನು ವಿಷ ಸೇವಿಸುತ್ತೇನೆ ಎಂದಿದ್ದಾಳೆ. ಅದಕ್ಕೆ ಸಿಬ್ಬಂದಿ ನೀನು ವಿಷವನ್ನಾದರೂ ಕುಡಿದು ಸಾಯಿ. ವಿಷ ಕುಡಿದ ಮೇಲಾದರೂ ನಿನ್ನ ಮಗ ಬರುತ್ತಾನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ದುಃಖಿತಳಾದ ಮಹಿಳೆ ವಿಷವನ್ನು ಸೇವಿಸಿದ್ದಾಳೆ. ಅಲ್ಲಿದ್ದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿರುವ ಅವರು, ಚೇತರಿಸಿಕೊಳ್ತಿದ್ದಾರೆ. ಬೈಲಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us