newsfirstkannada.com

ಬೆಂಗಳೂರು ಪೊಲೀಸರಿಂದ ಮುಂಬೈನಲ್ಲಿ ‘ಇಡ್ಲಿ ಗುರು’ ಹೋಟೆಲ್ ಮಾಲೀಕನ ಬಂಧನ..!

Share :

Published February 14, 2024 at 2:56pm

    ಇಡ್ಲಿ ಗುರು ಮಾಲೀಕ ಕಾರ್ತಿಕ್ ಶೆಟ್ಟಿ ಅರೆಸ್ಟ್

    ಫ್ರಾಂಚೈಸಿ ನೀಡೋದಾಗಿ ವಂಚನೆ ಆರೋಪ

    ಎಫ್​ಐಆರ್​ ದಾಖಲಾಗ್ತಿದ್ದಂತೆ ತಲೆ ಮರೆಸಿಕೊಂಡಿದ್ದ

ಬೆಂಗಳೂರು: ಪ್ರಾಂಚೈಸಿ ಹೆಸರಲ್ಲಿ ಮೋಸ ಮಾಡಿದ ಆರೋಪದ ಮೇಲೆ ‘ಇಡ್ಲಿ ಗುರು’ ಹೋಟೆಲ್ ಮಾಲೀಕನ ಬಂಧನ ಆಗಿದೆ.
ಹೋಟೆಲ್ ಇಡ್ಲಿ ಗುರು ಮಾಲೀಕ ಕಾರ್ತಿಕ್ ಶೆಟ್ಟಿ ಹಾಗೂ ಪತ್ನಿ ಮಂಜುಳಾ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇಂದು ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಬರುತ್ತಿದ್ದಾರೆ.

ಕಾರ್ತಿಕ್ ಅಂಡ್ ಗ್ಯಾಂಗ್ ವಿರುದ್ಧ ಫ್ರಾಂಚೈಸಿ ನೀಡುವುದಾಗಿ ವಂಚಿಸಿದ ಆರೋಪ ಕೇಳಿಬಂದಿತ್ತು. ಎಫ್ಐಆರ್ ದಾಖಲಾಗ್ತಿದ್ದಂತೆ ಕಾರ್ತಿಕ್ ಶೆಟ್ಟಿ ತಲೆ ಮರೆಸಿಕೊಂಡಿದ್ದ. ಫ್ರಾಂಚೈಸಿ ನೀಡುವುದಾಗಿ ಹೇಳಿ ಕಾರ್ತಿಕ್ ಶೆಟ್ಟಿ ವಂಚಿಸಿದ್ದಾನೆ ಎಂದು ಚೇತನ್ ಅನ್ನೋರು ದೂರು ನೀಡಿದ್ದರು.

ಚೇತನ್ ದೂರಿನಲ್ಲಿ ಏನಿತ್ತು..?
ಕಾರ್ತಿಕ್ ಶೆಟ್ಟಿ ಅಂಡ್ ಗ್ಯಾಂಗ್​, ನನ್ನ ಬಳಿ ಮೂರು ಲಕ್ಷ ರೂಪಾಯಿ ಪಡೆದು ಮೋಸ ಮಾಡಿದೆ. ಫುಡ್ ಕಾರ್ಟ್ ತಂದು ನಿಲ್ಲಿಸಿ ಸ್ವಲ್ಪ ದಿನಗಳ ಬಳಿಕ ವ್ಯಾಪಾರ ಆಗುತ್ತಿಲ್ಲ. ಬೇರೆಡೆ ವ್ಯಾಪಾರ ಮಾಡೋಣ ಅಂತಾ ಶಿಫ್ಟ್ ಮಾಡಿದ್ದರು. ಕಮೀಷನ್ ನೀಡುವುದಾಗಿ ಹೇಳಿ, ಯಾವುದೇ ಕಮೀಷನ್ ಸಹ ನೀಡಿಲ್ಲ. ಅಂಗಡಿಗಾಗಿ ಖರ್ಚಾದ ಹಣವನ್ನೂ ನೀಡಿಲ್ಲ. ಆರೋಪಿಗಳನ್ನು ಭೇಟಿಯಾದಾಗ ಜೀವ ಬೆದರಿಕೆ ಹಾಕಿದ್ದರು ಎಂದು ಪೊಲೀಸರಿಗೆ ಚೇತನ್ ದೂರು ನೀಡಿದ್ದರು.

ವಂಚನೆ ಸಂಬಂಧ ಕಾರ್ತಿಕ್ ಶೆಟ್ಟಿ, ಅವರ ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್ ಎಂಬಾತನ ವಿರುದ್ಧ ಎಫ್​ಐ ಆರ್ ದಾಖಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಪೊಲೀಸರಿಂದ ಮುಂಬೈನಲ್ಲಿ ‘ಇಡ್ಲಿ ಗುರು’ ಹೋಟೆಲ್ ಮಾಲೀಕನ ಬಂಧನ..!

https://newsfirstlive.com/wp-content/uploads/2024/02/IDLI-GURU-1.jpg

Load More