newsfirstkannada.com

ಬರೋಬ್ಬರಿ 500 ವರ್ಷದ ಬಳಿಕ ರಾಮ ಜನ್ಮಭೂಮಿಯಲ್ಲೇ ರಾಮಲಲ್ಲಾ ಪ್ರತಿಷ್ಠಾಪನೆ; ಆದರೆ..!

Share :

Published January 18, 2024 at 6:27pm

  ಕೊನೆಗೂ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ

  ಗರ್ಭಗುಡಿ ವೇದಿಕೆಯಲ್ಲೇ 51 ಇಂಚು ಎತ್ತರದ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯ

  ಗರ್ಭಗುಡಿ ಮುಂದೆ ನೂರಾರು ಮಂದಿ ಉತ್ತರ ಪ್ರದೇಶ ಪೊಲೀಸರ ನಿಯೋಜನೆ!

ಕೊನೆಗೂ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಗರ್ಭಗುಡಿಯ ವೇದಿಕೆಯಲ್ಲೇ 51 ಇಂಚು ಎತ್ತರದ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಇನ್ನೂ ಇದರ ಅಧಿಕೃತ ಫೋಟೋ ರಿಲೀಸ್​ ಆಗಿಲ್ಲ.

ಸದ್ಯ ಗರ್ಭಗುಡಿ ಮುಂದೆ ಉತ್ತರ ಪ್ರದೇಶ ಪೊಲೀಸರ ನಿಯೋಜನೆ ಮಾಡಲಾಗಿದೆ. ಫೋಟೋ ತೆಗೆಯಲು ಯಾರಿಗೂ ಇನ್ನೂ ಅವಕಾಶ ಮಾಡಿಕೊಟ್ಟಿಲ್ಲ. ಯಾವುದೇ ಅನಧಿಕೃತ ವ್ಯಕ್ತಿಗಳಿಗೆ ಅವಕಾಶ ನೀಡಿಲ್ಲ. ಬರೋಬ್ಬರಿ 500 ವರ್ಷದ ಬಳಿಕ ರಾಮ ಜನ್ಮಭೂಮಿಯಲ್ಲೇ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಜತೆಗೆ ರಾಮಲಲ್ಲಾ ಮೂರ್ತಿಗೆ ಕಪ್ಪು ಬಟ್ಟೆ ಕಟ್ಟಲಾಗಿದೆ.

ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಅಂದು ಕಣ್ಣಿಗೆ ಕಟ್ಟಿರೋ ಬಟ್ಟೆ ತೆರೆಯುವ ಶಾಸ್ತ್ರ ಆಗಲಿದೆ. ಕನ್ನಡಿ ಮೂಲಕ ರಾಮಲಲ್ಲಾ ಮೂರ್ತಿ ತನ್ನನ್ನೇ ತಾನು ನೋಡಿಕೊಳ್ಳಲಿದೆ.

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇಡೀ ದೇಶಾದ್ಯಂತ ಸಂತರು, ಗಣ್ಯರು ಸೇರಿದಂತೆ 7,000 ಕ್ಕೂ ಹೆಚ್ಚು ಜನ ಅದ್ಧೂರಿ ಉದ್ಘಾಟನೆಗೆ ಹಾಜರಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ ವಿವಿಧ ದೇಶಗಳ 100 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 500 ವರ್ಷದ ಬಳಿಕ ರಾಮ ಜನ್ಮಭೂಮಿಯಲ್ಲೇ ರಾಮಲಲ್ಲಾ ಪ್ರತಿಷ್ಠಾಪನೆ; ಆದರೆ..!

https://newsfirstlive.com/wp-content/uploads/2024/01/Ram-Lalla.jpg

Load More