/newsfirstlive-kannada/media/post_attachments/wp-content/uploads/2025/07/DARSHAN_NEW.jpg)
ಮೂರೇ 3 ಪುಟಗಳಲ್ಲಿ ಲಿಖಿತ ವಾದ ಸಲ್ಲಿಸಬೇಕು ಡಿ ಗ್ಯಾಂಗ್! ಒಂದು ವೇಳೆ ದರ್ಶನ್ ಬೇಲ್ ಕ್ಯಾನ್ಸಲ್ ಆದ್ರೆ ಮುಂದೇನು?, ಮತ್ತೆ ಜೈಲಿಗೆ ಹೋಗುವ ಸ್ಥಿತಿ ಬಂದ್ರೆ ಸಿನಿಮಾಗಳ ಕಥೆಯೇನು?. ರೇಣುಕಾಸ್ವಾಮಿ ಕೇಸಲ್ಲಿ ಜೈಲಿಗೆ ಹೋಗಿ ಆಚೆ ಬಂದ್ಮೇಲೆ ರಿಲ್ಯಾಕ್ಸ್ ಆಗಿದ್ದ ದರ್ಶನ್ ಌಂಡ್ ಗ್ಯಾಂಗ್ಗೆ ಮತ್ತೆ ಢವಢವ ಶುರುವಾಗಿದೆ. ಯಾಕಂದ್ರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆಡಿರೋ ಮಾತುಗಳು ಜಾಮೀನೇ ರದ್ದಾಗಿ ಬಿಡುತ್ತಾ ಎನ್ನುವ ಪ್ರಶ್ನೆಗಳನ್ನ ಹುಟ್ಟಾಕಿದೆ. ಹಾಗಾದ್ರೆ, ಒಂದು ವೇಳೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದಾದ್ರೆ ಡಿಗ್ಯಾಂಗ್ನ ಪರಿಸ್ಥಿತಿ ಹೇಗಿರಲಿದೆ. ಮತ್ತೆ ಜೈಲಿಗೆ ಹೋಗಬೇಕಾಗುತ್ತಾ? ಹೋದ್ರೂ ಕಾನೂನು ಕುಣಿಕೆಯಿಂದ ಮತ್ತೆ ಪಾರಾಗೋಕ್ಕೆ ದರ್ಶನ್ ಮುಂದಿರೋ ಆಪ್ಷನ್ಗಳಾದರೂ ಏನು?.
ಸಿಕ್ಕಾಪಟ್ಟೆ ಟೆನ್ಷನ್. ಇನ್ 10 ದಿನ ಡಿ ಗ್ಯಾಂಗ್ ಟೆನ್ಷನ್ನಲ್ಲೇ ಇರುವಂತೆ ಮಾಡಿದ್ದಾರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು. ವೀಕ್ಷಕರೇ, ಡಿ ಗ್ಯಾಂಗ್ನ ಜಾಮೀನು ರದ್ದು ಕೋರಿ, ಸರ್ಕಾರ ಸಲ್ಲಿಸಿರೋ ಮೇಲ್ಮನವಿ ಅರ್ಜಿಯ ವಿಚಾರಣೆಯ ತೀವ್ರತೆಯೇ ಹಾಗಿತ್ತು ಅಂದ್ರೆ ತಪ್ಪಿಲ್ಲ. ಯಾಕಂದ್ರೆ, ಸುಪ್ರೀಂ ಕೋರ್ಟಲ್ಲಿ ಸರ್ಕಾರದ ಪರ ಹಾಗೂ ದರ್ಶನ್ ಪರ ವಾದ ಪ್ರತಿವಾದಗಳನ್ನ ಸೂಕ್ಷ್ಮವಾಗಿ ಆಲಿಸಿದ ನ್ಯಾಯಮೂರ್ತಿಗಳು, ಹೈಕೋರ್ಟ್ ನೀಡಿರೋ ಜಾಮೀನಿಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದೇ ಪ್ರಕರಣಕ್ಕೆ ಸಿಕ್ಕಿರೋ ಬಿಗ್ ಟ್ವಿಸ್ಟ್. ಹೈಕೋರ್ಟ್ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸೋದ್ರ ಜೊತೆ ಜೊತೆಗೆ ಆಗಿರೋ ಎಲ್ಲಾ ಅನಾಹುತಗಳಿಗೂ ಪವಿತ್ರಾ ಗೌಡಳೇ ಕಾರಣ ಅಂತಲೂ ನ್ಯಾಯಮೂರ್ತಿಗಳು ಹೇಳಿದ್ದು ಇನ್ನೊಂದು ಬಿಗ್ ಟ್ವಿಸ್ಟ್. ಇಷ್ಟೆಲ್ಲಾ ಹೇಳಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ, ದರ್ಶನ್ ಗ್ಯಾಂಗ್ಗೆ ಬೇಲ್ ನೀಡುವಾಗ ಹೈಕೋರ್ಟ್ ಸೂಕ್ತ ವಿವೇಚನೆ ಬಳಸಿಲ್ಲ ಅಂತಾ ಹೇಳಿರೋದು ಈಗ ಡಿ ಅಭಿಮಾನಿಗಳಲ್ಲಿ ಕುತೂಹಲದ ಜೊತೆಗೆ ಆತಂಕದ ಭೂತ ಕಾಡುವಂತೆ ಮಾಡಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದಲೂ ರಿಲೀಫ್ ಪಡ್ಕೊಳ್ಳೋದಕ್ಕೆ ದರ್ಶನ್ ಌಂಡ್ ಟೀಮ್ ಹರಸಾಹಸ ಪಡ್ತಿದೆ. ಅದ್ರಲ್ಲೂ ದರ್ಶನ್ ಭಾರತದಲ್ಲಿ ದಿ ಬೆಸ್ಟ್ ವಕೀಲ ಅನಿಸಿಕೊಂಡಿದ್ದ ಕಪಿಲ್ ಸಿಬಲ್ರನ್ನೇ ತಮ್ಮ ಪರ ವಾದ ಮಾಡೋದಕ್ಕೆ ಆಯ್ಕೆ ಮಾಡಿಕೊಂಡಿದ್ರು. ಆದ್ರೆ, ಅದ್ಯಾಕೋ ಏನೋ, ಹಿರಿಯ ವಕೀಲ ಕಪಿಲ್ ಸಿಬಲ್ ಕೊನೆ ಕ್ಷಣದಲ್ಲಿ ಪ್ರಕರಣದಿಂದ ಹಿಂದೆ ಸರಿದಿದ್ದು ಅಲ್ಲೇ ಸಾಕಷ್ಟು ಪ್ರಶ್ನೆಗಳ ಜೊತೆಗೆ ಕೆಲ ಸುಳಿವುಗಳನ್ನ ಕೊಡ್ತಾ ಹೋಯ್ತು. ಕೊನೆಗೆ ಮತ್ತೊಬ್ಬ ಖ್ಯಾತ ವಕೀಲ ಸಿದ್ಧಾರ್ಥ್ ದವೆ ದರ್ಶನ್ ಪರ ವಾದ ಮಂಡಿಸಲು ಮುಂದೆ ಬಂದ್ರು. ಆದ್ರೆ, ಗುರುವಾರ ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾರವರ ಮುಂದೆ ಸಿದ್ಧಾರ್ಥ್ ದವೆ ಮಂಡಿಸಿದ ವಾದ ತುಂಬಾನೇ ಕಡಿಮೆ ಅಂತಾನೇ ಹೇಳಬಹುದು.
ಯಾಕಂದ್ರೆ, 1 ಗಂಟೆ 40 ನಿಮಿಷಗಳ ಕಾಲ ನಡೆದ ವಾದ ಪ್ರತಿವಾದದಲ್ಲಿ ನ್ಯಾಯಮೂರ್ತಿಗಳು ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂತ್ರಾರ ಕಡೆಯಿಂದ ರೇಣುಕಾಸ್ವಾಮಿ ಕೊಲೆ ಕೇಸ್ನ ಇಂಚಿಂಚೂ ಮಾಹಿತಿ ಪಡ್ಕೊಂಡ್ರು. ಕೊನೆಗೆ 3 ಪುಟಗಳಿಗೆ ಮೀರದಂತೆ ನಿಮ್ಮ ಆರ್ಗೂಮೆಂಟ್ನ ಬರ್ಕೊಡಿ ಅಂತಾ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಪೀಠ ಹೇಳಿದೆ. ಒಂದು ವಾರದೊಳಗೆ ಉಳಿದ ಆರೋಪಿಗಳ ಪರ ವಕೀಲರು 3 ಲಿಖಿತ ವಾದಂಶವನ್ನು ಸಲ್ಲಿಸಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಬಹುಶಃ 10 ದಿನಗಳು ಕಳೆದ್ಮೇಲೆ ಜಡ್ಜ್ಮೆಂಟ್ ಬರಲಿದೆ. ಆದ್ರೆ, ಈಗ ದರ್ಶನ್ ಅಭಿಮಾನಿಗಳಲ್ಲಿ ಕಾಡ್ತಿರೋ ಟೆನ್ಷನ್ ಒಂದೇ, ಒಂದು ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಬೇಲ್ ಕ್ಯಾನ್ಸಲ್ ಮಾಡಿದ್ರೆ ಮುಂದೇನು ಅನ್ನೋದು. ಮುಂದೆ ಏನು ಅನ್ನೋದನ್ನ ಪಾಯಿಂಟ್ ಬೈ ಪಾಯಿಂಟ್ ಇಲ್ಲಿ ವಿವರಿಸಲಾಗಿದೆ.
ಒಂದು ವೇಳೆ ದರ್ಶನ್ ಬೇಲ್ ಕ್ಯಾನ್ಸಲ್ ಆದ್ರೆ ಮುಂದೇನು?
ಸುಪ್ರೀಂಕೋರ್ಟಲ್ಲಿ ದರ್ಶನ್ಗೆ ಬೇಲ್ ಕ್ಯಾನ್ಸಲ್ ಆಯ್ತು ಅಂತಾ ಇಟ್ಕೊಳ್ಳಿ, ಆಗ ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್ಗೆ ಶರಣಾಗದೇ ಬೇರೆ ವಿಧಿ ಇರೋದಿಲ್ಲ. ದರ್ಶನ್ಗೆ ಎಲ್ಲಿದ್ದರೂ ಬಂದು ಸರಂಡರ್ ಆಗೋದಕ್ಕೆ ನ್ಯಾಯಾಲಯ ಕಾಲಾವಕಾಶ ಕೊಡುತ್ತೆ. ಅದು 24 ರಿಂದ 72 ಗಂಟೆ ಇರಬಹುದು ಅಥವಾ ಒಂದು ವಾರ ಕೂಡ ಇರಬಹುದು. ಬೇಲ್ ರದ್ದಾಯ್ತು ಅಂದ್ರೆ ದರ್ಶನ್ ಎಲ್ಲಿದ್ದರೂ ಬಂದು ಪೊಲೀಸರ ಮುಂದೆಯೋ, ಅಥವಾ ನ್ಯಾಯಾಲಯದ ಮುಂದೆಯೋ ಬಂದು ಶರಣಾಗಲೇಬೇಕು. ಒಂದು ವೇಳೆ ಶರಣಾಗಲಿಲ್ಲ ಅಂದ್ರೆ, ಪೊಲೀಸರು ದಾಸನನ್ನ ಮತ್ತೆ ಅರೆಸ್ಟ್ ಮಾಡಬಹುದು ಎಂದು ಹೈಕೋರ್ಟ್ ವಕೀಲ ಸುನೀಲ್ ಕುಮಾರ್ ಹೇಳಿದ್ದಾರೆ.
ಕಾನೂನು ಏನೇ ಹೇಳಿದ್ರೂ ದರ್ಶನ್ ಅದಕ್ಕೆ ತಲೆಬಾಗಿ ನಡೆದುಕೊಂಡ್ರೆ ಒಳ್ಳೇದು ಅನ್ನೋದು ವಕೀಲರು ಹೇಳುವ ಮಾತು. ಇಷ್ಟೇ ಅಲ್ಲ, ಸದ್ಯ, ಮೊನ್ನೆ ಮೊನ್ನೆಯಷ್ಟೇ ದರ್ಶನ್ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಅವರ ಸಿನಿಮಾ ಚಿತ್ರೀಕರಣದ ನಿಮಿತ್ತ ಥಾಯ್ಲೆಂಡ್ಗೆ ತೆರಳಿ ಅಲ್ಲಿ ಜಾಲಿ ಮೂಡ್ನಲ್ಲಿದ್ದರು.
ಸುಪ್ರೀಂ ಕೋರ್ಟ್ನಂತಹ ನ್ಯಾಯಾಲಯಗಳಲ್ಲಿ ಬೇಲ್ ರದ್ಧಾಯ್ತು ಅಂತಾದ್ರೆ ನಿಜಕ್ಕೂ ಕಷ್ಟ. ಯಾಕಂದ್ರೆ, ಎಲ್ಲಾ ರಾಜ್ಯಗಳ ಎಷ್ಟೆಷ್ಟೋ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ಕೊಡೋ ಸುಪ್ರೀಂ ಕೋರ್ಟ್ಗೆ ದರ್ಶನ್ದು ಜಸ್ಟ್ ಒಂದು ಪ್ರಕರಣ ಅಷ್ಟೇ. ಇಡೀ ದೇಶದ ಪ್ರಕರಣಗಳನ್ನ ನೋಡೋ ಸುಪ್ರೀಂ ದರ್ಶನ್ ಪ್ರಕರಣದಲ್ಯಾಕೆ ಇಂಟರೆಸ್ಟ್ ತಗೊಳ್ಳತ್ತೆ ಅಲ್ವಾ? ಸಾಧ್ಯವೇ ಇಲ್ಲ. ಆ ಕಾರಣಕ್ಕೇನೆ ಗುರುವಾರ ನ್ಯಾಯಮೂರ್ತಿ ಪರ್ದಿವಾಲಾ ಇನ್ನೊಂದು ಮಾತು ಹೇಳಿದ್ರು. ವಕೀಲರು ದರ್ಶನ್ ಕರ್ನಾಟಕದಲ್ಲಿ ಫೇಮಸ್ ಅಂತಾ ಹೇಳ್ತಿದ್ದ ಹಾಗೇ, ಇಲ್ಲಿ ಯಾರು ಫೇಮಸ್, ಯಾರು ಫೇಮಸ್ ಅಲ್ಲ ಅನ್ನೋದು ಬೇಡ. ಪ್ರಕರಣದಲ್ಲಿ ಏನೇನು ಸಾಕ್ಷಿಗಳಿವೆ ಹೇಳಿ ಅಂತಾ ಕೇಳಿದ್ದರು. ನ್ಯಾಯಮೂರ್ತಿಗಳ ಒಂದೊಂದು ಮಾತುಗಳೂ ಯಾರೆಷ್ಟೇ ಪ್ರಬಲವಾಗಿದ್ರೂ ಅಷ್ಟೇ, ತಪ್ಪು ತಪ್ಪೇ ಎನ್ನುವಂತಹದ್ದನ್ನ ಸೂಚಿಸುತ್ತಿತ್ತು. ಬೇಲ್ ಕ್ಯಾನ್ಸಲ್ ಆಯ್ತು ಅಂತಾ ಅಂದ್ರೆ, ಪ್ರಕರಣದಲ್ಲಿ ನ್ಯಾಯಾಲಯ ಪ್ರಾಥಮಿಕ ಸಾಕ್ಷ್ಯಗಳನ್ನ ಪರಿಗಣಿಸಿದೆ ಅಂತಾನೇ ಅರ್ಥ. ಜೊತೆಗೆ ಆ ರದ್ದತಿಯ ಆದೇಶ ದರ್ಶನ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿರುವ ರಾಜ್ಯದ ಪೊಲೀಸರಿಗೂ ಮತ್ತಷ್ಟು ಬಲ ತುಂಬೋದ್ರಲ್ಲಿ ಸಂಶಯವೇ.
ಮತ್ತೆ ಜೈಲಿಗೆ ಹೋಗುವ ಸ್ಥಿತಿ ಬಂದ್ರೆ ಸಿನಿಮಾಗಳ ಕಥೆಯೇನು?
ನಾವು ಮೊದಲೇ ಹೇಳಿದಂತೆ ಬೇಲ್ ಕ್ಯಾನ್ಸಲ್ ಆಯ್ತು ಅಂತಾ ದರ್ಶನ್ ಮತ್ತೆ ಸುಪ್ರೀಂ ಕೋರ್ಟಲ್ಲೇ ಬೇಲ್ಗೆ ಅಪ್ಲೈ ಮಾಡಬಹುದು. ಆದ್ರೆ, ಅವ್ರು ಮತ್ತೆ ಜೈಲಿನಲ್ಲಿದ್ದುಕೊಂಡೇ ಹಿಂದೆ ರೀತಿ ಜಾಮೀನಿಗೆ ಕಸರತ್ತು ನಡೆಸಬೇಕಾಗುತ್ತೆ. ಹಾಗೇನಾದ್ರೂ ಆಯ್ತು ಅಂತಾದ್ರೆ, ಎಲ್ಲರಿಗೂ ಒಂದು ಪ್ರಶ್ನೆ ಇದ್ದೇ ಇದೆ. ದರ್ಶನ್ ಜೈಲಿಗೆ ಹೋಗೋ ಪರಿಸ್ಥಿತಿ ಬಂದ್ರೆ, ಸಿನಿಮಾಗಳ ಕಥೆಯೇನು ಅನ್ನೋದು. ಸದ್ಯ, ಕೋರ್ಟ್ನಿಂದ ಅನುಮತಿ ಪಡೆದೇ ತನ್ನ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ದರ್ಶನ್. ತೀರ ಇತ್ತೀಚೆಗೆ ಡೆವಿಲ್ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿತ್ತು. ಹಾಗ್ ನೋಡಿದ್ರೆ ಕೇಳಿ ಬರ್ತಿರೋ ಮಾತೇನಂದ್ರೆ, ದರ್ಶನ್ ಡೆವಿಲ್ ಚಿತ್ರದಲ್ಲಿ ತಮ್ಮ ಪಾತ್ರದ ಎಲ್ಲಾ ಕೆಲಸ ಮುಗಿಸಿದ್ದಾರೆ. ಇಡೀ ಸಿನಿಮಾ ಕಂಪ್ಲೀಟ್ ಆಗಿದೆ ಅನ್ನೋದು. ಸಿಕ್ಕಿರೋ ಮಾಹಿತಿ ಪ್ರಕಾರ ಚಿತ್ರದ ಡಬ್ಬಿಂಗ್ ಕೂಡ ಮುಗಿಸಿದ್ದಾರಂತೆ.
ಹಾಗಾಗಿ, ರೆಗ್ಯೂಲರ್ ಬೇಲ್ ಕ್ಯಾನ್ಸಲ್ ಆಗಿ ಜೈಲಿಗೆ ಹೋದರೂ ಕೂಡ ಸಿನಿಮಾಗೆ ಸಮಸ್ಯೆ ಆಗಲಿಕ್ಕಿಲ್ಲವಂತೆ. ಇನ್ನು, ಡೆವಿಲ್ ಬಿಟ್ರೆ ಸದ್ಯಕ್ಕೆ ದರ್ಶನ್ ಕೈಯಲ್ಲಿ ಯಾವ ಸಿನಿಮಾನೂ ಇಲ್ಲ ಅನ್ನೋದೂ ಕೂಡ ಸಿಕ್ಕಿರೋ ಇನ್ಫಾರ್ಮೇಷನ್. ನಿಮಗ್ ಗೊತ್ತಿರಬಹುದು, ಜೈಲಿನಿಂದ ರಿಲೀಸ್ ಆದ ಹೊಸತರಲ್ಲೇ, ದರ್ಶನ್ ಕೆಲ ನಿರ್ಮಾಪಕರು ಕೊಟ್ಟಿದ್ದ ಅಡ್ವಾನ್ಸ್ಗಳನ್ನ ವಾಪಸ್ ಮಾಡಿದ್ದರು. ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಮಾತ್ರ ಭಾಗಿಯಾಗ್ತಿದ್ದರು. ಅದು ಬಿಟ್ರೆ ತರುಣ್ ಸುಧೀರ್ ಜೊತೆಗೆ ಸಿಂಧೂರ ಲಕ್ಷ್ಮಣ ಸಿನಿಮಾ ಮಾಡ್ತಾರೆ ಎಂಬ ಮಾಹಿತಿ ಇದೆ. ತರುಣ್ ಸುಧೀರ್ ಸಿಂಧೂರ ಮೇಲೆ ಕೆಲಸ ಮಾಡ್ತಾನೇ ಇದ್ದಾರೆ ಎನ್ನುವ ಮಾಹಿತಿನೂ ಸಿಗ್ತಿದೆ. ಬಟ್, ದರ್ಶನ್ ಆಗ್ಲಿ ತರುಣ್ ಆಗ್ಲಿ ಬಗ್ಗೆ ಎಲ್ಲೂ ಹೆಚ್ಚಿಗೆ ಹೇಳಿಕೊಂಡಿಲ್ಲ. ಇವೆಲ್ಲದರ ಜೊತೆಗೆ ದರ್ಶನ್ಗೆ ಈಗ ಮತ್ತೊಂದು ಸಂಕಷ್ಟ ಕೂಡ ಎದುರಾಗೋ ಸಾಧ್ಯತೆ ಕಾಣ್ತಿದೆ.
ಉಗ್ರರ ನಂಟು ಹೊಂದಿದ್ದ ಡಾಕ್ಟರ್ಗೂ, ದರ್ಶನ್ಗೆ ಇತ್ತಾ ಪರಿಚಯ?
ದರ್ಶನ್ಗೆ ಸುಪ್ರೀಂ ಕೋರ್ಟಲ್ಲಿ ಬೇಲ್ ಸಿಗುತ್ತೋ, ಇಲ್ವೋ ಅನ್ನೋದೇ ಅವರ ಅಭಿಮಾನಿಗಳಲ್ಲಿ ಸದ್ಯಕ್ಕಿರೋ ದೊಡ್ಡ ಆತಂಕ. ಹೀಗಿರೋವಾಗಲೇ ಮತ್ತೊಂದು ಸ್ಫೋಟಕ ವಿಚಾರ ಗೊತ್ತಾಗ್ತಿದೆ. ವೀಕ್ಷಕರೇ, ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ತನಿಖಾ ದಳ ಒಂದು ಸ್ಫೋಟಕ ಪ್ರಕರಣ ಭೇದಿಸಿದ್ದರು. ರಾಜ್ಯವೂ ಸೇರಿ ದೇಶದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣ ಅದು. ಆ ಕೇಸ್ಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದಲ್ಲಿ ಶೋಧ ನಡೆಸಿ, ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿ ಸೇರಿ ಮೂವರನ್ನು ಬಂಧಿಸಿದ್ದರು. ಅಲ್ಲಿ ಅರೆಸ್ಟ್ ಆದ್ನಲ್ಲ, ಮನೋವೈದ್ಯ ನಾಗರಾಜನಿಗೂ ದರ್ಶನ್ಗೂ ಜೈಲಿನಲ್ಲಿದ್ದಾಗ ಪರಿಚಯ ಇತ್ತು ಅನ್ನೋ ವಿಚಾರವೀಗ ಬಯಲಾಗಿದೆ. ದರ್ಶನ್ ಜೈಲಿನಲ್ಲಿದ್ದ ವೇಳೆ ಸಾಕಷ್ಟು ಬಾರಿ ನಾಗರಾಜ್ನ ಭೇಟಿಯಾಗಿದ್ರಂತೆ. ಕೈದಿಗಳಿಗೆ ಮೊಬೈಲ್ಗಳನ್ನ ಪೂರೈಕೆ ಮಾಡುತಿದ್ದ ನಾಗರಾಜ್, ದರ್ಶನ್ಗೆ ರಾಜಾತಿಥ್ಯ ಕೊಟ್ಟ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಆ ಶಂಕೆಯ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸರು, ಡಾ.ನಾಗರಾಜ್ ವಿಚಾರಣೆಗೆ ಮುಂದಾಗಿದ್ದರು. ವಿಚಾರಣೆಗೆ ಅನುಮತಿ ಕೋರಿ ಸಕ್ಷಮ ಪ್ರಾಧಿಕಾರದ ಮೊರೆ ಹೋಗಿದ್ದರು. ಅಷ್ಟರಲ್ಲಿ ಎನ್ಐಎ ಬಲೆಗೆ ಜೈಲಿನ ಮನೋವೈದ್ಯ ಬಿದ್ದಿದ್ದಾನೆ. LET ಉಗ್ರ ಟಿ. ನಝೀರ್ಗೆ ನೆರವು ನೀಡಿದ ಆರೋಪ ಇವನ ಮೇಲಿದ್ದು, ಈಗ ದರ್ಶನ್ಗೂ ಇವ್ನಿಗೂ ಪರಿಚಯ ಇತ್ತಾ ಅನ್ನೋದರ ಬಗ್ಗೆಯೂ ತನಿಖೆ ಶುರುವಾದ್ರೂ ಅಚ್ಚರಿಯಿಲ್ಲ.
ಇದನ್ನೂ ಓದಿ: ಅಚ್ಚರಿ ಅನಿಸಿದರೂ ಇದು ಸತ್ಯ.. 1 ವರ್ಷದ ಮಗು ಕಚ್ಚಿದ್ದಕ್ಕೆ ಸ್ಥಳದಲ್ಲೇ ಜೀವ ಬಿಟ್ಟ ನಾಗರ ಹಾವು!
ಕೇಸಲ್ಲಿ ಪವಿತ್ರಾ ಪಾತ್ರದ ಬಗ್ಗೆ ಕಾನೂನು ತಜ್ಞರು ಹೇಳೋದೇನು?
ಹಿಂಗೇ, ದರ್ಶನ್ ಕಥೆಗಳು ಒಂದು ಕಡೆಯಾದ್ರೆ, ಅತ್ತ ಸುಪ್ರೀಂ ಕೋರ್ಟಲ್ಲಿ ನ್ಯಾಯಮೂರ್ತಿಗಳು ಪವಿತ್ರಾ ಗೌಡ ಬಗ್ಗೆ ಆಡಿರೋ ಮಾತುಗಳನ್ನ ಕೇಳ್ತಿದ್ರೆ, ಈಕೆಗೂ ಮತ್ತೊಮ್ಮೆ ಜೈಲಿನ ದಿನಗಳು ಹತ್ತಿರವಾಗ್ತಿವ್ಯಾ ಎನ್ನುವ ಪ್ರಶ್ನೆಗಳು ಹುಟ್ಟದೇ ಇರೋದಿಲ್ಲ. ಯಾಕಂದ್ರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಆಗಿರೋ ಅನಾಹುತಗಳಿಗೆಲ್ಲಾ ಪವಿತ್ರಾ ಗೌಡಾಳೇ ಕಾರಣ ಅಂದುಬಿಟ್ಟಿದ್ದಾರೆ. ಇತ್ತ ಸರ್ಕಾರದ ಪರ ವಕೀಲ ಸಿದ್ಧಾರ್ಥ ಲೂತ್ರಾ ನ್ಯಾಯಮೂರ್ತಿಗಳ ಎದುರು ಪ್ರಕರಣದ ಮತ್ತೊಬ್ಬರು ಪ್ರಮುಖ ಸಾಕ್ಷಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಅದು ಬೇರಾರೂ ಅಲ್ಲ, ಪವಿತ್ರಾ ಗೌಡರ ಆಪ್ತ ಸ್ನೇಹಿತೆಯಾಗಿದ್ದ ಸಮತಾ.
ಪವಿತ್ರಾ ಗೌಡ ಜೈಲಿನಲ್ಲಿದ್ದಾಗ ಆಕೆಯ ಸ್ನೇಹಿತೆ ಸಮತಾ ಬಂದು ಹೋಗ್ತಿದ್ದನ್ನ ನೀವು ಗಮನಿಸರಬಹುದು. ಕೊಲೆ ಪ್ರಕರಣದಲ್ಲಿ ಪೊಲೀಸರು ಸಮತಾರ ಹೇಳಿಕೆ ಕೂಡ ದಾಖಲಿಸಿಕೊಂಡಿದ್ರು, ಆ ಹೇಳಿಕೆಯಲ್ಲಿ ಸಮತಾ, ತಾನು ಪವಿತ್ರಾ ಗೌಡ ಸ್ನೇಹಿತೆ ಅಂತಾ ಹೇಳಿಕೊಂಡಿದ್ರು. ಜೊತೆಗೆ, 2023ರಲ್ಲಿ ನಾನು ಪವಿತ್ರಾಗೌಡ ಮನೆಗೆ ಹೋಗಿದ್ದೆ. ಅಲ್ಲಿ ದರ್ಶನ್ ಬರ್ತ್ ಡೇ ಆಚರಿಸಿದ್ದೇವೆ ಪವನ್ ಪವಿತ್ರಾ ಗೌಡ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ರು. ಒಂದಿನ ದರ್ಶನ್- ಪವಿತ್ರಾ ನಡುವೆ ಕೆಲವೊಂದು ಟೆನ್ಷನ್ ಇತ್ತು, ತನಗೆ ಅಶ್ಲೀಲ ಮೇಸೇಜ್ ಕಳಿಸುತ್ತಿದ್ದವನ್ನು ಬೆಂಗಳೂರಿಗೆ ಕರ್ಕೊಂಡ್ ಬಂದಿದ್ದಾರೆ ಅಂತಾ ಪವಿತ್ರಾ ತಮಗೆ ಹೇಳಿದ್ದನ್ನ ಸಮತಾ ಪೊಲೀಸರ ಮುಂದೆ ಹೇಳಿದ್ದರು. ಆ ಹೇಳಿಕೆಯನ್ನ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂತ್ರಾ ನ್ಯಾಯಮೂರ್ತಿಗಳ ಮುಂದಿಟ್ಟಿದ್ದಾರೆ. ಬಳಿಕ ನ್ಯಾಯಮೂರ್ತಿಗಳು ಪವಿತ್ರಾ ಗೌಡ ಬಗ್ಗೆ ಖಾರವಾಗಿಯೇ ಮಾತನಾಡಿದ್ದಾರೆ. ಪವಿತ್ರಾ ಜೀವನದಲ್ಲಿ ಮಾಡ್ಕೊಂಡಿರೋದಾದ್ರೂ ಏನು ಅಂತೆಲ್ಲಾ ಪ್ರಶ್ನೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ನಲ್ಲೇ ಈ ರೀತಿ ನಡೆದಿರೋವಾಗ, ಪವಿತ್ರಾಗೌಡ ಬೇಲ್ ಮುಂದುವರಿಯೋದು ಅನುಮಾನವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ