/newsfirstlive-kannada/media/post_attachments/wp-content/uploads/2025/01/SIAF-ALI-KHAN.jpg)
ಬಾಲಿವುಡ್​ ನಟ ಸೈಫ್ ಅಲಿಖಾನ್ ಮೇಲೆ ಚಾಕುವಿನ ದಾಳಿಯಾಗಿದ್ದು ಈಗ ದೇಶಾದ್ಯಂತ ಸುದ್ದಿಯಾಗಿದೆ. ಸದ್ಯ ಸೈಫ್ ಅಲಿಖಾನ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಎಂದು ಕೂಡ ವೈದ್ಯರು ಹೇಳಿದ್ದಾರೆ. ಇದರ ಹಿಂದೆಯೇ ಹಲ್ಲೆ ನಡೆದ ಭೀಕರತೆ ಹಾಗೂ ಸೈಫ್ ಅಲಿಖಾನ್ ಸಾವಿನ ಅಂಚಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬಗ್ಗೆಯೂ ಕೂಡ ಮಾಹಿತಿ ನೀಡಿದ್ದಾರೆ.
ಸೈಫ್ ಅಲಿಖಾನ್ ಮೇಲೆ ಒಟ್ಟು 6 ಬಾರಿ ಚಾಕುವಿನಿಂದ ದಾಳಿ ಮಾಡಲಾಗಿದೆ. ಕುತ್ತಿಗೆ ಸೇರಿ ಒಟ್ಟು ಆರು ಕಡೆ ಸೈಫ್ ಮೇಲೆ ದಾಳಿ ನಡೆದಿದೆ. ಈ ಒಂದು ದಾಳಿಯಲ್ಲಿ ಬೆನ್ನುಮೂಳೆಯಿಂದ ಸುಮಾರು 2.5 ಇಂಚು ಉದ್ದವಿರುವ ಚಾಕುವಿನ ತುಂಡನ್ನು ವೈದ್ಯರು ಬರೋಬ್ಬರಿ 5 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ ಎಂದು ಲೀಲಾವತಿ ಆಸ್ಪತ್ರೆಯ ವೈದ್ಯರಾದ ಡಾ ನಿತಿನ್ ನಾರಾಯಣ ಡೆಂಗೆ ತಿಳಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ ಈಗಾಗಲೇ ಸೈಫ್ ಅಲಿಖಾನ್​ರನ್ನ ಐಸಿಯುನಿಂದ ವಿಶೇಷ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ:ಆರೋಪಿ ಪತ್ತೆಗೆ ಸಹಾಯ ಆಗಿದ್ದು ಈ ತಂತ್ರಜ್ಞಾನ.. ಸೈಫ್ ಮೇಲೆ ದಾಳಿ ಮಾಡಿದವನ ಗುರುತಿಸಿದ್ದು ಹೀಗೆ..
ಒಂದು ವಾರದವರೆಗೆ ಯಾರಿಗೂ ಭೇಟಿಗೆ ಅವಕಾಶ ನೀಡಲಾಗಿಲ್ಲ. ಸದ್ಯ ಸೈಫ್ ಆರಾಮಾಗಿ ನಡೆದಾಡುವಷ್ಟು ಚೇತರಿಸಿಕೊಂಡಿದ್ದಾರೆ. ಒಂದು ವೇಳೆ ಚಾಕು ಇನ್ನೊಂದು 2 ಮಿಲಿ ಮೀಟರ್​ನಷ್ಟು ಒಳಗೆ ಹೋಗಿದ್ದರೆ ಸೈಫ್ ಅಲಿಖಾನ್ ಜೀವಕ್ಕೆ ಆಪತ್ತು ಇತ್ತು ಅದೃಷ್ಟವಶಾತ್ ಹಾಗೆ ಆಗಿಲ್ಲ. ಸದ್ಯ ಸೈಫ್ ನಡೆದಾಡಬಲ್ಲರು. ಮೊದಲಿನಷ್ಟು ನೋವು ಈಗ ಇಲ್ಲ ಎಂದು ಡಾ ನಾರಾಯಣ್ ಹೇಳಿದ್ದಾರೆ.
ಇನ್ನು ಲೀಲಾವತಿ ಆಸ್ಪತ್ರೆಯ ಚೀಫ್ ಆಪರೇಟಿಂಗ್ ಆಫೀಸರ್​ ಹೇಳುವ ಪ್ರಕಾರ ಸೈಫ್ ಅಲಿಖಾನ್ ಆಸ್ಪತ್ರೆಗೆ ಬಂದಾಗ ಒಳ್ಳೆ ಸಿಂಹದ ರೀತಿಯೇ ಬಂದರು. ಅವರ ದೇಹವಿಡೀ ರಕ್ತದಿಂದ ತೊಯ್ದಿತ್ತು. ಆದರೂ ಅವರು ಸಿಂಹದಂತೆ ನಡೆದುಕೊಂಡು ಆಸ್ಪತ್ರೆಯ ಒಳಗೆ ಬಂದರು. ಅವರು ನಿಜವಾದ ಹೀರೋ ಎಂದು ಹೇಳಿದ್ದಾರೆ ಒಂದು ವೇಳೆ ಚಾಕು ಇನ್ನು ಸ್ವಲ್ಪ ಒಳಗಡೆ ಹೋಗಿದ್ದಾರೆ ಸೈಫ್ ಸ್ಥಿತಿ ಗಂಭೀರವಾಗಿರುತ್ತಿತ್ತು ಅವರ ಜೀವಕ್ಕೆ ಆಪತ್ತು ಬರುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us