Advertisment

ರೋಹಿತ್​ ಖರೀದಿಗೆ 50 ಕೋಟಿ ರೂಪಾಯಿ ಖರ್ಚು ಮಾಡಲು ರೆಡಿಯಾದ ಎರಡು ಫ್ರಾಂಚೈಸಿ..!

author-image
Ganesh
Updated On
ರೋಹಿತ್​ ಖರೀದಿಗೆ 50 ಕೋಟಿ ರೂಪಾಯಿ ಖರ್ಚು ಮಾಡಲು ರೆಡಿಯಾದ ಎರಡು ಫ್ರಾಂಚೈಸಿ..!
Advertisment
  • ಮುಂಬೈ ಇಂಡಿಯನ್ಸ್​​ ರೋಹಿತ್ ಶರ್ಮಾರ ರಿಲೀಸ್ ಸಾಧ್ಯತೆ
  • ರೋಹಿತ್​​ರನ್ನ ಖರೀದಿಸಲು ಕಾದು ಕೂತಿವೆ ಐಪಿಎಲ್ ಫ್ರಾಂಚೈಸಿಗಳು
  • ಕಳೆದ ಋತುವಿನಲ್ಲಿ ರೋಹಿತ್​ ಅವಮಾನ ಮಾಡಿರುವ ಮುಂಬೈ

ರೋಹಿತ್ ಶರ್ಮಾ ಕ್ರಿಕೆಟ್ ಇತಿಹಾಸದಲ್ಲಿ ಯಶಸ್ವಿ ನಾಯಕರ ಪಟ್ಟಿಗೆ ಸೇರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದುಕೊಂಡಿದೆ.

Advertisment

ಇದರ ಹೊರತಾಗಿಯೂ ಅವರನ್ನು ಕಳೆದ ಋತುವಿನಲ್ಲಿ ನಾಯಕತ್ವದಿಂದ ತೆಗೆದುಹಾಕಲಾಯಿತು. ಈ ವರ್ಷ ಮುಂಬೈ ಇಂಡಿಯನ್ಸ್  ತಂಡದಿಂದ ಕೈಬಿಟ್ಟರೆ ಅವರನ್ನು ಖರೀದಿಸಲು ಬೇರೆ ತಂಡಗಳು ಕೋಟಿ ಕೋಟಿ ಹಣ ಸುರಿಯಲು ಸಿದ್ಧವಾಗಿವೆ. ‘Ro45stan’ ಹೆಸರಿನ Xನಲ್ಲಿ ವೀಡಿಯೋ ಹಂಚಿಕೊಂಡಿದೆ. ಮುಂಬೈ ರೋಹಿತ್ ಅವರನ್ನು ಬಿಡುಗಡೆ ಮಾಡಿದರೆ ದೆಹಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕಾದು ಕೂತಿವೆ. ಈ ಎರಡು ಫ್ರಾಂಚೈಸಿಗಳು ರೋಹಿತ್​​ರನ್ನು ಖರೀದಿಸಲು ಪೈಪೋಟಿ ನಡೆಸಲಿವೆ. ಬರೋಬ್ಬರಿ 50 ಕೋಟಿ ರೂಪಾಯಿ ನೀಡಿ ಖರೀದಿಸಲು ಎರಡೂ ಫ್ರಾಂಚೈಸಿಗಳು ಸಿದ್ಧ ಇವೆ ಎಂದು ಹೇಳಲಾಗಿದೆ.

ರೋಹಿತ್‌ಗೆ ಮುಂಬೈ ಜೊತೆ ಭಾವನಾತ್ಮಕ ಒಡನಾಟ
ಮುಂಬೈ ಜತೆ ರೋಹಿತ್‌ ಸಂಬಂಧ ತುಂಬಾ ಹಳೆಯದು. ಐಪಿಎಲ್​ನಲ್ಲಿ ಡೆಕ್ಕನ್ ಚಾರ್ಜಸ್‌ಗಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲ ಮೂರು ಸೀಸನ್‌ಗಳ ನಂತರ ಮುಂಬೈ ಇಂಡಿಯನ್ಸ್‌ಗೆ ಸೇರಿದರು. ಅಲ್ಪಾವಧಿಯಲ್ಲೇ ತಂಡದ ನಾಯಕರಾದರು. 2014ರಲ್ಲಿ ರೋಹಿತ್ ಸಂಭಾವನೆ 12.50 ಕೋಟಿ ರೂಪಾಯಿ, 2018ರಲ್ಲಿ 15 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

2022 ರಿಂದ 16 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಒಂದು ವೇಳೆ ರೋಹಿತ್ ಶರ್ಮಾ ಹರಾಜಿಗೆ ಬಂದರೆ ಅವರ ಸಂಭಾವನೆ ಮತ್ತಷ್ಟು ಏರಿಕೆ ಆಗುವ ನಿರೀಕ್ಷೆ ಇದೆ. ಮುಂಬೈ ಇಂಡಿಯನ್ಸ್ ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ಮಾಡಿತು. ಇದರಿಂದ ರೋಹಿತ್ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಹಾರ್ದಿಕ್ ಕೂಡ ಟ್ರೋಲ್ ಆಗಿದ್ದರು.

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment